ನಂದಿನಿ ಮೈಸೂರು
ಹಳ್ಳಿಹಕ್ಕಿ ವಿಶ್ವನಾಥ್ ವಿರುದ್ಧ ಬಿಜೆಪಿ ವಕ್ತಾರ ಮೋಹನ್ ಕಿಡಿಕಾರಿದ್ದಾರೆ.
ಮೋದಿಗೆ ಎಸ್.ಎಲ್ ಭೈರಪ್ಪರವರಿಗೆ ಪ್ರಶಸ್ತಿ ಸಿಕ್ಕಿದ್ದಕ್ಕೆ ಅಭಿನಂದನೆ. ಓಲೈಕೆ ಮಾಡಬೇಡಿ ನಿಮಗೆ ಜ್ಞಾನ ಪೀಠ ಬರುತ್ತೆ ಎಂದಿದ್ದ ವಿಶ್ವನಾಥ್ ವಿರುದ್ಧ ಬಿಜೆಪಿ ವಕ್ತಾರ ಮೋಹನ್ ಕಿಡಿಕಾರಿದ್ದಾರೆ.
ನಗರದ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮೋಹನ್ ಮಾತನಾಡಿ ಎಸ್.ಎಲ್ ಭೈರಪ್ಪನವರ ಬಗ್ಗೆ ವಿಶ್ವನಾಥ್ ಆ ರೀತಿ ಮಾತನಾಡಬಾರದು.ಪ್ರಶಸ್ತಿ ಬಂದಮೇಲೆ ಸರ್ಕಾರಕ್ಕೆ ಹಾಗೂ ಮೋದಿಗೆ ಅಭಿನಂದನೆ ಹೇಳಿದ್ದಾರೆ.ಅದನ್ನೇ ಓಲೈಕೆ ಎಂದು ಹೇಳಿರುವುದು ತಪ್ಪು.ವಿಶ್ವನಾಥ್ ರನ್ನು ಹಳ್ಳಿಹಕ್ಕಿ ಅನ್ನುತ್ತಾರೆ.ಆ ಹಕ್ಕಿ ಕೆಲಸವೇ ಮರದಿಂದ ಮರಕ್ಕೆ ಹಾರುವುದು.ಮೊದಲು ಕಾಂಗ್ರೆಸ್ ಅಲ್ಲಿ ಎಲ್ಲವನ್ನು ಅನುಭವಿಸಿ ಆ ಪಕ್ಷ ಬಿಟ್ಟರು.ಜೆಡಿಎಸ್ ಸೇರಿ ಅಲ್ಲಿ ಕೂಡ ಸಲ್ಲದೆ ಬಿಜೆಪಿಗೆ ಬಂದ್ರು.ಈಗ ಮತ್ತೆ ಕಾಂಗ್ರೆಸ್ ಕಡೆ ಮುಖ ಮಾಡಿ ಇಲ್ಲ ಸಲ್ಲದ ಹೇಳಿಕೆ ಕೊಡುತ್ತಿದ್ದಾರೆ.ಯಡಿಯೂರಪ್ಪರನ್ನು ಕಾಡಿಬೇಡಿ ಸಾಹಿತಿ ಕೋಟದಲ್ಲಿ ಎಂ.ಎಲ್.ಸಿ ಆದ್ರೂ.ಈಗ ಬಿಜೆಪಿಯಲ್ಲಿ ಟಿಕೆಟ್ ಇಲ್ಲ ಎಂಬುದನ್ನು ಅರಿತು ಸಿದ್ದರಾಮಯ್ಯ ಓಲೈಕೆ ಮಾಡುತ್ತಿದ್ದಾರೆ.ಅವರೇ ಹೇಳಿರುವಂತೆ ಮೊದಲು ಬಿಜೆಪಿ ಬಿಟ್ಟು ಹೋಗಲಿ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಹೇಶ್ ರಾಜೇ ಅರಸ್ ಸೇರಿದಂತೆ ಬಿಜೆಪಿ ಮುಖಂಡರು ಹಾಜರಿದ್ದರು.