ನಂದಿನಿ ಮೈಸೂರು
ಶ್ರೀ ಲಕ್ಷ್ಮೀಕಾಂತ ಸ್ವಾಮಿಯ ಉತ್ಸವದ ಮೆರವಣಿಗೆಯ ಮೂಲಕ ವಿಷ್ಣು ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮೈಸೂರು,ಶ್ರೀ ಲಕ್ಷ್ಮೀಕಾಂತಸ್ವಾಮಿ ದೇವಸ್ಥಾನದಲ್ಲಿ ಮೂರನೇ ಕಾರ್ತಿಕ ಸೋಮವಾರದ ಪ್ರಯುಕ್ತ ವಿಷ್ಣು ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ
ಪರಮಪೂಜ್ಯ ಜಗದ್ಗುರು ಡಾ. ಶಿವರಾತ್ರಿ ದೇಶಿ ಕೇಂದ್ರ ಮಹಾ ಸ್ವಾಮಿಜಿಗಳು, ಶ್ರೀ ಶ್ರೀ ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಚಾಲನೆ ನೀಡಲಾಯಿತು.
ಇಂದು ಕಾರ್ತಿಕ ಮಾಸ, ಕೃಷ್ಣ ಪಕ್ಷವಾದ ಇಂದು ಬೆಳಿಗ್ಗೆ 7 ಗಂಟೆಗೆ ಅಭಿಷೇಕ, ವಿಶೇಷ ಅಲಂಕಾರ, ಸಂಜೆ: 1-30 ಗಂಟೆಗೆ ನಿದರ್ಶನ ಹೋಮ ನಂತರ 5-30, ಗಂಟೆಗೆ ಪೂರ್ಣಾಹುತಿ ಮಾಡಿ ವಿಷ್ಣು ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಲಾಯಿತು.
ಇದೆ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಅಂತರಾಳದಲ್ಲಿರುವ ಕಿಚ್ಚನ್ನು ಆರಿಸಿ ವಿಷ್ಣು ಲಕ್ಷ ದೀಪೋತ್ಸವ ಹಚ್ಚುವ ಮೂಲಕ ಜಗತ್ತಿಗೆ ಮನುಷ್ಯ ಬೆಳಕಾಗಿ ಬದುಕಬೇಕು ಎಂದು ಜನಸಮೂಹಕ್ಕೆ ಪ್ರವಚನ ನೀಡಿದರು ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಬನ್ನೂರಿನ ಸಮಾಜಸೇವಕರು ಹಾಗೂ ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಡಾ. ಮಹೇಂದ್ರ ಸಿಂಗ್ ಕಾಳಪ್ಪನವರು ಈ ರೀತಿ ಮಠ ಮಂದಿರಗಳಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ವಿಷ್ಣು ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ನಮ್ಮ ಆಚಾರ ವಿಚಾರ ಸಂಸ್ಕೃತಿಯನ್ನು ಇವತ್ತಿನ ಯುವ ಪೀಳಿಗೆ ತಿಳಿದುಕೊಂಡಂತಾಗುತ್ತದೆ ಹಾಗಾಗಿ ಸ್ವಾಮೀಜಿಯವರ ನೇತೃತ್ವದಲ್ಲಿ ನಾವೆಲ್ಲರೂ ವಿಷ್ಣು ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನಮ್ಮೆಲ್ಲರ ಪುಣ್ಯ ಎಂದು ಮಾತನಾಡಿದರು.
ಇದೆ ವೇಳೆ ಕಾರ್ಯಕ್ರಮದಲ್ಲಿ ಮೈಸೂರು ಆದಿಚುಂಚನಗಿರಿ ಸಂಸ್ಥಾನ ಮಠದ ಸೋಮೇಶ್ವರನಾಥ ಸ್ವಾಮೀಜಿ , ಶ್ರೀ ಮುಕ್ತಿದಾನಂದಾಜೀ ಮಹಾರಾಜ್, ಶ್ರೀ ಶಿವಾನಂದಪುರಿ ಸ್ವಾಮೀಜಿ. ಶ್ರೀ ಪುರುಷೋತ್ತಮನಾಥ ಸ್ವಾಮೀಜಿ, ಶ್ರೀ ಷಡಕ್ಷರೀ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಚಂದ್ರನಾಥ ಸ್ವಾಮೀಜಿ, ಶ್ರೀ ಸೋಮೇಶ್ವರನಾಥ ಸ್ವಾಮೀಜಿ,ಮಾಜಿ ಶಾಸಕ ಮಾದೇಗೌಡ,ಎಲ್. ನಾಗೇಂದ್ರ,
ಗುಂಡಪ್ಪಗೌಡ,ಪ್ರೊ ಎಂ ಕೃಷ್ಣೇಗೌಡ,ಬನ್ನೂರಿನ ವ್ಯವಸ್ಥಾಪಕರಾದ ಆನಂದ್ ಗೌಡ, ಅಶ್ವಥ್, ಉಮಾಶಂಕರ್,ಸಮಾಜಸೇವಕರಾದ ಮಹೇಂದ್ರ ಸಿಂಗ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.