ತಿ.ನರಸೀಪುರ:3 ಮಾರ್ಚ್ 2022
ಆಲಗೂಡು ರೇವಣ್ಣ
-ಪ್ರಧಾನಿ ನರೇಂದ್ರ ಮೋದಿಯವರು ಎರಡು ಬಾರಿ ದೇಶದ ಪ್ರಧಾನ ಮಂತ್ರಿಗಳಾಗಿದ್ದಾರೆ ಅವರಿಗೆ ಯಾವ ಪಕ್ಷದಲ್ಲೂ ಕಾಂಪಿಟೇಟರ್ ಇಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ನುಡಿದರು.
ಪಟ್ಟಣದ ಜೆ ಎಸ್ ಎಸ್ ಸಭಾ ಭವನದಲ್ಲಿ ಅಯೋಜನೆಗೊಂಡಿದ್ದ ಬೂತ್ ಅಧ್ಯಕ್ಷರ ಸಮೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಆರ್.ಅಶೋಕ್ ದೇಶದಲ್ಲಿ ಕಾಂಗ್ರೇಸ್ ಪಕ್ಷ ಅಳಿಸಿಹೋಗುತ್ತಿದ್ದು ಪ್ರಧಾನಿ ನರೇಂದ್ರ ಮೋದಿಯವರಿಗೆ ಯಾವ ರಾಜಕೀಯ ಪಕ್ಷದಲ್ಲೂ ಪ್ರತಿ ಸ್ಪರ್ಧಿಗಳಿಲ್ಲ ಎಂದರು.
ದೇಶದ ಯಾವ ರಾಜ್ಯದಲ್ಲೂ ಕಾಂಗ್ರೇಸ್ ಪಕ್ಷ ಬಲಾಡ್ಯವಿಲ್ಲ ಮುಂಬರುವ 2023 ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮತ್ತೆ ಅಧಿಕ್ಕಾರಕ್ಕೆ ಬರಲು ಕಾರ್ಯಕರ್ತರು ಎಲ್ಲಾ ರೀತಿಯ ಪ್ರಯತ್ನ ಮಾಡಬೇಕು, ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಜನಪರ ರೈತರ ಪರ ಬಜೆಟ್ ಮಂಡನೆ ನೂರಕ್ಕೆ ನೂರು ಪರ್ಸೆಂಟ್ ಮಾಡ್ತಾರೆ ಹಾಗಾಗಿ ಕಾರ್ಯಕರ್ತರು ಆತ್ಮ ವಿಶ್ವಾಸದೊಂದಿಗೆ ಪಕ್ಷದ ಪರ ಕೆಲಸ ಮಾಡಕೆಂದು ಕರೆ ಕೊಟ್ಟರು.
ಕರ್ನಾಟಕದಲ್ಲಿ ಬೆಂಗಳೂರು ಬಿಟ್ಟರೆ ಮೈಸೂರು ಜಿಲ್ಲೆ ಅತಿ ಹೆಚ್ಚು ಫೇಮಸ್ ಆಗಿದೆ ಬೆಂಗಳೂರು ಬಿಜೆಪಿ ಭದ್ರಕೋಟೆ ಆಗಿರುವ ಹಾಗೆ ಮೈಸೂರು ಜಿಲ್ಲೆ ಸಹ ಬಿಜೆಪಿಯ ಭದ್ರಕೋಟೆ ಆಗಬೇಕು ಆ ನಿಟ್ಟಿನಲ್ಲಿ ಬೂತ್ ಸಮಿತಿ ಅಧ್ಯಕ್ಷರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ತಿಳಿಸಿದರು.
ಉಕ್ರೇನ್ ದೇಶದಲ್ಲಿ ಪಾಕಿಸ್ತಾನದ ವಿದ್ಯಾರ್ಥಿಗಳು ಇಂಡಿಯಾದ ಬಾವುಟವನ್ನು ಹಿಡಿದುಕೊಂಡರೆ ನಾವು ಸೇಫಾಗಿ ಪಾಕಿಸ್ತಾನಕ್ಕೆ ಹೋಗಬಹುದೆಂದು ಪಾಕಿಸ್ತಾನದ ವಿದ್ಯಾರ್ಥಿಗಳು ಭಾರತದ ಬಾವುಟಗಳನ್ನು ಹಿಡಿದು ಕೊಳ್ಳುತ್ತಿದ್ದಾರೆ ಇದು ಭಾರತದ ತಾಕತ್ತು.ಯುದ್ದ ಭೂಮಿ ಉಕ್ರೇನ್ ನಿಂದ ತಮ್ಮ ತಮ್ಮ ದೇಶದ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳಲು ಇತರೆ ದೇಶಗಳು ಕೈ ಚೆಲ್ಲಿವೆ ಆದರೆ ಭಾರತದ ಪ್ರಧಾನಿಗಳು ನಾಲ್ಕು ಮಂತ್ರಿಗಳನ್ನು ಬೇರೆ ದೇಶಕ್ಕೆ ಕಳುಹಿಸಿ ಕೊಟ್ಟು ಭಾರತೀಯರನ್ನು ಕರೆಸಿಕೊಳ್ಳುತ್ತಿದೆ ಇದು ದೆಶದ ಹೆಮ್ಮೆಯ ವಿಷಯ ಎಂದರು.
ಮುಂದುವರಿದು ಮಾತನಾಡಿದ ಅಶೋಕ್
ಮೇಕೆದಾಟು ನೀರು ತರುತ್ತೇವೆ ಎಂದು ಡಿಕೆ ಶಿವಕುಮಾರ್ ಅವರು ಜಾಹೀರಾತು ನೀಡಿ ಪಾದಯಾತ್ರೆ ಮಾಡುತ್ತ, ಟ್ರಾಫಿಕ್ ಜಾಮ್ ಮಾಡಿ ಜನರಿಂದ ಶಾಪ ಹಾಕಿಸಿಕೊಳ್ಳುತ್ತಿದ್ದಾರೆ
ಡಿ.ಕೆ ಶಿವಕುಮಾರ್ ಸಿದ್ದರಾಮಯ್ಯರವರು ಪಾದಯಾತ್ರೆ ಮಾಡಿದ್ರೆ ನೀರು ಬಂದುಬಿಡುತ್ತಾ ಎಂದು ಪ್ರಶ್ನೆ ಮಾಡಿದರಲ್ಲದೆ ರಾಜ್ಯದಲ್ಲಿ ಬಿಜೆಪಿ
ಸರ್ಕಾರ ಇದೆ ಕೇಂದ್ರದಲ್ಲಿ ನರೇಂದ್ರ ಮೋದಿ ಅವರಿದ್ದಾರೆ ಮೇಕೆದಾಟು ಯೋಜನೆ ಕಾರ್ಯ ರೂಪಕ್ಕೆ ತರುತ್ತೇವೆ ಎಂದು ಆತ್ಮ ವಿಶ್ವಾಸದ ಮಾತುಗಳನ್ನಾಡಿದರು.
40 ರಿಂದ 50 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೇಸ್ ನವರು ಈ ಯೋಜನೆಯನ್ನು ಯಾಕೆ ಮಾಡಲಿಲ್ಲ ಸುಮಾರು 1994 ,1995 ರಿಂದ ಮೇಕೆದಾಟು ವಿಚಾರ ಬಂದಿದ್ದು ಕೇಂದ್ರದಲ್ಲೂ ನೀವೇ ಇದ್ರಿ ರಾಜ್ಯದಲ್ಲೂ ನೀವೇ ಇದ್ರಿ ಯಾಕೆ ಮಾಡಿಲ್ಲ ಕಾಂಗ್ರೆಸ್ ನವರು ಸೋಲುತ್ತೇವೆ ಎಂದು ಗ್ಯಾರಂಟಿ ಆಗುತಿದ್ದಂತ್ತೆ ಈ ತರ ನಾಟಕ ಮಾಡುತ್ತಾರೆ ಜನರು ಇದನ್ನು ನಂಬಲ್ಲ ಎಂದರು.
ಮಾಜಿ ಸಚಿವರು ತಿ.ನರಸೀಪುರ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿಗಳು ಆದ ರಾಮದಾಸ್ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ರವರು ಜನ ಮೆಚ್ಚುವ ಜನರ ಹಿತಕಾಯಿಯು ಯೋಜನೆಗಳನ್ನು ಕೊಟ್ಟಿರುವಂತ್ತೆ ರಾಜ್ಯದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಸಹ ಜನಸಾಮಾನ್ಯರಿಗೆ ಅನುಕೂಲಕರವಾದ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ, ರಾಜ್ಯ ಮತ್ತು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಶ್ರೀಸಾಮಾನ್ಯರಿಗೆ ತಲುಪಿಸು ಹೊಣೆ ಬೂತ್ ಸಮಿತಿ ಅಧ್ಯಕ್ಷರು ಪ್ರಾಮಾಣಿಕವಾಗಿ ಮಾಡಿದರೆ ನರಸೀಪುರ ಕ್ಷೇತ್ರದಲ್ಲಿ ಕಮಲ ಅರಳುತ್ತದೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.
“ಹಣ ಬಲದಿಂದ ಶಾಸಕರಾಗಲು ಸಾಧ್ಯವಿಲ್ಲ ಒಂದು ವೇಳೆ ಹಣದಿಂದ ಶಾಸಕರ ಸ್ಥಾನ ಗೆಲ್ಲಬಹುದಾಗಿದ್ದರೆ ಮಾಜಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಸೋಲುತ್ತಿರಲಿಲ್ಲ ಈ ಒಂದು ವಸ್ತು ಸ್ಥಿತಿಯನ್ನು ಕಾರ್ಯಕರ್ತರು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು”
ಮಂಗಳ ಸೋಮಶೇಖರ್ .ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷೆ
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸುಮಾರು 20 ಜನ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಭಾರತಿ ಶಂಕರ್,ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್,ಮಂಡಲ ಅಧ್ಯಕ್ಷ ಕೆ.ಸಿ.ಲೋಕೇಶ್ ನಾಯಕ, ವಿಜಯ್ ಕುಮಾರ್,ಪ್ರವಾಸೋದ್ಯಮ ನಿಗಮ ಮಂಡಳಿ ಅಧ್ಯಕ್ಷ ಕಾ.ಪು.ಸಿದ್ದಲಿಂಗ ಸ್ವಾಮಿ. ಮುಖಂಡ ರಾದ ಸಾಮ್ರಾಟ್ ಸುಂದ್ರೇಶನ್, ಹಿರಿಯ ಮುಖಂಡ ತೋಟದಪ್ಪ ಬಸವರಾಜು. ಕರುಹಟ್ಟಿ ಮಹದೇವಯ್ಯ. ಪುರಸಭೆ ಸದಸ್ಯ ಎಸ್.ಕೆ ಕಿರಣ್,ಲೋಕೇಶ್,ಆಲಗೂಡು ರಂಗು ನಾಯಕ್,ಎಸ್ ಸಿ ಮೊರ್ಚಾ ಅಧ್ಯಕ್ಷ ಬಡ್ಡು ಶಿವಕುಮಾರ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.