ಮೈಸೂರು:11 ಜುಲೈ 2022
ನಂದಿನಿ ಮೈಸೂರು
ಮೈಸೂರಿನಲ್ಲಿ ಇಂದು
ನಗರಾಭಿವೃದ್ಧಿ ಪ್ರಾಧಿಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ತನ್ವೀರ್ ಸೇಠ್ ಹಾಗೂ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಚಾಲನೆ ನೀಡಿದರು.
ಬನ್ನಿಮಂಟಪದ ಮುಖ್ಯ ರಸ್ತೆಯಲ್ಲಿ ನಡೆದ ಗುದ್ಧಲಿ ಪೂಜೆ ಕಾಮಗಾರಿ ಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ 8 ಕೋಟಿ 40 ಲಕ್ಷ ರೂ. ಮೌಲ್ಯದಲ್ಲಿ ಎ ಕೈಗಾರಿಕೆ ಬಡಾವಣೆಯ ಜೋಡಿ ತೆಂಗಿನ ಮರದ ರಸ್ತೆಯಿಂದ ಮಳೆ ನೀರಿನ ಚರಂಡಿವರೆಗೆ ರಸ್ತೆ ಅಭಿವೃದ್ಧಿ ಮತ್ತು ಮಳೆ ನೀರು ಚರಂಡಿ ಕಾಮಗಾರಿಗಳಿಗೆ ಶಾಸಕ ತನ್ವೀರ್ ಸೇಠ್ ಗುದ್ದಲಿ ಪೂಜೆ ನೆರವೇರಿಸಿದರು.
ಎನ್.ಆರ್.ಮೊಹಲ್ಲಾದಲ್ಲಿ ಸ್ಮಶಾನದಲ್ಲಿರುವ ಖಾಲಿ ಮತ್ತು ಅದರ ಹಿಂದೆ ಇದ್ದ ಸನ್ನಿವೇಷ ಜನರ ಮನಸ್ಸಿನಲ್ಲಿದೆ.ಅಲ್ಲಿಗೆ
ಜೋಡಿ ರಸ್ತೆ ಮಾಡಿ ಉಳಿದ ಜಾಗವನ್ನ ಸ್ಮಾಶಾನಕ್ಕೆ ಸೇರಿಸಿ ಕಾಂಪೌಡ್ ನಿರ್ಮಾಣಕ್ಕೆ ಚಾಲನೆ ನೀಡಿದ್ದೇವೆ. ದೇವನೂರು ಕೆರೆಯಲ್ಲಿ ಮಳೆನೀರಿನ ಚರಂಡಿ ಅಭಿವೃದ್ಧಿಗೆ 5 ಕೋಟಿ,
ಉದಯಗಿರಿ,ರಾಜೀವ್ ನಗರ,ರಿಂಗ್ ರೋಡ್ ಅಭಿವೃದ್ಧಿಗೆ ಚಾಲನೆ ನೀಡಿದ್ದೇವೆ.ಸರ್ಕಾರದ ಅನುಮೋದನೇ ನಗರ ಪಾಲಿಕೆ
ನಗರಾಭಿವೃದ್ಧಿ ಪ್ರಾಧಿಕಾರ ನಗರಾಭಿವೃದ್ಧಿ ಸಹಕಾರದೊಂದಿಗೆ ಏಕ ಕಾಲದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದೇವೆ.ಉಳಿದ ಯರಗನಹಳ್ಳಿಯಲ್ಲಿ ಮಳೆ ನೀರಿನ ಚರಂಡಿ,ಶಿಕ್ಷಕರ ಕಾಲೋನಿ,ಶಕ್ತಿ ನಗರ ,ರಾಜ್ ಕುಮಾರ್ ರಸ್ತೆ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಚಾಲನೆ ನೀಡುತ್ತೇನೆ ಎಂದರು.
ಚುನಾವಣಾ ಸಮೀಪಿಸುತ್ತಿದ್ದಂತೆ ಮಾತುಗಳು ಆರಂಭವಾಗುತ್ತದೆ.ಮಹಾರಾಣಿ ಪದವಿ ಕಾಲೇಜಿಗೆ 2 ಕಾಲ್ ಎಕರೆ ಜಮೀನನ್ನ ಕಾಲೇಜು ಶಿಕ್ಷಣ ಇಲಾಖೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆದು ಹಸ್ತಾಂತರ ಮಾಡಿದ್ದೇವೆ. ಇಜಾಮಿಯ ಹೆಣ್ಣು ಮಕ್ಕಳ ಶಾಲೆಗೆ ಆಗಬೇಕು ಅಂತ ಸರ್ಕಾರಕ್ಕೆ ಮನವಿ ಮಾಡಿದ್ದೇನೆ.
ಈ ಭಾಗದ ಮಕ್ಕಳಿಗೆ ಪ್ರಾಥಮಿಕದಿಂದ ಉನ್ನತ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು ಎಂದರು.
ಮುಡಾ ಆಯುಕ್ತ ಎಚ್.ಎಸ್.ದಿನೇಶ್, ಉಪ ಮಹಾಪೌರ ಅನ್ವರ್ ಬೇಗ್ , ಸೈಯದ್ ಇಕ್ಬಲ್, ಜೆಡಿಎಸ್ ಮುಖಂಡ ಶಾಹೀದ್, ಶೌಕತ್ ಆಲಿ ಖಾನ್ ಇನ್ನಿತರರು ಉಪಸ್ಥಿತರಿದ್ದರು.