ಉಸಿರಾಟದ ತೊಂದರೆ ನೀರಿನಲ್ಲಿಯೇ ಆರೋಗ್ಯ ಸುಧಾರಿಸಿಕೊಂಡ ಈಜುವ ಕನ್ಯೆ ಎಂ.ಎಸ್.ಕೀರ್ತನಾ

ನಂದಿನಿ ಮೈಸೂರು

ಉಸಿರಾಟದ ತೊಂದರೆ ನೀರಿನಲ್ಲಿಯೇ ಆರೋಗ್ಯ ಸುಧಾರಿಸಿಕೊಂಡ ಈಜುವ ಕನ್ಯೆ ಎಂ.ಎಸ್.ಕೀರ್ತನಾ

ಸಾಧನೆಗೆ ಇಂಥದ್ದೇ ಸ್ಥಳ ಅಂತೇನಿಲ್ಲ.ಕೆಲವರು ಭೂಮಿಯ ಮೇಲೆ ತಮ್ಮ ಸಾಧನೆ ಮಾಡಿದರೆ,ಮತ್ತೊಬ್ಬರು ಆಗಸದಲ್ಲಿ ಸಾಧನೆಯ ಕೀರ್ತಿ ಪತಾಕೆ ಹಾರಿಸುತ್ತಾರೆ.ಆದರೇ ಇಲ್ಲೊಬ್ಬ ಉತ್ಸಾಹಿ ಯುವತಿ ನೀರಿನಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಿ ಸಾಧನೆಯ ಹೆಜ್ಜೆ ಇಡುತ್ತಿದ್ದಾಳೆ.

ಹೌದು,ವಿಶ್ವವಿಖ್ಯಾತ ಎಂದು ಹೆಸರು ಪಡೆದಿರುವ ಮೈಸೂರಿನಲ್ಲಿ ಈಜುಪಟುಗಳ ಸಂಖ್ಯೆ ಹೆಚ್ಚಾಗಿದೆ ಅದರ ಜೊತೆಗೆ ಈಜುಕೊಳದ ಕೊರತೆಯೂ ಇದೆ .ಇಂಥ ಹಲವು ಸಮಸ್ಯೆಗಳ ನಡುವೆ ನೀರಿನಲ್ಲಿ ಈಜುವ ಮೂಲಕ ಸಾಧನೆಯತ್ತ ಸಾಗುತ್ತಿರುವ ಕ್ರೀಡಾಪಟು ಎಂ.ಎಸ್.ಕೀರ್ತನಾ. ಮೈಸೂರಿನ ಅಗ್ರಹಾರ ನಿವಾಸಿ ನ್ಯಾಷನಲ್ ಫುಟ್ಬಾಲ್ ಪ್ಲೇಯರ್ (ರೈಲ್ವೆ ಇಲಾಖೆ)
ಶಿವಣ್ಣ ಅವರ ಮೊಮ್ಮಗಳು ,ಉದ್ಯಮಿ ಶಿವಕುಮಾರ್ ಪುಷ್ಪಾಲತಾ ದಂಪತಿಯ ಪುತ್ರಿ ಎಂ.ಎಸ್.ಕೀರ್ತನಾ ಅನಾರೋಗ್ಯದ ಸಮಸ್ಯೆಯಿಂದ ಈಜಲು ಪ್ರಾರಂಭಿಸಿದರು.ನಂತರ ಅದನ್ನೇ ಹವ್ಯಾಸವಾಗಿ ಮಾಡಿಕೊಂಡು ಈಗ ರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಬೆಳೆದಿದ್ದಾರೆ.ಈಜು ಆಕೆಯ ಆರೋಗ್ಯವನ್ನು ಕಾಪಾಡುವ ಜೊತೆಗೆ 200 ಕ್ಕೂ ಹೆಚ್ಚು ಪದಕ ಗಳು ಆಕೆಯ ಕೊರಳು ಅಲಂಕರಿಸುವಂತೆ ಮಾಡಿದೆ.

*ಆರೋಗ್ಯ ಸಮಸ್ಯೆಗೆ ಈಜಲು ಸಲಹೆ ನೀಡಿದ್ದ ವೈದ್ಯರು*

ಎಂ.ಎಸ್.ಕೀರ್ತನಾಳಿಗೆ ಚಿಕ್ಕವಯಸ್ಸಿನಲ್ಲೇ ಉಸಿರಾಟದ ತೊಂದರೆ ಎದುರಾಗಿತ್ತು.ಆಗಾಗ ಕೀರ್ತನಾ ವೈದ್ಯರನ್ನ ಮೊರೆ ಹೋಗುತ್ತಿದ್ದಳು.ವೈದ್ಯರು ಕೀರ್ತಾನಾಳಿಗೆ ಈಜು ಕಲಿಯುವಂತೆ ಹೇಳಿದರು.ಅದನ್ನು ಸವಾಲಾಗಿ ಸ್ವೀಕರಿಸಿದ ಕೀರ್ತಾನ ಶ್ರದ್ಧೆಯಿಂದ ಈಜುವುದನ್ನ ಕಲಿತು ಈಗ ಉತ್ತಮ ಕ್ರೀಡಾ ಪಟುವಾಗಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಈಜುಕೊಳದಲ್ಲಿ ಪುಟ್ಟಸ್ವಾಮಿ, ಸುಂದರೇಶ್ ಅವರ ಬಳಿ ತರಭೇತಿ ಪಡೆದಿದ್ದಾರೆ.ಸ್ಥಳೀಯ, ತಾಲೂಕು, ಜಿಲ್ಲೆ,ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಥಿಸಿದ ಕೀರ್ತಾನ ಹಂತ‌ ಹಂತವಾಗಿ ಪದಕ ಪಡೆಯುತ್ತಲೇ ಬಂದರು.ಮೈಸೂರು ಅಲ್ಲದೇ.ಬೆಂಗಳೂರು,ಥೈಲ್ಯಾಂಡ್ ನಲ್ಲಿ ತರಭೇತಿ ಪಡೆದಿದ್ದಾರೆ.ತಾನಜ ಕಲಿತು ಮತ್ತೊಬ್ಬರಿಗೂ ಕಲಿಸಬೇಕು ಎಂಬ ಆಸೆ ಹೊಂದಿದ್ದ ಕೀರ್ತನಾ
ಥೈಲ್ಯಾಂಡ್ ನಲ್ಲಿ ತರಭೇತಿ ಪಡೆದು ನಂತರ ಬುದ್ದಿಮಾಂಧ್ಯ ಮಕ್ಕಳಿಗೆ ಈಜು ತರಭೇತಿ ಹೇಳಿಕೊಡುತ್ತಾ ಬಂದಿದ್ದಾರೆ.

*ಪ್ರತಿಭೆಗಳಿದ್ದಾರೇ ಸೌಲಭ್ಯದ ಕೊರತೆಯಿಂದ ಗುರಿಯಿಂದ ಹಿಂದೆ ಸೆರೆದಿದ್ದಾರೆ*

ಮೈಸೂರು ನಗರ ದಿನೇ ದಿನೇ ಬೆಳೆಯುತ್ತಿದ್ದರೂ
ಉತ್ತಮ ಈಜುಕೊಳ ಇಲ್ಲ.ಸರಿಯಾದ ವ್ಯವಸ್ಥೆ ಇಲ್ಲ. ಮೂಲ ಸೌಕರ್ಯಗಳ ಕೊರತೆ ಹೆಚ್ಚಾಗಿಯೇ ಇದೆ.ಗುರಿ ಮುಟ್ಟುವ ಕ್ರೀಡಾಪಟುಗಳು ಬಡತನ ಎದುರಿಸುತ್ತುದ್ದು ಅದೆಷ್ಟೋ ಕ್ರೀಡಾಪಟುಗಳು ಹಿಂದೆ ಸೆರೆದಿದ್ದಾರೆ. ಕಲಿಯಲು ಬಂದ ಕ್ರೀಡಾಪಟುಗಳಿಗೆ ಉತ್ತಮ ರೀತಿಯಲ್ಲಿ ನಗುಮೊಗದಲ್ಲಿಯೇ
ತರಭೇತಿದಾರರು ತರಬೇತಿ ನೀಡುತ್ತಾರೆ.ಒಬ್ಬ ಕ್ರೀಡಾಪಟು ಕಡಿಮೆ ಎಂದರೇ ಎರಡು ಜೊತೆ ಸ್ವಿಮ್ಮಿಂಗ್ ಬಟ್ಟೆ ಅವಶ್ಯಕವಾಗಿರುತ್ತದೆ. ಸ್ಪರ್ಥೆಗೆ ಧರಿಸುವ ಉಡುಪಿನ ಬೆಲೆ ಸುಮಾರು 30 ರಿಂದ 35 ಸಾವಿರ ರೂಪಾಯಿಗಳಿರುತ್ತದೆ.ಕ್ರೀಡಾಪಟುಗಳಿ ಗೆದ್ದ ಮೇಲೆ ಎಲ್ಲರೂ ಪ್ರೋತ್ಸಾಹಿಸುತ್ತಾರೆ.ಅದರ ಬದಲು ಮುಂಚೆಯೇ ಕ್ರೀಡಾಪಟುಗಳಿಗೆ ಸೌಲಭ್ಯ ಒದಗಿಸಿ. ನಾವು ಧರಿಸುವ ಬಟ್ಟೆ ಬಗ್ಗೆ ಜನ ಮಾತನಾಡಿಕೊಳ್ಳುತ್ತಾರೆ.ನೀವು ನಮಗೆ ಬೆಂಬಲಿಸದಿದ್ದರೂ ಪರವಾಗಿಲ್ಲ ಟೀಕಿಸಿ ಕ್ರೀಡಾಪಟುಗಳನ್ನ ಕುಗ್ಗಿಸುವಂತೆ ಮಾಡದಿರೀ.ನಾನು ಹಂತ ಹಂತವಾಗಿ ಈಜು ಕಲಿತು ಇಂದು ರಾಷ್ಟ್ರಮಟ್ಟದಲ್ಲಿ ಪದಕ ಗಳಿಸಿದ್ದೇನೆ.ಮುಂದೊಂದು ದಿನ ಒಲಂಪಿಕ್ಸ್ ನಲ್ಲಿ ಭಾಗವಹಿಸುವ ಕನಸು ಕಾಣುತ್ತಿದ್ದೇನೆ ಎನ್ನುತ್ತಾರೆ ಎಂ.ಎಸ್.ಕೀರ್ತನಾ.

ಒಟ್ಟಾರೆ ಹೇಳುವುದಾದರೆ ಇತರೆ ಕ್ಷೇತ್ರಗಳಿಗಿಂತ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ಪಾರದರ್ಶಕತೆ ಇದೆ.ಯಾವುದೇ ಕ್ಷೇತ್ರದಲ್ಲಿ ಫಲಿತಾಂಶ ತೆರೆ ಹಿಂದೆ ನಡೆದರೆ ,ಕ್ರೀಡೆಯಲ್ಲಿ ಭಾಗವಹಿಸಿದ ಸ್ಪರ್ಥಿಗಳಿಗೆ ಅವರೆದುರಲ್ಲೇ ಫಲಿತಾಂಶ ಸಿಗುತ್ತದೆ.ವೈದ್ಯರ ಆರೋಗ್ಯದ ಈಜು ಕೀರ್ತನಾಳಾ ಸಾಧನೆಯ ಮೆಟ್ಟಿಲು ಆಗುವಂತೆ ಮಾಡಿದೆ.

ಕ್ರೀಡಾಪಟು ಎಂ.ಎಸ್. ಕೀರ್ತನಾರವರಿಗೆ ಸಹಾಯ ಮಾಡಲು ಇಚ್ಚಿಸುವ ದಾನಿಗಳು ಈ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ: 9349758768

Leave a Reply

Your email address will not be published. Required fields are marked *