ಮೈಸೂರು:14 ಸೆಪ್ಟೆಂಬರ್ 2021
ನ@ದಿನಿ
ಹಿಂದೂ ದೇವಾಲಯಗಳ ಉಳಿವಿಗಾಗಿ ಆಗ್ರಹಿಸಿ ಜಾಗೋ ಮೈಸೂರು ವತಿಯಿಂದ ಚೇತನ್ ಎಂ ಗೌಡ, ಅವರು ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ನ್ಯಾಯಾಲಯದ ಎದುರಿರುವ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಅವರು ಮಾತನಾಡಿ ಸುಪ್ರೀಂಕೋರ್ಟ್ ಆದೇಶವನ್ನೇ ನೆಪ ಮಾಡಿಕೊಂಡು ಅದನ್ನು ಸರಿಯಾಗಿ ಅಧ್ಯಯನ ಮಾಡಿ ಅರ್ಥೈಸಿಕೊಳ್ಳದೇ ಏಕಾಏಕಿ ಹಿಂದೂ ದೇವಸ್ಥಾನಗಳನ್ನು ಕೆಡವಿ ಇನ್ನೂ ಸುಮಾರು 90ಕ್ಕೂ ಅಧಿಕ ದೇವಸ್ಥಾನಗಳನ್ನು ಕೆಡವಲು ತಯಾರಿ ನಡೆಸಿರುವ ಜಿಲ್ಲಾಡಳಿತ ಕ್ರಮದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದಾಗಿ ತಿಳಿಸಿದರು.
ಬಹುಸಂಖ್ಯಾತ ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದಿರುವ ಜಿಲ್ಲಾಧಿಕಾರಿಗಳು ನಂಜನಗೂಡಿನ ತಹಶೀಲ್ದಾರ್, ಭಾಗಿಯಾದ ಎಲ್ಲ ಅಧಿಕಾರಿಗಳನ್ನು ತಕ್ಷಣವೇ ವಜಾ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯ ಸರ್ಕಾರ ಎಲ್ಲ ಹಿಂದೂ ದೇವಸ್ಥಾನಗಳ ಉಳಿವಿಗೆ ಬದ್ಧವಾಗುವ ಆಶ್ವಾಸನೆ ನೀಡುವವರೆಗೆ ಹಾಗೂ ಜಿಲ್ಲಾಧಿಕಾರಿ ಇತರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮದ ಭರವಸೆ ನೀಡುವವರೆಗೆ ಹಗಲು ರಾತ್ರಿ ಸಂಪೂರ್ಣ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು.
ಸಂಜೆ ವೇಳೆಗೆ ಚೇತನ್ ಎಂ ಗೌಡ ರವರಿಗೆೆ ಲಕ್ಷ್ಮೀ ಪುರಂ ಠಾಣೆ ಇನ್ಸ್ಪೆಕ್ಟರ್ ರವರು ಎಳನೀರು ನೀಡಿದರು.ಎಳನೀರು ಸೇವಿಸಿದ ಚೇತನ್ ಎಂ ಗೌಡ ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದಾರೆ.