ಮಹಿಳೆಯರಿಗೆ ಅನುಕಂಪ ಬೇಡ ಅವಕಾಶ ಕೊಡಿ ಸಾಧನೆ ಮಾಡಿ ತೋರಿಸುತ್ತಾರೆ: ದೇವರಾಜ್ ಟಿ.ಕಾಟೂರು

ನಂದಿನಿ ಮೈಸೂರು

*🙏ಮಹಿಳೆಯರಿಗೆ ಅನುಕಂಪ ಬೇಡ ಅವಕಾಶ ಕೊಡಿ ಸಾಧನೆ ಮಾಡಿ ತೋರಿಸುತ್ತಾರೆ*🙏
————————————————–

*ಸ್ವಾತಂತ್ರ್ಯ ಹೋರಾಟ,,ಶಿಕ್ಷಣ,ಕ್ರೀಡೆ , ರಾಜಕೀಯ ಹಾಗೂ ಸಾಮಾಜಿಕವಾಗಿ ಸಾಧನೆ ಮಾಡಿರುವ ಸಾಧಕರನ್ನೂ ಮಾದರಿಯಾಗಿ ತೆಗೆದುಕೊಂಡು ಮಹಿಳೆಯರು ತಮ್ಮ ಗುರಿಯನ್ನು ಮುಂದಿಟ್ಟುಕೊಂಡು ಸಾದನೆ ಮಾಡಬೇಕು ಎಂದು ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಮತ್ತು ಮಾರ್ಬಳ್ಳಿ ಗ್ರಾ.ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ದೇವರಾಜ್ ಟಿ.ಕಾಟೂರು* ಹೇಳಿದರು.

ಮೈಸೂರು ತಾಲ್ಲೂಕು ಮಾರ್ಬಳ್ಳಿ ಗ್ರಾಮ ಪಂಚಾಯತಿ ಅವರಣದಲ್ಲಿ *ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ( RLHP) ಮೈಸೂರು* ಮತ್ತು *ಮಾರ್ಬಳ್ಳಿ ಗ್ರಾಮ ಪಂಚಾಯಿತಿ* ಸಹಯೋಗದಲ್ಲಿ ನಡೆದ ತಾಲ್ಲೂಕು ಮಟ್ಟದ *ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ* ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ತಮ್ಮಲ್ಲಿರುವ ಕೀಳರಿಮೆಯನ್ನು ತೊಡೆದು ಹಾಕಿ ಮಹಿಳೆ ಕೀಳಲ್ಲಾ ಶ್ರೇಷ್ಠ ಅನ್ನುವುದನ್ನು ತಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಎತ್ತಿ ತೋರಿಸಬೇಕು,ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದದಲ್ಲಿ ನೀಡಿರುವ ಹಕ್ಕುಗಳನ್ನು ಮತ್ತು ಸವಲತ್ತುಗಳನ್ನು ಬಳಸಿಕೊಂಡು ಸಮಾಜದಲ್ಲಿ ಉತ್ತಮ ಸಾಧನೆ ಮಾಡಬೇಕು.

ಭಾರತದ ನೆಲದಲ್ಲಿ ಇತಿಹಾಸವನ್ನು ನೋಡಿದಾಗ ತ್ರೇತ್ರಾಯುಗ,ದ್ವಾಪರಯುಗ ಹಾಗೂ ಕಲಿಯುಗದಲ್ಲಿಯೂ ಮಹಿಳೆಯರಿಗೆ ಶ್ರೇಷ್ಠ ಸ್ಥಾನ ನೀಡಿ ಗೌರವಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಪ್ರಸ್ತುತ ದಿನದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ತನ್ನದೆಯಾದ ಉನ್ನತ ಸಾಧನೆಗಳನ್ನು ಮಾಡಿ ಪುರುಷ ಮತ್ತು ಮಹಿಳೆಯರಲ್ಲಿ ಸಮಾನತೆಯ ಸಂಕೇತವಾಗಿ ಮಾದರಿಯಾಗಿದ್ದಾರೆ ಒಬ್ಬ ಪುರುಷನ ಸಾಧನೆಯ ಹಿಂದೆ ಒಬ್ಬ ಮಹಿಳೆ ಇರುವ ಹಾಗೇ ಮಹಿಳೆಯ ಸಾಧನೆ ಹಿಂದೆ ಒಬ್ಬ ಪುರುಷ ಕೂಡ ಇದ್ದೆ ಇರುತ್ತಾನೆ ಹಾಗಾಗಿ ಪುರುಷ ಮತ್ತು ಮಹಿಳೆ ಒಂದು ವಾಹದ ಚಕ್ರಗಳಿದಂತೆ ಇಬ್ಬರು ಕೂಡ ಕುಟುಂಬ ಆಗಿರಬಹುದು,ರಾಜ್ಯ ಅಥವಾ ರಾಷ್ಟ್ರದ ಅಭಿವೃದ್ಧಿಯಾಗಿರಬಹುದು ಇದಕ್ಕೆ ಇಬ್ಬರು ಕಾರಣರಾಗಿರುತ್ತಾರೆ ಇಲ್ಲಿ ಪುರುಷ ಮೇಲು ಮಹಿಳೆ ಕೀಳು ಅನ್ನೋ ಪ್ರಶ್ನೆನೇ ಇಲ್ಲಾ.

ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹಿಳೆಯರಿಗೆ ಸಾಕಷ್ಟು ಸವಲತ್ತುಗಳನ್ನು, ಸಾಲ ಸೌಲಭ್ಯಗಳನ್ನು ನೀಡುತ್ತಿವೆ ಅವುಗಳನ್ನು ಸದುಪಯೋಗ ಪಡಿಸಿಕೊಂಡು ಸ್ವಯಂ ಉದ್ಯೋಗಿಗಳಾಗಿ ಆರ್ಥಿಕವಾಗಿ ಸಬಲರಾಗಬೇಕು *ಸರ್ಕಾರಗಳು ಮಹಿಳೆಯರಿಗೆ ಅನುಕಂಪ ತೋರಿಸದೆ ಅವಕಾಶಗಳನ್ನು ನೀಡಿದರೆ ಪುರುಷರಿಗಿಂತ ದೊಡ್ಡ ಸಾಧನೆಗಳನ್ನು ಮಾಡುತ್ತಾರೆ* ಅಷ್ಟೇ ಅಲ್ಲದೆ ಮಹಿಳೆಯರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ದೌರ್ಜನ್ಯ ಮತ್ತು ಶೋಷಣೆಗಳನ್ನು ತಡೆಯಬೇಕು,*ಅತ್ಯಾಚಾರಿಗಳಿಗೆ ತಕ್ಷಣವೇ ಗಲ್ಲುಗೇರಿಸುವಂತಹ ಕಾನೂನುಗಳನ್ನು ಜಾರಿಗೆ ತರಬೇಕು* ಅದು ಬಿಟ್ಟು ಎಲ್ಲಾ ಜಯಂತಿಗಳಂತೆ ಇಲ್ಲೂ ಕೂಡ ಭಾಷಣಕ್ಕೆ ಮಾತ್ರ ಸೀಮಿತವಾಗದೆ ಮಹಿಳೆಯರಿಗೆ ರಕ್ಷಣೆ ನೀಡಿ,ಶಿಕ್ಷಣ,ಉದ್ಯೋಗ, ಕ್ರೀಡೆ ಹಾಗೂ ಜೀವನೋಪಾಯ ಕ್ಷೇತಗಳಲ್ಲಿ ಸ್ವಾವಲಂಬಿಗಳನ್ನಾಗಿ ಸಬಲೀಕರಣಗೊಳಿಸಿದಾಗ ಮಾತ್ರ ಮಹಿಳಾ ಜಯಂತಿ ಆಚರಣೆಗೆ ಸಾರ್ಥಕತೆ ಸಿಗುತ್ತದೆ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಈ ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷರಾದ ದೇವರಾಜು ವಹಿಸಿದ್ದರು, ಮೈಸೂರು ವಿವಿ ವಿಶ್ರಾಂತ ಜಾನಪದ ಪ್ರಾಧ್ಯಾಪಕರಾದ ಶ್ರೀಮತಿ ಡಾ!! ಜಯಲಕ್ಷಿ ಸೀತಾಪುರ ಅವರು ಮುಖ್ಯಭಾಷಣ ಮಾಡಿದರು,ಮುಖ್ಯ ಅತಿಥಿಗಳಾಗಿ ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮಮ,ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಜ್ಯೋತಿ, ಆರ್.ಎಲ್ ,ಎಚ್.ಪಿ.ನಿರ್ದೇಶಕರಾದ ಶ್ರೀಮತಿ ಸರಸ್ವತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು,ಗ್ರಾ.ಪಂ.ಸದಸ್ಯರುಗಳಾದ ಶ್ರೀ ನಿಂಗನಾಯಕ,,ಶ್ರೀ ಬಸವರಾಜು,ಶ್ರೀ ನಾಗರಾಜು,ಶ್ರೀಮತಿ ರತ್ನಮ್ಮ,ಶ್ರೀಮತಿ ಪದ್ಮ ಶಿವಣ್ಣ,ಶಿವಮ್ಮ, ಬಸಮ್ಮ,ಅರಸಿನಕೆರೆ ಶಿವಮ್ಮ ಹಾಗೂ ತಾಲ್ಲೂಕಿನ ಹಲವು ಗ್ರಾಮಗಳಿಂದ ಭಾಗವಹಿಸಿದ ಮಹಿಳಾ ಸಂಘಗಳ ಪ್ರತಿನಿದಿಗಳು,ಆರೋಗ್ಯ ಕಾರ್ಯಕರ್ತೆಯರು ಭಾಗವಹಿಸಿದರು.

Leave a Reply

Your email address will not be published. Required fields are marked *