ನಂದಿನಿ ಮೈಸೂರು
ಜೇನುಗೂಡು ಫಿಲಂಸ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ” ವಾಸಂತಿ ನಲಿದಾಗ ಚಿತ್ರ ಇದೇ ತಿಂಗಳು ಬಿಡುಗಡೆ ಆಗಲಿದೆ ಎಂದು ಚಿತ್ರ ತಂಡ ಭರವಸೆ ನೀಡಿದೆ.
ಕಳೆದ ಎರಡು ವರ್ಷಗಳಿಂದ ಚಿತ್ರೀಕರಣ ಮಾಡಲಾಗಿದ್ದು ಹೊಸ ಹೊಸ ಯುವ ಪ್ರತಿಭೆಗಳೊಂದಿಗೆ ಈ ಚಿತ್ರ ನಿರ್ಮಾಣವಾಗಿದೆ. ನಾಯಕ ನಟ ರೋಹಿತ್ ಶ್ರೀಧರ್, ನಟಿ ಭಾವನಾ ಶ್ರೀನಿವಾಸ್, ಜೀವಿತ ವಸಿಷ್ಠ, ಧನಂಜಯ್ ಇದ್ದಾರೆ.
ಈ ಚಿತ್ರಕ್ಕೆ ಜೇನುಗೂಡು ಶ್ರೀಧರ್ ಬಂಡವಾಳ ಹೂಡಿದ್ದು ರವೀಂದ್ರ ವಂಶಿ ಆಕ್ಷನ್ ಕಟ್ ಹೇಳಿದ್ದಾರೆ, ನೃತ್ಯ ಸದಾ ಆಚಾರ್,ಸಾಹಸ ಜಾಗ್ವಾರ್ ಸಣ್ಣಪ್ಪ, ಛಾಯಾಗ್ರಹಣ ಪ್ರಮೋದ್ ಭಾರತೀಯ ಅವರದು.ಚಿತ್ರವು ಇದೇ ತಿಂಗಳು ರಾಜ್ಯದ್ಯಂತ ಬಿಡುಗಡೆಯಾಗಲಿದ್ದು ಜಯಣ್ಣ- ಭೋಗೇಂದ್ರ ಫಿಲಂಸ್ ಹಂಚಿಕೆ ಜವಾಬ್ದಾರಿಯನ್ನು ಹೊಂದಿದ್ದಾರೆ.
ಇದು ನನ್ನ ಮೊದಲ ಸಿನಿಮಾ. ಕಾಲೇಜು ವಿದ್ಯಾರ್ಥಿಗಳ ಪ್ರೀತಿ ಪ್ರೇಮ, ತಂದೆ ತಾಯಿಗಳ ಆದರ್ಶಗಳನ್ನು ಒಳಗೊಂಡ ಮನಮುಟ್ಟುವ ಕಥಾಧಾರಿತ ಚಲನಚಿತ್ರವಾಗಿದೆ.
ಖ್ಯಾತ ಹಾಸ್ಯ ನಟ ಸಾಧು ಕೋಕಿಲ, ಮಿಮಿಕ್ರಿ ಗೋಪಿ, ಕುರಿ ಬಾಂಡ್ ರಂಗ, ಪಾವಗಡ ಮಂಜು, ಹಾಗೂ ಬಿಗ್ ಬಾಸ್ ವಿನೋದ್ ಗೊಬ್ಬರಗಾಲ ಸಾಯಿ ಕುಮಾರ್, ಸುಧಾರಣಿ, ರಘುಪತಿ ಭಟ್ ಮುಂತಾದವರು ಅಭಿನಯಿಸಿದ್ದಾರೆ.ಹಾಸನ ಅರಕಲಗೂಡು ಸಕಲೇಶಪುರ ಮುಂತಾದ ಸುಂದರ ಹೊರಾಂಗಣ ಸ್ಥಳಗಳಲ್ಲಿ ಚಿತ್ರೀಕರಣಗೊಂಡು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.ಪ್ರತಿಯೊಬ್ಬರೂ ಕುಟುಂಬ ಸಮೇತರಾಗಿ ಕುಳಿತು ವೀಕ್ಷಿಸಬಹುದಾದ ವರ್ಣ ರಂಜಿತ ಚಲನಚಿತ್ರವಾಗಿದೆ.ಸಿನಿ ಪ್ರೀಯರು ಯುವಪ್ರತಿಭೆಗಳಿಗೆ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ಈ ಚಿತ್ರದಲ್ಲಿ ಮೂರು ಹಾಡುಗಳಿದ್ದು ಕೇಳ್ರಪ್ಪೋ ಕೇಳಿ ಎನ್ನುವ ಜನಪ್ರಿಯ ಹಾಡು ಸಾಹಿತಿ ಗೌಸ್ ಪೀರ್ ರಚಿಸಿದ್ದು ಈಗಾಗಲೇ ಬಿಡುಗಡೆಗೊಂಡಿದೆ.
ಮತ್ತೊಂದು ಹಾಡನ್ನು ಯೋಗರಾಜ್ ಭಟ್ ಸಾಹಿತ್ಯದಲ್ಲಿ ಮುಂಜಾನೆಯಿಂದ ಇಳಿ ಸಂಜೆವರೆಗೆ ಎನ್ನುವ ಯುಗಳ ಗೀತೆ ರಚಿಸಿದ್ದಾರೆ.
ಮತ್ತೊಂದು ಪ್ರತಿಯೊಬ್ಬರ ಕಾಲೇಜು ದಿನಗಳನ್ನು ನೆನಪಿಸುವ ಕಾಲೇಜಿಗೆ ಕಾಲು ಇಟ್ಟರೆ ಕನಸುಗಳು ನೂರು ಎನ್ನುವ ಹಾಡು ಡಾಕ್ಟರ್ ನಾಗೇಂದ್ರ ಪ್ರಸಾದ್ ರಚಿಸಿದ್ದಾರೆ.