ಕಂದಾಯ ವಿಚಾರವಾಗಿ ನಗರ ಪಾಲಿಕೆ ಅಧಿಕಾರಿಗಳು ಬಾಡಿಗೆದಾರರ ಮೇಲೆ ದೌರ್ಜನ್ಯ

ಮೈಸೂರು:18 ಫೆಬ್ರವರಿ 2022

ನಂದಿನಿ ಮೈಸೂರು

ಕರ್ನಾಟಕ ಸೇನಾ ಪಡೆ ವತಿಯಿಂದ ಕಂದಾಯ ವಿಚಾರವಾಗಿ ನಗರ ಪಾಲಿಕೆ ಅಧಿಕಾರಿಗಳು ಬಾಡಿಗೆದಾರರ ಮೇಲೆ ದೌರ್ಜನ್ಯ ನಡೆಸಿ ಏಕಾಏಕಿ ಅಂಗಡಿಗೆ ಬೀಗ ಹಾಕಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

ಮೈಸೂರಿನ ಜಯನಗರ ಪಾಲಿಕೆಯ ಕಛೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ತೇಜೇಸ್ ಲೋಕೇಶ್ ಗೌಡ ಮಾತನಾಡಿ ವಿವೇಕಾನಂದನಗರದ ಹಿರಿಯ ನಿವಾಸಿ ಗಾಯತ್ರಿ ಅವರ ಮನೆಗೆ ಪಾಲಿಕೆ ಅಧಿಕಾರಿಗಳು ಏಕಾಏಕಿ ನುಗ್ಗಿ 75 ವರ್ಷ ವಯಸ್ಸಾಗಿರುವ ಅವರನ್ನು ಹೆದರಿಸಿ ನಿಮ್ಮ ಕಂದಾಯವನ್ನು ಈಗಲೇ ಕಟ್ಟಬೇಕು ಇಲ್ಲದಿದ್ದರೆ ಬೀಗ ಹಾಕುತ್ತೇವೆ ಎಂದು ಹೇಳಿ, ಅಲ್ಲಿದ್ದ ಕೆಇಬಿ ಬಿಲ್ ಕಟ್ಟುವ ಮಳಿಗೆಗೆ ಅಲ್ಲಿ ಒಳಗಡೆಯಿದ್ದ ಕೆಲಸ ಮಾಡುವ ಹುಡುಗಿಯನ್ನು ಬಲವಂತವಾಗಿ ಈಚೆಗೆ ಕರೆಸಿ ಅದರ ಬೀಗವನ್ನು ಹಾಕಿ ಹಾಗೂ ನಮ್ಮ ಕನ್ನಡ ಸಂಘಟನೆಯ ಕಚೇರಿಯ ಬೀಗವನ್ನು ಸಹ ಹಾಕಿಕೊಂಡು ಬಂದಿರುತ್ತಾರೆ ಹಾಗೂ ಪಕ್ಕದಲ್ಲಿದ್ದ ಕೌಶಿಕ್ ವೈನ್ ಸ್ಟೋರ್ ಅಂಗಡಿಗೆ ಬೀಗ ಹಾಕದೆ ಅವರಿಂದ ಲಂಚವನ್ನು ತೆಗೆದುಕೊಂಡು ಬಂದಿರುವುದು ಎಷ್ಟು ಎಷ್ಟರಮಟ್ಟಿಗೆ ಸರಿ.ಮಹಾನಗರಪಾಲಿಕೆಯು ಯಾವುದೇ ಒಂದು ಆಸ್ತಿಯ ಕಂದಾಯವನ್ನು ಪಾವತಿಸಿ ಕೊಳ್ಳಬೇಕಾದರೆ ಮೊದಲು ಮಾಲೀಕರಿಗೆ ಒಂದನೇ ನೋಟಿಸ್, ಎರಡನೇ ನೋಟಿಸ್ ಗಳನ್ನು ರಿಜಿಸ್ಟರ್ ಪೋಸ್ಟ್ ಮುಖಾಂತರ ಕಳುಹಿಸಿ ತದನಂತರ ಮಹಾನಗರಪಾಲಿಕೆಯ ಲೀಗಲ್ ಅಡ್ವೈಸರ್ ನಿಂದ ಮನೆಯ ಮಾಲೀಕನಿಗೆ ನೋಟೀಸನ್ನು ಜಾರಿ ಮಾಡಿ ತದನಂತರ ಕಂದಾಯವನ್ನು ಪಾವತಿ ಮಾಡದಿದ್ದರೆ ಅವರಿಗೆ ಎಚ್ಚರಿಕೆ ನೀಡಿ ಕಂದಾಯವನ್ನು ಕಾನೂನಿನ ಮುಖಾಂತರ ವಸೂಲಿ ಮಾಡಬೇಕು. ಅದು ಬಿಟ್ಟು ಇವಾಗ ಇವರು ಒಂದು ನೋಟಿಸನ್ನು ಸಹ ಮನೆಯ ಮಾಲೀಕರಿಗೆ ಲೀಗಲ್ ಆಗಿ ಕಳುಹಿಸದೆ, ಅವರಿಗೆ ತಿಳುವಳಿಕೆ ನೀಡದೆ, ಕಾಲಾವಕಾಶ ವನ್ನು ನೀಡದೆ ಮಳಿಗೆಗಳಿಗೆ ಬೀಗ ಹಾಕಿಕೊಂಡು ಬಂದಿರುವುದು ಅತ್ಯಂತ ಖಂಡನೀಯ ಎಂದರು.

ಪ್ರತಿಭಟನೆಯಲ್ಲಿ ಸಿ ಎಚ್ ಕೃಷ್ಣಯ್ಯ, ಪ್ರಭುಶಂಕರ, ವಿಜಯೇಂದ್ರ, ಮಿನಿ ಬಂಗಾರಪ್ಪ, ಎಳನೀರು ರಾಮಣ್ಣ, ದರ್ಶನ್ ಗೌಡ, ಪ್ರದೀಪ್, ಮಂಜುನಾಥ್, ಗಣೇಶ್ ಪ್ರಸಾದ್, ರವಿನಾಯಕ್, ಪ್ರಭಾಕರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *