ಪಾದಯಾತ್ರೆ ಮೂಲಕ ಜನರ ಸಮಸ್ಯೆ ಆಲಿಸಿ, ಸ್ಥಳ ಪರಿಶೀಲಿಸಿದ ಶಾಸಕ ಎಲ್.ನಾಗೇಂದ್ರ

ಮೈಸೂರು:14 ಜನವರಿ 2022

ನಂದಿನಿ

ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿಸಿರುವ ಶಾಸಕರ ವಿವೇಚನಾ ಎಸ್.ಎಫ್.ಸಿ ವಿಶೇಷ ಅನುದಾನ ಒಟ್ಟು ರೂ.65.00 ಲಕ್ಷ ಅನುದಾನದಲ್ಲಿ ಕೈಗೊಳ್ಳಲಿರುವ ರಸ್ತೆ ಅಭಿವೃದ್ದಿ ಚರಂಡಿ ನಿರ್ಮಾಣ, ಒಳಚರಂಡಿ ನಿರ್ಮಾಣ ಕಾಮಗಾರಿ, ಲೋಕೋಪಯೋಗಿ ಇಲಾಖೆಯ ಅನುದಾನ ರೂ. 11.23 ಲಕ್ಷ, ಮೈಸೂರು ಮಹಾನಗರ ಪಾಲಿಕೆಯ ಎಸ್.ಎಫ್.ಸಿ ಯೋಜನೆಯಡಿ ರೂ. 37.00 ಲಕ್ಷ ಆರಾಧನಾ ಯೋಜನೆಯಡಿ ದೇವಾಲಯಗಳ ಅಭಿವೃದ್ದಿ ಗಾಗಿ ಬಿಡುಗಡೆ ಮಾಡಲಾದ ಅನುದಾನದಲ್ಲಿ ಕೈಗೊಂಡ ಅಭಿವೃದ್ದಿ ಕಾಮಗಾರಿಗಳು, ಸ್ಥಳೀಯ ಶಾಸಕರ ಪ್ರದೇಶಾಭಿವೃದ್ದಿ ಅನುದಾನದಲ್ಲಿ ಬಿಡುಗಡೆಯಾದ ಒಟ್ಟು ಮೊತ್ತ ರೂ.49.00 ಲಕ್ಷಗಳಲ್ಲಿ ವಿವಿಧ ಸಮುದಾಭವನ ಅಭಿವೃದ್ದಿ, ಆಟೋ ನಿಲ್ದಾಣಗಳ ಮೇಲ್ಚಾವಣಿ ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು, ಈ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಶೀಘ್ರವಾಗಿ ಕಾಮಗಾರಿಯನ್ನು ಗುಣಮಟ್ಟ ಕಾಪಾಡಿಕೊಂಡು ನಿರ್ವಹಿಸುವಂತೆ ನಿರ್ದೇಶನ ನೀಡಿದರು.

ಪಡುವಾರಹಳ್ಳಿಯಲ್ಲಿ ಕೆಲವು ಅಡ್ಡರಸ್ತೆಗಳಲ್ಲಿ ಕಾವೇರಿ ಕುಡಿಯುವ ನೀರು ಸರಬರಾಜು ಸಮರ್ಪಕವಾಗಿಲ್ಲವೆಂದು ಸಾರ್ವಜನಿಕರು ಮನವಿ ಮಾಡಲಾಗಿ ಶಾಸಕರು ಕಾವೇರಿ ನೀರು ಸರಬರಾಜು ಮಾಡಲು ಅಗತ್ಯ ಕ್ರಮವಹಿಸುವಂತೆ ವಿಲಾಸ ನೀರು ಸರಬರಾಜು ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೆಲವು ನಿವಾಸಿಗಳು ನೀರಿನ ಬಿಲ್ಲಿನಲ್ಲಿ ಅತಿ ಹೆಚ್ಚಿನ ಮೊತ್ತದ ಬಾಕಿ ಬರುತ್ತಿದ್ದು, ಈ ಮೊತ್ತದಲ್ಲಿ ಬಡ್ಡಿಯನ್ನು ಮನ್ನಾ ಮಾಡಿಸಿದಲ್ಲಿ ಸಂಪೊರ್ಣ ಬಾಕಿ ಮೊತ್ತವನ್ನು ಪಾವತಿಸುವುದಾಗಿ ತಿಳಿಸಲಾಗಿ ಈ ಕುರಿತಂತೆ ಖುದ್ದು ನಾನೇ ಸರ್ಕಾರಕ್ಕೆ ಪತ್ರ ಬರೆದಿದ್ದು, ಬಡ್ಡಿ ಮನ್ನಾಪ್ರಸ್ತಾವನೆಯು ಸರ್ಕಾರದ ಹಂತದಲ್ಲಿ ತೀರ್ಮಾನ ವಾಗಲಿರುವುದರಿಂದ ಅಲ್ಲಿಯವರೆಗೆ ಪ್ರತಿ ಮಾಹೆ ಸಾಧ್ಯವಾದಷ್ಟು ಮೊತ್ತವನ್ನು ಪಾವತಿಸಿ ದಂಡವನ್ನು ತಪ್ಪಿಸಿಕೊಳ್ಳುವಂತೆ ಸಲಹೆ ನೀಡಿದರು.

ಕೆಲವು ನಿವಾಸಿಗಳು ಮಹಾನಗರ ಪಾಲಿಕೆಯ ಕಸ ವಿಲೇವಾರಿ ಸಿಬ್ಬಂದಿಗಳು ಪ್ರತಿನಿತ್ಯ ಕಸ ಪಡೆಯಲು ಬರುವುದಿಲ್ಲವೆಂದು, ಚರಂಡಿಗಳಲ್ಲಿ ಹೂಳು ತುಂಬಿರುವ ಕುರಿತು ದೂರು ನೀಡಲಾಗಿ ಸ್ಥಳದಲ್ಲಿ ಹಾಜರಿದ್ದ ಆರೋಗ್ಯ ನಿರೀಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಸ ವಿಲೇವಾರಿಗೆ ಕ್ರಮ ವಹಿಸಲು ಹಾಗೂ ಹೂಳು ತುಂಬಿರುವ ಚರಂಡಿಗಳ ಮೇಲ್ಚಾವಣಿಯನ್ನು ತೆರವುಗೊಳಿಸಿ ಈ ಪ್ರದೇಶದ ಸಂಪೂರ್ಣ ಹೂಳನ್ನು ತೆಗೆದು ಸರಾಗವಾಗಿ ನೀರು ಹರಿಯುವಂತೆ ಹಾಗೂ ಎಲ್ಲಾ ತೆರೆದ ಚರಂಡಿಗಳಿಗೆ ಕಾಂಕ್ರೀಟ್ ಮುಚ್ಚಳವನ್ನು ಅಳವಡಿಸಲು 4 ದಿವಸಗಳ ಒಳಗಾಗಿ ಕ್ರಮವಹಿಸಲು ಸೂಚನೆ ನೀಡಿದರು.

ಪಡುವಾರಹಳ್ಳಿ-ವಿನಾಯಕನಗರ ಪ್ರದೇಶದಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಒಳಚರಂಡಿ ಕಾಮಗಾರಿಗಳಲ್ಲಿ ಅನೇಕ ಕಡೆಗಳಲ್ಲಿ ಹೆಗ್ಗಣ ಕಾಟದಿಂದಾಗಿ ಕುಸಿದಿದ್ದು, ಈ ಒಳಚರಂಡಿಗಳ ಸಂಪೂರ್ಣ ಸಮೀಕ್ಷೆ ನಡೆಸಿ ಒಂದು ಡಿ.ಪಿ.ಆರ್ ತಯಾರಿಸಿ ಎಲ್ಲಾ ಒಳ ಚರಂಡಿಗಳ ಸುತ್ತ ಕಾಂಕ್ರೀಟ್ ನಿಂದ ವೈಜ್ಞಾನಿಕವಾಗಿ ಸಧೃಡಗೊಳಿಸಲು ಕ್ರಮವಹಿಸುವಂತೆ ಈ ಕಾಮಗಾರಿಗೆ ಅಗತ್ಯವಾದ ಅಂದಾಜು ಅನುದಾನವನ್ನು ತಮ್ಮ ನಿಧಿಯಿಂದ ಬಿಡುಗಡೆಗೊಳಿಸುವುದಾಗಿ ಸ್ಥಳದಲ್ಲೇ ಆದೇಶ ನೀಡಿದರು.

ಪಡುವಾರಹಳ್ಳಿಯಲ್ಲಿ ಪಶುಪಾಲನಾ ಇಲಾಖೆಗೆ ಮಾನ್ಯ ಶಾಸಕರ ಪರಿಶ್ರಮದಿಂದ ಮಂಜೂರು ಮಾಡಿಸಿರುವ 70*80 ಅಡಿ ನಿವೇಶನದಲ್ಲಿ ಸ್ವಂತ ಕಟ್ಟಡವಿಲ್ಲದ ಈ ಸಂಸ್ಥೆಗೆ ಮೈಸೂರು ಮಹಾನಗರ ಪಾಲಿಕೆಯ ಸಿ.ಎಸ್.ಆರ್ ಅಥವಾ ಇನ್ನಾವುದೇ ಅನುದಾನದಲ್ಲಿ ಅಗತ್ಯ ಕೊಠಡಿಗಳ ಕಟ್ಟಡವೊಂದನ್ನು ನಿರ್ಮಾಣ ಮಾಡಲು ಜರೂರು ಅಂದಾಜು ಪಟ್ಟಿ ತಯಾರಿಸಿ ಮುಂದಿನ ಕ್ರಮವಹಿಸುವಂತೆ ಉಪ ಆಯುಕ್ತರು (ಅಭಿವೃದ್ದಿ) ರವರಿಗೆ ಸೂಚನೆ ನೀಡಿದರು.

ಈ ಹಿಂದೆ ಪಾದಯಾತ್ರೆ ನಡೆಸಿದ ಸಮಯದಲ್ಲಿ ಸೂಚನೆ ನೀಡಲಾಗಿದ್ದ ಕಾಲೋನಿಯಲ್ಲಿರುವ ಡಾ: ಬಿ.ಆರ್. ಅಂಬೇಡ್ಕರ್ ಭವನದ ದುರಸ್ತಿ ಕಾಮಗಾರಿಗೆ ಈ ಗಾಗಲೇ ತಯಾರಿಸಲಾಗಿರುವ ಅಂದಾಜು ಪಟ್ಟಿಯ ಕಾಮಗಾರಿಗಳನ್ನು ಪರಿಶೀಲಸಿ ಕೂಡಲೇ ಈ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು ಅಂದಾಜು ಪಟ್ಟಿಗೆ ಅನುಮೋದನೆ ನೀಡುವಂತೆ ಉಪಾಯುಕ್ತರು (ಅಭಿವೃದ್ದಿ) ರವರಿಗೆ ಸೂಚನೆ ನೀಡಿದರು.

ಪಡುವಾರಹಳ್ಳಿ ಬಸವನಗುಡಿ ಕಲ್ಯಾಣ ಮಂಟಪದ ಹಿಂಬಾಗದ ರಸ್ತೆಯಲ್ಲಿ ಯು.ಜಿ.ಡಿ ಪೈಪ್ ಲೈನ್ ಹಾಳಾಗಿದ್ದು, ಈ ರಸ್ತೆಯಲ್ಲಿರುವ ಮನೆಗಳ ಒಳಚರಂಡಿ ಪೈಪ್ ನೀರನ್ನು ತೆರೆದ ಮೋರಿಗೆ ಬಿಟ್ಟು ಅತ್ಯಂತ ದುರ್ವಾಸನೆ ಬೀರುತ್ತಿರುವುದಾಗಿ ದೂರು ನೀಡಿದ ನಿವಾಸಿಗಳ ದೂರನ್ನು ಆಲಿಸಿ ಸ್ಥಳ ಪರಿಶೀಲನೆ ನಡೆಸಿ ಲೈನನ್ನು ಹೊಸದಾಗಿ ಅಗತ್ಯ ಪ್ರಮಾಣದ ಅಳತೆಯಲ್ಲಿ ಮರು ಅಳವಡಿಕೆಗಾಗಿ ಅಗತ್ಯ ಅಂದಾಜುಪಟ್ಟಿ ತಯಾರಿಸಿ ಈ ಕಾಮಗಾರಿಗೆ ತುರ್ತಾಗಿ ಅನುಮೋದನೆ ನೀಡುವಂತೆ ಸೂಚಿಸಿದರು.

ಪಡುವಾರಹಳ್ಳಿ ಪ್ರದೇಶದಲ್ಲಿ ಅನೇಕ ಕಡೆಗಳಲ್ಲಿ ಬೀದಿ ದೀಪಗಳು ಉರಿಯದೇ ವಿದ್ಯುತ್ ಬಲ್ಬಗಳನ್ನು ಬದಲಾವಣೆ ಮಾಡದಿರುವುದನ್ನು ಗಮನಿಸಿ ಕೂಡಲೇ ಎಲ್.ಇ.ಡಿ ಬಲ್ಬಗಳನ್ನು ಅಳವಡಿಸಲು ಹಾಗೂ ವಾಲುತ್ತಿರುವ ಕಂಬಗಳನ್ನು ಬದಲಾವಣೆ ಮಾಡಲು ಮತ್ತು ಶ್ರೀ ಪಡುವಾರಹಳ್ಳಿ ಎಂ ರಾಮಕೃಷ್ಣರವರು ನೀಡಿದ ದೂರಿನಂತೆ ಮಹಾರಾಣಿ ಕಾಲೇಜಿನ ವಿಧ್ಯಾರ್ಥಿ ನಿಯಲಯ ಪಕ್ಕದ ರಸ್ತೆಯಲ್ಲಿ ರಾತ್ರಿ ವೇಳೆಯಲ್ಲಿ ವಿದ್ಯುತ್ ದೀಪಗಳಿಲ್ಲದೆ ಕತ್ತಲಿನಿಂದ ಕೂಡಿದ್ದು ಈ ರಸ್ತೆ ಕೂಡಲೇ ಅಗತ್ಯ ಪ್ರಮಾಣದ ಕಂಬಗಳನ್ನು ಪ್ರತಿಷ್ಠಾಪಿಸಿ ವಿದ್ಯುತ್ ದೀಪಗಳನ್ನು ಅಳವಡಿಸಲು ಕ್ರಮಬಹಿಸುವಂತೆ ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಗಳಿಗೆ ಮಹಾನಗರಪಾಲಿಕೆಯ ವಿದ್ಯುತ್ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡದರು.

ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜಿನ ಮುಂದೆ ಪುಂಡುಹುಡುಗರು ದ್ವಿಚಕ್ರವಾಹನದಲ್ಲಿ ವೀಲಿಂಗ್ ಮಾಡುತ್ತಿದ್ದು, ಕಾಲೇಜು ಹೆಣ್ಣು ಮಕ್ಕಳನ್ನು ಚುಡಾಯಿಸುವುದು ಕಂಡುಬರುತ್ತಿರುವುದಾಗಿ ಸಾರ್ವಜನಿಕರು ನೀಡಿದ ದೂರಿನಂತೆ, ಸ್ಥಳದಲ್ಲಿಯೇ ಹಾಜರಿದ್ದ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯ ನಿರೀಕ್ಷಕರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿ ಈ ಪ್ರದೇಶಗಳಲ್ಲಿ ಹೆಚ್ಚಿನ ಗಸ್ತು ತಿರುಗಲು ವ್ಯವಸ್ಥೆ ಮಾಡುವಂತೆ ಹಾಗೂ ಈ ರೀತಿಯ ಘಟನೆಗಳು ಪುನರಾವರ್ತನೆಯಾಗದಂತೆ ಕ್ರಮವಹಿಸಲು ಸೂಚನೆ ನೀಡಿದರು.

ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಈ ವಾರ್ಡ್ ಪ್ರದೇಶಗಳಲ್ಲಿ ಈಗಾಗಲೇ ಅನುಮೋದನೆಗೊಂಡಿರುವ ರಸ್ತೆ ಅಭಿವೃದ್ದಿ ಕಾಮಗಾರಿಗಳನ್ನು ಶೀಘ್ರವಾಗಿ ಪ್ರಾರಂಭಿಸಲು ಕ್ರಮವಹಿಸುವಂತೆ ಸೂಚನೆ ನೀಡಿದರು.

ಪಾದಯಾತ್ರೆಯ ಸಮಯದಲ್ಲಿ ರಸ್ತೆಗಳನ್ನು ಒಳಚರಂಡಿ ಕಾಮಗಾರಿ ನಿರ್ವಹಿಸಲು ತೆಗೆಯಲಾದ ಗುಂಡಿಗಳನ್ನು ಸರಿಯಾದ ಕ್ರಮದಲ್ಲಿ ಮುಚ್ಚದೇ ಅನೇಕ ಕಡೆ ಹಾಗೆಯೇ ಚಪ್ಪಡಿಗಳನ್ನು ಇಟ್ಟಿರುವುದನ್ನು ಗಮನಿಸಿದ ಶಾಸಕರು ಸ್ಥಳದಲ್ಲಿ ಹಾಜರಿದ್ದ ಉಪಾಯುಕ್ತರು (ಅಭಿವೃದ್ದಿ) ಹಾಗೂ ಒಳಚರಂಡಿ ವಿಭಾಗದ ಸ.ಕಾ.ಇಂ  ಮಧುಕರ್ ರವರಿಗೆ ಸೂಚನೆ ನೀಡಿ ರಸ್ತೆಯನ್ನು ಯತಾಸ್ಥಿತಿಗೆ ತರಲು ಕ್ರಮವಹಿಸಬೇಕೆಂದು ಇಲ್ಲವಾದಲ್ಲಿ ಶಿಸ್ತು ಕ್ರಮಕ್ಕಾಗಿ ಶಿಫಾರಸು ಮಾಡಲಾಗುವುದೆಂದು ಸೂಚಿಸಿದರು. ಈ ಕುರಿತಂತೆ ಮಹಾನಗರ ಪಾಲಿಕೆಯ ವಲಯ ಕಚೇರಿ-04 ರ ಸಹಾಯಕ ಆಯುಕ್ತ ಶ್ರೀಮತಿ ಚಂದ್ರಮ್ಮ ರವರಿಗೆ ಈ ಕುರಿತು ನಿಗಾವಹಿಸಿ ಸಮಸ್ಯೆ ಪರಿಹರಿಸಲು ಕ್ರಮವಹಿಸುವಂತೆ ಸೂಚನೆ ನೀಡಿದರು.

ಇಂದಿನ ಪಾದಯಾತ್ರೆಯಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ  ನಮ್ರತಾ ರಮೇಶ್,  ಚಿಕ್ಕವೆಂಕಟು, ಮಹಾನಗರಪಾಲಿಕೆ ಅಭಿವೃದ್ದಿ ಉಪ ಆಯುಕ್ತರಾದ ಮಹೇಶ್, ಭಾ.ಜ.ಪ ಅಧ್ಯಕ್ಷರಾದ  ಸೋಮಶೇಖರರಾಜು, ರಾಜ್ಯ ಪರಿಷತ್ ಸದಸ್ಯ ನಂಜಪ್ಪ, ಮಾಜಿ ಮಹಾನಗರಪಾಲಿಕೆ ಸದಸ್ಯರಾದ ಶ್ರೀರಾಮ್, ಬಿ.ಎಲ್.ಎ-1 ದಿನೇಶ್ ಗೌಡ, ವಾರ್ಡ್ ಅಧ್ಯಕ್ಷ ಆಟೋಮಂಜು, ಪ್ರಧಾನ ಕಾರ್ಯದರ್ಶಿ, ಪುನೀತ್ & ರಮೇಶ್, ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಶ್ರೀ ಎಸ್.ಬಿ.ಶಿವು, ಆರ್. ಪ್ರಕಾಶ್, ಈ.ಬಸವರಾಜು, ವೇಣು, ಗೋಪಾಲ, ಡಿ.ಶಂಭುಲಿಂಗ, ಆಟೋ ಚಲುವ, ಗಿರೀಶ್, ಸ್ವಾಮಿ, ದಶರಥ, ತಬಲ ರಾಮಣ್ಣ,  ಸುಧಾ ಭೋರಪ್ಪ, ಎಸ್.ಸಿ.ಮೋರ್ಚಾ ನಾಗಾರಾಜು, ಲಿಂಗಣ್ಣ, ಯುವಮೋರ್ಚಾ ಅಧ್ಯಕ್ಷ ಸಚಿನ್, ಮತ್ತು ಬಿಜೆಪಿ ಕಾರ್ಯಕರ್ತರು ಹಾಗೂ ಮಹಾನಗರಪಾಲಿಕೆ ವಲಯ ಕಚೇರಿ-4 ಸಹಾಯಕ ಆಯುಕ್ತ ಚಂದ್ರಮ್ಮ, ಇಂಜಿನಿಯರುಗಳು, ಆರೋಗ್ಯ ನಿರೀಕ್ಷಕರು, ಚೆಸ್ಕಾಂ ಅಧಿಕಾರಿಗಳು, ಕೊಳಗೇರಿ ಅಭಿವೃದ್ದಿ ಮಂಡಳಿ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ವಾಣಿವಿಲಾಸ ಅಧಿಕಾರಿಗಳು ಸೇರಿದಂತೆ ಎಂ.ಎಸ್. ಪ್ರವೀಣ್ ಕುಮಾರ್ ಹಾಜರಿದ್ದರು.

Leave a Reply

Your email address will not be published. Required fields are marked *