ನಂದಿನಿ ಮೈಸೂರು
ಟಿ.ಕೆ.ಹರೀಶ್ ಕಾರ್ಯ ವೈಖರಿಗೆ ಮೆಚ್ಚುಗೆ
ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆ 2023 ಮತ ಎಣಿಕೆ ಸಂಬಂಧ ಮೈಸೂರು ಜಿಲ್ಲಾಡಳಿತದಿಂದ ಸ್ಥಾಪಿಸಿದ್ದ ಮಾಧ್ಯಮ ಕೇಂದ್ರದಲ್ಲಿ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಯಿತು.
ಚುನಾವಣೆ ಆರಂಭದಿಂದಲೂ ಚುನಾವಣೆಗೆ ಸಂಬಂಧಿಸಿದ ಮಾಹಿತಿ ಹಾಗೂ ಸುದ್ದಿಯನ್ನು ವಿವರವಾಗಿ ನೀಡಿದ್ದಾರೆ. ಹಾಗೆಯೇ ಚುನಾವಣಾ ಮಾಹಿತಿ ನೀಡುವ ಮೂಲಕ ಮಾಧ್ಯಮ ಸಮನ್ವಯ ಮಾಡಿದ್ದಾರೆ. ಹೀಗಾಗಿ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮದವರು ಹರೀಶ್ ಅವರ ಕಾರ್ಯ ವೈಖರಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.