ನಂಜನಗೂಡು:4 ಆಗಸ್ಟ್ 2022
ನಂದಿನಿ ಮೈಸೂರು
*ಶಿಕ್ಷಕಿ ಕೊಲೆ ಪ್ರಕರಣ… ನಗರಸಭೆ ಕೌನ್ಸಿಲರ್ ಸೇರಿ ನಾಲ್ವರ ಬಂಧನ…6 ತಿಂಗಳ ನಂತರ ಆರೋಪಿಗಳು ಅಂದರ್…ಅಕ್ರಮ ಸಂಭಂಧಕ್ಕೆ ಬಲಿಯಾದ ಟೀಚರ್ …*
ಕೊನೆಗೂ ಹಿಂದಿ ಶಿಕ್ಷಕಿ ಕೊಲೆ ರಹಸ್ಯ ಭೇಧಿಸುವಲ್ಲಿ ನಂಜನಗೂಡು ಪೊಲೀಸರು ಯಶಸ್ವಿಯಾಗಿದ್ದಾರೆ.ನಂಜನಗೂಡು ನಗರಸಭೆ ಕೌನ್ಸಿಲರ್ ಸೇರಿದಂತೆ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ.
ಶಿಕ್ಷಕಿಯೊಂದಿಗೆ ಪತಿಯ ಅಕ್ರಮ ಸಂಭಂಧಕ್ಕೆ ಬೇಸತ್ತಿದ್ದ ಕೌನ್ಸಿಲರ್ ಸುಫಾರಿ ಕೊಟ್ಟು ಕೊಲೆ ಮಾಡಿಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಪಟ್ಟಣದ5 ನೇ ವಾರ್ಡಿನಿಂದ ನಗರಸಭೆಗೆ ಬಿಜೆಪಿಯಿಂದ ಆಯ್ಕೆಯಾಗಿರುವ ಗಾಯಿತ್ರಿಮುರುಗೇಶ್ ಹಾಗೂ ಆಕೆಯ ಒಡನಾಡಿಗಳಾದ,ಭಾಗ್ಯ,ನಾಗಮ್ಮ ಮತ್ತು ಕುಮಾರ್ ಬಂಧಿತರು.ಘಟನೆ ನಡೆದು 6 ತಿಂಗಳ ನಂತರ ಆರೋಪಿಗಳನ್ನ ಬಂಧಿಸಿದ ಪೊಲೀಸರು ನಿಗೂಢ ಕೊಲೆ ರಹಸ್ಯ ಬಯಲು ಮಾಡಿದ್ದಾರೆ.
ಮಾರ್ಚ್ 9 ರಂದು ಹಿಂದಿ ಶಿಕ್ಷಕಿ ಸುಲೋಚನಾ ಎಂಬುವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ತನಿಖೆ ನಡೆಸಿದ ಪೊಲೀಸರು ಕೊಲೆ ಮೊಕದ್ದಮೆ ದಾಖಲಿಸಿದ್ರು.ಘಟನೆ ನಡೆದು 6 ತಿಂಗಳಾದ್ರೂ ಆರೋಪಿಗಳನ್ನ ಬಂಧಿಸದ ಪೊಲೀಸರ ಮೇಲೆ ತೀವ್ರ ಒತ್ತಡ ಬಂದಿತ್ತು ಇತ್ತೀಚೆಗೆ ನಂಜನಗೂಡಿಗೆ ಭೇಟಿ ನೀಡಿದ್ದ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಜೊತೆ ಈ ಕೊಲೆಯ ಬಗ್ಗೆ ಪತ್ರಕರ್ತರು ಪ್ರಸ್ತಾಪ ಮಾಡಿದ್ದರು . ಇದರ ಬೆನ್ನಲ್ಲೇ ಎಸ್ಪಿ ಆರ್.ಚೇತನ್,ಎಎಸ್ಪಿ ಡಾ.ಮಾಲಿನಿ ರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗೋವಿಂದರಾಜ್ ಉಸ್ತುವಾರಿಯಲ್ಲಿ ಇನ್ಸ್ಪೆಕ್ಟರ್ ಲಕ್ಷ್ಮೀಕಾಂತ ತಳವಾರ್ ಹಾಗೂ ಸಿಬ್ಬಂದಿಗಳು ತನಿಖೆಯನ್ನ ತೀವ್ರಗೊಳಿಸಿದ್ದರು.ತನಿಖೆ ವೇಳೆ ದೊರೆತ ಸುಳಿವಿನ ಆಧಾರದ ಮೇಲೆ ಕೌನ್ಸಿಲರ್ ಗಾಯಿತ್ರಿ ಮುರುಗೇಶ್ ಹಾಗೂ ಸಂಭಂಧಿಕರನ್ನ ಅರೆಸ್ಟ್ ಮಾಡಿದ್ದಾರೆ.ಬಂಧಿತ ಗಾಯಿತ್ರಿ ಪತಿ ಮುರುಗೇಶ್ ಹಾಗೂ ಶಿಕ್ಷಕಿ ಸುಲೋಚನಾ ನಡುವೆ ಅಕ್ರಮ ಸಂಭಂಧ ಇತ್ತೆಂದು ಹೇಳಲಾಗಿದೆ.ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಡಿ.ಗ್ರೂಪ್ ನೌಕರನಾಗಿದ್ದ ಮುರುಗೇಶ್ ಬಿಜೆಪಿ ಮುಖಂಡನಾಗಿ ಗುರುತಿಸಿಕೊಂಡಿದ್ದ.ಸುಲೋಚನಾ ಜೊತೆ ಅಕ್ರಮ ಸಂಭಂಧ ಇರಿಸಿಕೊಂಡಿದ್ದ.ಈ ವಿಚಾರದಲ್ಲಿ ಮುರುಗೇಶ್ ಮನೆಯಲ್ಲಿ ಸಾಕಷ್ಟು ಬಾರಿ ಗಲಾಟೆ ಆಗಿತ್ತು.ತನ್ನ ಕುಟುಂಬದ ನೆಮ್ಮದಿ ಹಾಳು ಮಾಡುತ್ತಿರುವ ಸುಲೋಚನಾಳನ್ನ ಮುಗಿಸಲು ಸ್ಕೆಚ್ ಹಾಕಿದ ಗಾಯಿತ್ರಿ ತನ್ನ ಸಂಭಂಧಿಕರಾದ ಭಾಗ್ಯ,ನಾಗಮ್ಮ ಹಾಗೂ ಕುಮಾರ್ ಜೊತೆ ಸೇರಿ ಕೊಲೆ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.ಘಟನೆ ನಡೆದು 6 ತಿಂಗಳ ನಂತರ ಆರೋಪಿಗಳನ್ನ ಸೆರೆ ಹಿಡಿಯುವಲ್ಲಿ ನಂಜನಗೂಡು ಪೊಲೀಸರು ಯಶಸ್ವಿಯಾಗಿದ್ದಾರೆ.