ಶಾಲೆಗಳಲ್ಲಿ ಖಾಲಿ ಇರುವ 300 ಮುಖ್ಯ ಶಿಕ್ಷಕರ ಬಡ್ತಿ ಕೌನ್ಸಿಲಿಂಗ್

ಮೈಸೂರು:30 ಏಪ್ರಿಲ್ 2022

ನಂದಿನಿ ಮೈಸೂರು

ಜಿಲ್ಲಾ ಉಪನಿರ್ದೇಶಕರ ಕಚೇರಿ ಬಳಿ ಮುಖ್ಯ ಶಿಕ್ಷಕರ ಬಡ್ತಿ ಕೌನ್ಸಿಲಿಂಗ್ ನಡೆಯುತ್ತಿದೆ.

ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಬಡ್ತಿ ಮುಖ್ಯ ಶಿಕ್ಷಕರಾಗಿ 300 ಜನ ಶಿಕ್ಷಕರಿಗೆ ಖಾಲಿ ಇರುವ ಶಾಲೆಗಳಲ್ಲಿ ಮುಖ್ಯಶಿಕ್ಷಕರಾಗಿ ಪದೋನ್ನತಿ ನೀಡಲಾಯಿತು.

ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಪ ನಿರ್ದೇಶಕರಾದ ಶ್ರೀ ರಾಮ ಚಂದ್ರೇರಾಜೇ ಅರಸ್ ಅವರು ಸ್ಥಳದಲ್ಲಿಯೇ ಶಿಕ್ಷಕರಿಗೆ ಆದೇಶ ಪ್ರತಿಯನ್ನು ವಿತರಿಸಿದರು.

ವಾಲ್ಮೀಕಿ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಪಿ. ನಾಗಲಿಂಗಪ್ಪನವರು ಬಿರುಬಿಸಿಲಿನಿಂದ ಬಳಲುತ್ತಿದ್ದ ಕೌನ್ಸಿಲಿಂಗ್ ನಲ್ಲಿ ಹಾಜರಾದ ಶಿಕ್ಷಕರಿಗೆ ನಂದಿನಿ ಮಜ್ಜಿಗೆಯನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸೊಮೇಗೌಡ ರವರು ಹಾಗೂ ತಾಂಡವಪುರ ಶಾಲೆಯ ಸಮಾಜವಿಜ್ಞಾನ ಶಿಕ್ಷಕರಾದ ಎಚ್ ಎಸ್ ಮಹೇಶ್ ಕುಮಾರ್ ವಿಭಾಗ ಮಟ್ಟದ ಪ್ರಶಸ್ತಿ ವಿಜೇತರು. ಹಾಜರಾಗಿ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.

Leave a Reply

Your email address will not be published. Required fields are marked *