3.0 ಮರ್ಡರ್ ಮಿಸ್ಟ್ರಿಗೆ ಆ್ಯಕ್ಷನ್ ಕಟ್ ಹೇಳಿದ ಇಂದ್ರಜೀತ್, ಅ.೧೪ರಂದು ರಿಲೀಸ್

ನಂದಿನಿ ಮೈಸೂರು

ಮೂವರು ಯುವಕರು ಹಾಗೂ ಯುವತಿ ಯೊಬ್ಬಳ ಸುತ್ತ ನಡೆಯುವ ಕ್ರೈಂ, ಥ್ರಿಲ್ಲರ್ ಕಥಾನಕ ಹೊಂದಿರುವ ಚಿತ್ರ “3.O”. ಸದ್ದುಗದ್ದಲವಿಲ್ಲದೆ ಚಿತ್ರೀಕರಣ ಮುಗಿಸಿ, ಅ.೧೪ರಂದು ತೆರೆಗೆ ಬರಲು ಸಜ್ಜಾಗಿರುವ ಈ ಚಿತ್ರಕ್ಕೆ ಯುವಪ್ರತಿಭೆ ಇಂದ್ರಜಿತ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಶಶಿಕಿರಣ್, ಶಿವರಾಜ್ ಮತ್ತು ಲೋಹಿತ್ ಈ ಚಿತ್ರದ ಮೂವರು ನಾಯಕರಾಗಿ ನಟಿಸಿದ್ದು, ಅವರೇ ಚಿತ್ರಕ್ಕೆ ಬಂಡವಾಳವನ್ನೂ ಹಾಕಿದ್ದಾರೆ. ಅವರ ಜೊತೆಗೆ ಚಾರ್ಲ್ಸ್ ಹೆನ್ರಿ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಚಿತ್ರದ ನಾಯಕಿಯಾಗಿ ನಿಶ್ಕಲ ನಟಿಸಿದ್ದಾರೆ.
ನಿರ್ದೇಶಕ ಇಂದ್ರಜಿತ್ ಮಾತನಾಡುತ್ತ, ವಿಂಟೇಜ್ ಪಾಯಿಂಟ್ ಎಂಬ ಚಿತ್ರದ ಚಿಕ್ಕ ಎಳೆ ಇಟ್ಟುಕೊಂಡು ಈ ಸ್ಕ್ರಿಪ್ಟ್ ‌ ಮಾಡಿದ್ದೇವೆ. ಇದೊಂದು ಮರ್ಡರ್ ಮಿಸ್ಟ್ರಿ ಕೊಲೆಯೊಂದರ ತನಿಖೆಯ ಸುತ್ತ ಸಾಗುವ ಕಥೆ.
ಮೂರು ಹುಡುಗರು ಮತ್ತು ಓರ್ವ ಹುಡುಗಿಯ ಸುತ್ತ ನಡೆಯುವ ಈ ಕಥೆಯನ್ನು ಬೆಂಗಳೂರು ಸುತ್ರ ಮುತ್ತ ಚಿತ್ರೀಕರಣ ನಡೆಸಿದ್ದೇವೆ. ಲಾಕ್ಡೌನ್ ಗೂ ಮುಂಚೆಯೇ ಚಿತ್ರ ಶುರುವಾಗಿತ್ತು, ಅಕ್ಟೋಬರ್ ನಲ್ಲಿ ರಿಲೀಸ್ ಮಾಡುತ್ತಿದ್ದೇವೆ ಎಂದರು.

 

ನಾಯಕ ಶಶಿಕಿರಣ್ ಮಾತನಾಡುತ್ತ ನಾವೆಲ್ಲ ಹೊಸಬರು. ಒಂದೊಳ್ಳೆ ಪ್ರಯತ್ನ ಮಾಡಿದ್ದೇವೆ, ಕ್ಲೈಮ್ಯಾಕ್ಸ್ ಬರೋವರೆಗೂ ಕ್ಯೂರಿಯಾಸಿಟಿ ಕಾಯ್ದುಕೊಂಡಿದ್ದೇವೆ.
ಎಂದರೆ, ಮತ್ತೊಬ್ಬ ನಟ ಶಿವರಾಜ್ ಮಾಹಿತಿ ನೀಡಿ, ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ನನ್ನದು ಸಮಾಜಸೇವೆ ಮಾಡುವ ಪಾತ್ರ, ನಿರ್ದೇಶಕ ಇಂದ್ರಜಿತ್ ಸ್ನೇಹಿತರು, ಎಲ್ಲರೂ ಇಷ್ಟಪಡುವಂಥ ಸಿನಿಮಾ ಮಾಡಿದ್ದೇವೆ ಎಂದರು.
ಮತ್ತೊಬ್ಬ ನಾಯಕ ಲೋಹಿತ್, ಮಾತನಾಡಿ ಚಿತ್ರದಲ್ಲಿ ನನ್ನದು ಒಬ್ಬ ಆರ್ಟಿಟೆಕ್ಟ್ ಪಾತ್ರ ಎಂದರು.

ನಿರ್ಮಾಪಕ ಚಾರ್ಲ್ಸ್ ಹೆನ್ರಿ, ಮಾತನಾಡಿ ಇಂದ್ರಜಿತ್ ಹೇಳಿದ ಕಥೆ ತುಂಬಾ ಇಷ್ಟವಾಯಿತು,ಹಾಗಾಗಿ‌ ನಾನೂ ಕೈಜೋಡಿಸಿದೆ ಎಂದರು. ಸತ್ಯ ಸಿನಿ ಡಿಸ್ಟ್ರಿ ಬ್ಯೂಟರ್ಸ್ ನ ವಿತರಕ ಮಂಜುನಾಥ್ ಮಾತನಾಡಿ ಕಡಿಮೆ‌ ಬಜೆಟ್ ನಲ್ಲಿ ಉತ್ತಮ ಚಿತ್ರ ಮಾಡಿದ್ದಾರೆ. ಒಳ್ಳೇ ಕಂಟೆಂಟ್ ಇರೋ ಚಿತ್ರ ಎಂದು ಹೇಳಿದರು.

ಸಂಗೀತ ನಿರ್ದೇಶಕ ವೀರ ಸಮರ್ಥ ಮಾತನಾಡಿ, ಇದು ಕ್ರೈಮ್ ಥ್ರಿಲ್ಲರ್ ಚಿತ್ರ. ಹಾಡುಗಳಿಗೆ ಜಾಗವಿಲ್ಲ. ಮೂರು ಅಂದುಕೊಂಡಿದ್ದೆವು. ಸದ್ಯ ಒಂದೇ ಹಾಡು ಚಿತ್ರದಲ್ಲಿದೆ. ಕೆ.ಕಲ್ಯಾಣ್ ಬರೆದಿರುವ ಹಾಡನ್ನು ನಾನೇ ಹಾಡಿದ್ದೇನೆ ಎನ್ನುವ ಮಾಹಿತಿ ಹಂಚಿಕೊಂಡರು.

Leave a Reply

Your email address will not be published. Required fields are marked *