ನಂದಿನಿ ಮೈಸೂರು
*’ವೀರಪುತ್ರ’ನಾದ ಅಗ್ನಿಸಾಕ್ಷಿ ಸಿದ್ದಾರ್ಥ್…ಚಾಕಲೇಟ್ ಹೀರೋ ವಿಜಯ್ ಸೂರ್ಯ ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್ ಗಿಫ್ಟ*
ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಮನೆ ಮನ ಗೆದ್ದಿದ್ದ ವಿಜಯ್ ಸೂರ್ಯ ವೀರಪುತ್ರನಾಗಿದ್ದಾರೆ. ಅಂದರೆ ವಿಜಯ್ ಹುಟ್ಟುಹಬ್ಬದ ಅಂಗವಾಗಿ ಅವರು ನಟಿಸುತ್ತಿರುವ ಹೊಸ ಸಿನಿಮಾ ವೀರಪುತ್ರ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಉದ್ದ ಕೂದಲು ಬಿಟ್ಟು, ರಡಗ್ ಅವತಾರದಲ್ಲಿ ಚಾಕಲೇಟ್ ಹೀರೋ ಕಾಣಿಸಿಕೊಂಡಿದ್ದಾರೆ.
ಡಾ.ದೇವರಾಜ್.ಎಸ್ ವೀರಪುತ್ರ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಎರಡನೇ ಹೆಜ್ಜೆ. ಈ ಹಿಂದೆ ದೇವರಾಜ್ ಸಪ್ಲಿಮೆಂಟರಿ ಎಂಬ ಚಿತ್ರ ನಿರ್ದೇಶಿಸಿದ್ದರು. ಮೆಡಿಕಲ್ ಮಾಫಿಯಾ ಹಾಗೂ ಫ್ಯಾಮಿಲಿ ರಿವೇಜ್ ಕಥಾಹಂದರ ಹೊಂದಿರುವ ವೀರಪುತ್ರ ಸಿನಿಮಾಗೆ ದೇವರಾಜ್ ನಿರ್ದೇಶನದ ಜೊತೆಗೆ ಕಥೆ ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ. ಸಂಪ್ಲಿಮೆಂಟರಿ, ಧೀರಸಾಮ್ರಾಟ್ ಸಿನಿಮಾಗಳನ್ನು ನಿರ್ಮಿಸಿದ್ದ ಗುರು ಬಂಡಿ ಈ ಚಿತ್ರಕ್ಕೆ ಹಣ ಹಾಕಿದ್ದಾರೆ.
ಸ್ಟೈಲೀಶ್ ಸ್ಟಾರ್ ವಿಜಯ್ ಸೂರ್ಯ ಜೋಡಿಯಾಗಿ ಲೇಖಚಂದ್ರ ನಟಿಸುತ್ತಿದ್ದು, ಉಮಾಶ್ರೀ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಂದ್ರಶೇಖರ್ ಬಂಡಿಯಪ್ಪ ಸಂಭಾಷಣೆ, ಜೂಡಾ ಸ್ಯಾಂಡಿ ಸಂಗೀತ, ಸಿ. ರವಿಚಂದ್ರನ್ ಸಂಕಲನ, ಉದಯ್ ಆದಿತ್ಯ ಛಾಯಾಗ್ರಹಣ, ಪ್ರಮೋದ್ ಮರವಂತೆ ಸಾಹಿತ್ಯ ವೀರಪುತ್ರ ಚಿತ್ರಕ್ಕಿದೆ. ಬೆಂಗಳೂರು, ಹೈದ್ರಾಬಾದ್ ನಲ್ಲಿ 60ರಷ್ಟು ಶೂಟಿಂಗ್ ನಡೆಸಲಾಗಿದ್ದು, ಉಳಿದ ಭಾಗದ ಚಿತ್ರೀಕರಣಕ್ಕೆ ಮುಂದಿನ ತಿಂಗಳಿನಿಂದ ಕಿಕ್ ಸ್ಟಾರ್ಟ್ ಸಿಗಲಿದೆ. ಇನ್ನುಳಿದ ತಾರಾಬಳಗದ ಬಗ್ಗೆ ಶೀಘ್ರದಲ್ಲಿಯೇ ಚಿತ್ರತಂಡ ಮತ್ತಷ್ಟು ಅಪ್ ಡೇಟ್ ಕೊಡಲಿದೆ.
ಇಷ್ಟಕಾಮ್ಯ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದ ವಿಜಯ್ ಸೂರ್ಯ ಸದ್ಯ ಪ್ರೇಮಲೋಕ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈಗ ವೀರಪುತ್ರನಾಗಿ ಮತ್ತೆ ಬೆಳ್ಳಿಪರದೆಯಲ್ಲಿ ಮಿನುಗಲು ಸಜ್ಜಾಗ್ತಿದ್ದಾರೆ.