ಅ. ೩೦ ರಂದು ಕಲ್ಬುರ್ಗಿಯಲ್ಲಿ ನಡೆಯುವ ವಿರಾಟ್ ಹಿಂದುಳಿದ ಸಮಾವೇಶ:ಜೋಗಿ ಮಂಜು

ನಂದಿನಿ ಮೈಸೂರು

ಅ. ೩೦ ರಂದು ಕಲ್ಬುರ್ಗಿಯಲ್ಲಿ ನಡೆಯುವ ವಿರಾಟ್ ಹಿಂದುಳಿದ ಸಮಾವೇಶಕ್ಕೆ ಮೈಸೂರಿನಿಂದ 500 ಕ್ಕೂ ಹೆಚ್ಚು ಮಂದಿ ತೆರಳುವುದಾಗಿ
ಮೈಸೂರು ಓಬಿಸಿ ನಗರ ಘಟಕದ ಮೋರ್ಚಾ ಅಧ್ಯಕ್ಷ ಜೋಗಿ ಮಂಜು ತಿಳಿಸಿದರು.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು
ಬಿಜೆಪಿ ಒಂದು ಹಿಂದುಳಿದವರ ಪಕ್ಷ.ರಾಜ್ಯದಲ್ಲಿ ಹಿಂದುಳಿದ ವರ್ಗಗಳಕ್ಕೆ ಸೇರಿದ ೬ ರಿಂದ ೭ ಜನ ಮಂತ್ರಿಗಳಿದ್ದಾರೆ.
ಜೊತೆಗೆ ದೇಶದ ನೆಚ್ಚಿನ ಪ್ರಧಾನಿ ಮೋದಿ ಅವರೂ ಕೂಡ ಒಬ್ಬ ಹಿಂದುಳಿದ ವರ್ಗದಿಂದ ಬಂದತವರು.
ಅವರು ಇಂದು ವಿಶ್ವ ಗುರುವಾಗಿದ್ದಾರೆ.
ಬಿಜೆಪಿ ಎಂದರೆ ಅದು ಬ್ಯಾಕ್ ವರ್ಡ್ ಜನತಾ ಪಾರ್ಟಿ ಅಂಥ ಹೇಳಹುದು.ಈ ಸಮಾವೇಶಕ್ಕೆ ರಾಜ್ಯದ ೩೨೧ ಮಂಡಲಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ.ಸಮಾವೇಶದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ, ಬಿಎಸ್ವೈ, ಸೇರಿದಂತೆ ನಾಡಿನ ಗಣ್ಯರು ಭಾಗವಹಿಲಿದ್ದಾರೆ.
ಈ ಸಮಾವೇಶದ ಮೂಲಕ ಹಿಂದುಳಿದ ವರ್ಗಗಳ ಬಲ ಪ್ರದರ್ಶನ ಮಾಡಬೇಕು.
ಈ ಸಮಾವೇಶಕ್ಕೆ ಗ್ರಾಮೀಣ ಪ್ರದೇಶ ಹೊರತು ಪಡಿಸಿ ಮೈಸೂರು ನಗರ ಪ್ರದೇಶದಿಂದಲೇ ೫೦೦ ಕ್ಕೂ ಹೆಚ್ಚು ಜನ ಸ್ವಂತ ಖರ್ಚಿನಲ್ಲಿ ಹೋಗುತ್ತಿದ್ದೇವೆ.
ನಾಳೆ ರೈಲು ಮತ್ತು ಸ್ವಂತ ವಾಹನಗಳ ಮೂಲಕ ಹೊರಡಲಿದ್ದೇವೆ ಎಂದರು.

ಸುದ್ದಿಗೋಷ್ಟಿಯಲ್ಲಿ ಒಬಿಸಿ ಅಧ್ಯಕ್ಷ ಜೋಗಿಮಂಜು,ನಗರ ಪ್ರಧಾನ ಕಾರ್ಯದರ್ಶಿ ಮಣಿರತ್ನಂ,ಗೋಪಾಲ್,ಮಾಧ್ಯಮ ಸಂಚಾಲಕ ಮಹೇಶ್ ರಾಜ್ ಅರಸ್,ವಕ್ತಾರ ಕೇಬಲ್ ಮಹೇಶ್ ಹಾಜರಿದ್ದರು.

Leave a Reply

Your email address will not be published. Required fields are marked *