ಪಿರಿಯಾಪಟ್ಟಣ:13 ಆಗಸ್ಟ್ 2022
ಸತೀಶ್ ಆರಾಧ್ಯ /ನಂದಿನಿ ಮೈಸೂರು
75 ನೇ ಸ್ವಾತಂತ್ರ್ಯಸುವರ್ಣ ಮಹೋತ್ಸವ ಅಂಗವಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಮಾಜಿ ಶಾಸಕ ಕೆ.ವೆಂಕಟೇಶ್ ಅವರ ನೇತತ್ವ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಅಂಗವಾಗಿ ಪಟ್ಟಣದಲ್ಲಿ ಕಾಲ್ನಡಿಗೆ ಜಾಥಾ ನಡೆಯಿತು.
ಪಿರಿಯಾಪಟ್ಟಣ ಹಾಗೂ ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಕಾರ್ಯಕ್ರಮವನ್ನು ಪಟ್ಟಣದ ಎಪಿಎಂಸಿ ಬಳಿ ಮಾಜಿ ಶಾಸಕ ಕೆ.ವೆಂಕಟೇಶ್ ಅವರು ಉದ್ಘಾಟಿಸಿ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್ ಪಕ್ಷದ ಪಾತ್ರ ಅಪಾರವಾಗಿದೆ, ನಮ್ಮ ದೇಶ ಆಳುತ್ತಿದ್ದ ಬ್ರಿಟಿಷರಿಂದ ದೇಶವನ್ನು ಮುಕ್ತ ಮಾಡಲು ಸ್ವಾತಂತ್ರ್ಯ ಹೋರಾಟಗಾರು ಪಟ್ಟ ಶ್ರಮಕ್ಕೆ ಬೆಲೆ ಕಟ್ಟಲಾಗದು, ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಕ್ರಾಂತಿಕಾರಿಗಳು ಹಾಗು ಮಹನೀಯರನ್ನು ಅಮೃತ ಮಹೋತ್ಸವ ಸಂದರ್ಭ ನೆನೆಪು ಮಾಡಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಆಧ್ಯ ಕರ್ತವ್ಯವಾಗಿದೆ, ಬಿಜೆಪಿ ಮತ್ತು ಆರ್ ಎಸ್ಎಸ್ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರನ್ನು ನೆನೆಯುತ್ತಿಲ್ಲ ಇನ್ನು ಕೆಲವೇ ದಿನಗಳಲ್ಲಿ ಮಹಾತ್ಮ ಗಾಂಧೀಜಿ ಹೆಸರನ್ನು ಸಹ ಮರೆಯುವಂತೆ ಮಾಡುತ್ತವೆ ಎಂದು ಆಪಾದಿಸಿದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಮಾತನಾಡಿ ಕಾಂಗ್ರೆಸಿಗರು ಸ್ವಾತಂತ್ರ್ಯದ ವಾರಸುದಾರರು, ಬೇರೆಯವರಿಗೆಲ್ಲಾ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಅವರೆಲ್ಲಾ ಡೋಂಗಿ ಸ್ವಾತಂತ್ರ್ಯ ಹೋರಾಟಗಾರರು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದವರು ಕಾಂಗ್ರೆಸಿಗರು ಹಾಗಾಗಿ ನಾವು ಈ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದೇವೆ, ಸ್ವಾತಂತ್ರ್ಯ ಹಾಗೂ ಸಂವಿಧಾನವನ್ನು ಉಳಿಸುವ ಕಾರಣಕ್ಕಾಗಿ ನಾವು ಇಂದು ಹೆಜ್ಜೆ ಹಾಕುತ್ತಿದ್ದೇವೆ, ಇಂದು ಬಿಜೆಪಿ ದೇಶದಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಿದೆ ಎಂದು ಕಿಡಿಕಾರಿದರು.
ಪಟ್ಟಣದ ಎಪಿಎಂಸಿ ಬಳಿಯಿಂದ ಬಿ.ಎಂ ಮುಖ್ಯ ರಸ್ತೆ ಸೇರಿದಂತೆ ವಿವಿಧ ವಾರ್ಡ್ ಗಳಲ್ಲಿ ಜಾನಪದ ಕಲಾತಂಡ, ವೀರಗಾಸೆ, ಡೊಳ್ಳುಕುಣಿತ, ನಗಾರಿ ಸದ್ದಿನ ಜತೆಗೆ ಕಾಂಗ್ರೆಸ್ ಕಾರ್ಯಕರ್ತರು ಹೆಜ್ಜೆ ಹಾಕಿ ದೇಶಭಕ್ತಿ ಪರ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ ಸ್ವಾಮಿ, ರಹಮತ್ ಜಾನ್ ಬಾಬು, ಕೆಪಿಸಿಸಿ ಮಾಜಿ ಸದಸ್ಯ ಟಿ.ಡಿ ಗಣೇಶ್, ಪುರಸಭಾ ಸದಸ್ಯರಾದ ಮಂಜುನಾಥ್, ರವಿ, ಪ್ರಕಾಶ್, ಮುಖಂಡರಾದ ನಿತಿನ್ ವೆಂಕಟೇಶ್, ವಿವಿಧ ಘಟಕಗಳ ಪದಾಧಿಕಾರಿಗಳಾದ ಪಿ.ಮಹದೇವ್, ಶೇಖರ್, ಸಮೀವುಲ್ಲಾ, ಮುತ್ತುರಾಣಿ, ನಿರೂಪ, ಪದ್ಮಲತಾ, ಕೆಲ್ಲೂರು ನಾಗರಾಜ್, ಪಿ.ಡಿ ತ್ರಿನೇಶ್, ಲಕ್ಷ್ಮೇಗೌಡ, ಪಿ.ಎನ್ ಚಂದ್ರಶೇಖರ್, ಸುಬ್ರಹ್ಮಣ್ಯ, ಎಂ.ಮಂಜು, ಪಿ.ಎಂ ಕುಮಾರ್, ಹರೀಶ್, ಜೆ.ಮೋಹನ್, ಮಹೇಂದ್ರಕುಮಾರ್, ಪಂಚವಳ್ಳಿ ಲೋಹಿತ್, ಪುರುಷೋತ್ತಮ್, ಸಂತೋಷ್ ಗೌಡ, ಗಿರೀಶ್ ಸೇರಿದಂತೆ ತಾಲ್ಲೂಕಿನ ವಿವಿಧೆಡೆಯ ಗ್ರಾ.ಪಂ ಸದಸ್ಯರು, ಪಕ್ಷದ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಇದ್ದರು.