ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹರಿಪ್ರೀಯಾ ವಶಿಷ್ಠಸಿಂಹ

ನಂದಿನಿ ಮೈಸೂರು

ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ರವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸಾಂಪ್ರದಾಯಿಕ ಹಾಗೂ ಶಾಸ್ತ್ರೋಕ್ತವಾಗಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಯದಲ್ಲಿ ಸಿಂಹಪ್ರಿಯಾ ಮದುವೆ ಶುಭಲಗ್ನದಲ್ಲಿ ನೆರವೇರಿತು‌.ಮದುವೆಗಾಗಿ ಹೂವಿನಿಂದ ಅತ್ಯಾಕರ್ಷಕ ದ್ವಾರ ಸಿಂಗರಿಸಲಾಗಿತ್ತು.ಸಿಂಹಪ್ರೀಯಾ ಮದುವೆ ಉಡುಗೆಯಲ್ಲಿ ಮಿಂಚುತ್ತಿದ್ದರು. ಮದುವೆಗೆ ಸಂಬಂಧಿಕರು ಸೇರಿದಂತೆ ಆಪ್ತರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಒಳಗೆ ಹೊರಗಿನವರಿಗೆ ಬಿಡದೆ ತಡೆಯಲು ಬೌನ್ಸರ್ಸ್ ಗಳ ಸೆಕ್ಯುರಿಟಿ ನಿಯೋಜನೆ ಮಾಡಲಾಗಿತ್ತು.

ಈ ವೇಳೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಡಾಲಿ ಧನಂಜಯ ಸೇರಿದಂತೆ ಹಲವು ನಟ ನಟಿಯರು ಭಾಗಿಯಾಗಿ ನೂತನ ವಧು- ವರನಿಗೆ ಆಶೀರ್ವದಿಸಿದರು.

Leave a Reply

Your email address will not be published. Required fields are marked *