ಬಿದರಗೂಡು ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನಕ್ಕೆ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಭೂಮಿ ಪೂಜೆ

ಬಸವರಾಜು / ನಂದಿನಿ ಮೈಸೂರು

ತಾಂಡವಪುರ : ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಬಿದರಗೂಡು ಗ್ರಾಮದಲ್ಲಿ ಸುಮಾರು 20 ಲಕ್ಷ ರೂಗಳ ವೆಚ್ಚದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನಕ್ಕೆ ಶಾಸಕ ಡಾಕ್ಟರ್ ಯತಿಂದ್ರ ಸಿದ್ದರಾಮಯ್ಯನವರು ಭೂಮಿ ಪೂಜೆ ನಡೆಸಿದರು ಬಳಿಕ ಮಾತನಾಡಿದ ಶಾಸಕರು ಈ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನದ ಕೊರತೆ ಹಿನ್ನೆಲೆಯಲ್ಲಿ ಸಮುದಾಯದವರು ನಿವೇಶನವನ್ನು ಗುರುತಿಸಿ ನಮಗೆ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಮುದಾಯದ ಮುಖಂಡರುಗಳು ಹಲವಾರು ಬಾರಿ ನನ್ನ ಗಮನಕ್ಕೆ ತಂದು ಮನವಿ ಮಾಡಿದರು ಅವರ ಮನವಿಗೆ ಸ್ಪಂದಿಸಿ ಸುಮಾರು 20 ಲಕ್ಷ ರೂಗಳ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ ಅದೇ ರೀತಿ ಈ ಗ್ರಾಮದ ಎಲ್ಲಾ ಸಮುದಾಯದವರು ಗ್ರಾಮಕ್ಕೆ ಭೇಟಿ ನೀಡಿದಾಗ ತುಂಬು ಹೃದಯದ ಪ್ರೀತಿ ವಿಶ್ವಾಸವನ್ನು ತೋರಿಸಿ ಸನ್ಮಾನಿಸಿ ಗೌರವಿಸಿದ್ದಾರೆ ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ ಇನ್ನು ಮುಂದೆ ಸಹ ಇದೇ ರೀತಿ ನಿಮ್ಮ ಪ್ರೀತಿ ಅಭಿಮಾನ ಸಹಕಾರ ವಿಶ್ವಾಸ ಇರಲಿ ಎಂದು ಗ್ರಾಮಸ್ಥರಲ್ಲಿ ವಿನಂತಿಸಿದರು ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಸಿ ಬಸವರಾಜು ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ ಬಿಕೆ ಮಹಾದೇವ ರಾಜಶೇಖರ ಮೂರ್ತಿ ಮಾಲಮ್ಮ ನಾಯಕ ಸಮುದಾಯದ ಮುಖಂಡರಾದ ಸಣ್ಣ ಸೋಮ ನಾಯಕ ಗಿರಿ ನಾಯಕ ಗುರುರಾಜು ರಾಂಪುರ ಗ್ರಾಮ ಪಂಚಾಯತಿ ಬೂತ್ ಮಠದ ಅಧ್ಯಕ್ಷ ಬಸವರಾಜ ಮೂರ್ತಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆಂಪಣ್ಣ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ದಕ್ಷಿಣ ಮೂರ್ತಿ ಎಂ ಮಹದೇವಸ್ವಾಮಿ ಚಿಕ್ಕಣ್ಣ ಧರ್ಮ ಸೇರಿದಂತೆ ಎಲ್ಲ ಸಮುದಾಯದ ಯುವಕ ಸಂಘದವರು ಮುಖಂಡರುಗಳು ಪಕ್ಷದ ಕಾರ್ಯಕರ್ತರು ಹಾಜರಿದ್ದರು

Leave a Reply

Your email address will not be published. Required fields are marked *