ಮೈಸೂರು:25 ಅಕ್ಟೋಬರ್ 2021
ನ@ದಿನಿ
ಇಟ್ಟಿಗೆ ಗೂಡಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಆರತಿ ಬೆಳಗುವುದರೊಂದಿಗೆ ಗುಲಾಬಿ ಹೂ ನೀಡುವ ಮೂಲಕ ಸ್ವಾಗತಿಸಲಾಯಿತು.
ಸೋಮವಾರ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಮೈಸೂರು ದಕ್ಷಿಣ ವಲಯ ಬಿಇಓ ರಾಮಾರಾಧ್ಯ ಅವರು ಮಕ್ಕಳಿಗೆ ಗುಲಾಬಿ ಹೂ ನೀಡಿದರೆ ಸ್ಥಳೀಯ ಪಾಲಿಕೆ ಸದಸ್ಯೆ ಛಾಯಾದೇವಿಯವರು ಶಾಲಾ ಶಿಕ್ಷಕಿಯೊಂದಿಗೆ ಆರತಿ ಬೆಳಗುವ ಮೂಲಕ ಸ್ವಾಗತಿಸಿದರು.
ಮಕ್ಕಳ ಸ್ವಾಗತಕ್ಕಾಗಿ ಇಡೀ ಶಾಲೆಯನ್ನು ಮುಖ್ಯ ಶಿಕ್ಷಕ ಮಾಲಂಗಿ ಸುರೇಶ್ ಮತ್ತು ಸಿಬ್ಬಂದಿ ತಳೀರು ತೋರಣಗಳಿಂದ ಅಲಂಕರಿಸಿದ್ದರು. ನಜರ್‌ಬಾದ್ ಪೊಲೀಸ್ ಠಾಣೆಯ ಮುಖ್ಯ ಪೇದೆ ಚನ್ನಬಸಪ್ಪ ಅವರು, ಮಕ್ಕಳಿಗೆ ಪೆನ್ನುಘಿ, ಪೆನ್ಸಿಲ್,ನೋಟ್ ಪುಸ್ತಕ ವಿತರಿಸಿದರೆ, ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆಯವರು ಸಿಹಿಯೊಂದಿಗೆ ವಾಟರ್ ಬಾಟಲ್ ನೀಡಿದರು.
ಪಾಲಿಕೆ ಸದಸ್ಯೆ ಛಾಯಾದೇವಿ ಶಾಲೆ ಮುಖ್ಯಶಿಕ್ಷಕ ಮಾಲಂಗಿ ಸುರೇಶ್,ಡಯಟ್ ಉಪನ್ಯಾಸಕಿ ಜಯಂತಿ, ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆಯ ಮಹಾವೀರ್, ಗಾಂಧೀ, ಜಂಬೂ, ಬಿಆರ್‌ಪಿ ಶ್ರೀಕಂಠ ಶಾಸೀಘಿ, ಸಿಆರ್‌ಪಿ ರಾಜು, ಶಾಲೆಯ ಶಿಕ್ಷಕರಾದ ಅನ್ನಪೂರ್ಣ, ಆಶಾಬಾಯಿ, ಸುನೀತಾ ಇದ್ದರು.