ನಂದಿನಿ ಮೈಸೂರು
ಸುತ್ತೂರಿನಲ್ಲಿ ಶ್ರೀ ಪಟ್ಟಲದಮ್ಮ ಹಾಗೂ ಬಿಸಿಲು ಮಾರಮ್ಮನವರ ಹಬ್ಬ ಈ ಬಾರೀ ಸಾಂಪ್ರದಾಯಕವಾಗಿ ವಿಜೃಂಭಣೆಯಿಂದ ಜರಗಿತು.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದಲ್ಲಿ ಕಳೆದೆರಡು ವರ್ಷಗಳಿಂದ ಕೊವೀಡ್ ಮಹಾಮಾರಿ ಹಿನ್ನೆಲೆ ಜನಜೀವನ ಅಸ್ಥವ್ಯಸ್ಥವಾಗಿತ್ತು.ಈ ಹಿನ್ನೆಲೆ ಗ್ರಾಮದಲ್ಲಿ ನಡೆಯುತ್ತಿದ್ದ ಪಟ್ಟಲದಮ್ಮ ಹಾಗೂ ಬಿಸಿಲು ಮಾರಮ್ಮನ ಹಬ್ಬ ಸರಳವಾಗಿ ನಡೆದಿತ್ತು.ಇದೀಗ ಕೋವೀಡ್ ಸೋಂಕು ಕಡಿಮೆಯಾಗಿರುವುದರಿಂದ ಹಬ್ಬ ವಿಜೃಂಭಣೆಯಿಂದ ಆಚರಿಸಲಾಗಿದೆ.
ಈ ಹಬ್ಬದಲ್ಲಿ ಮಹಿಳೆಯರು ಮಕ್ಕಳು ಪಟ್ಟಲದ ಅಮ್ಮನವರಿಗೆ ತಂಬಿಟ್ಟು ತಯಾರಿಸಿ ದೇವಿಗೆ ತಂಪು ಮಾಡಿದರು.
ಜಾನಪದ ಕಲಾತಂಡ, ವೀರ ಮಕ್ಕಳು, ಕುಣಿತ ತಂಡ, ಗ್ರಾಮಗಳ ನಾಯಕ ಜನಾಂಗದವರು ಸತ್ತಿಗೆ. ಸೂರುಪಾನಿಗಳು ಹೊತ್ತು ಸಾಗಿದರು. ಗ್ರಾಮಗಳ ಮುಖಂಡರು, ವೀರ ಮಕ್ಕಳು ಹೆಜ್ಜೆ ಹಾಕಿ ಹಬ್ಬದ ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿದರು.
ಒಬ್ಬ ವ್ಯಕ್ತಿಯ ಮೇಲೆ ದೇವರು ಬರುತ್ತದೆ ಅವರು ಹೊಂಬಾಳೆ ಕಳಸ ಹೊತ್ತು ಗ್ರಾಮದ ಬೀದಿ ಬೀದಿಯಲ್ಲಿ ಸಂಚರಿಸಿ ಭಕ್ತರು ತಮ್ಮ ಇಷ್ಠಾರ್ಥವಾಗಲಿ ಎಂದು ಬೇಡಿಕೊಂಡವರಿಗೆ ಮುಡಿಯಲ್ಲಿರುವ ಹೂವನ್ನು ನೀಡಿ ಬೇಡಿಕೆ ಈಡೇರಿಸುವಂತೆ ಮುಂದೆ ಸಾಗುತ್ತಾರೆ.
ನಂತರ ಸೂರ್ಯ ಮುಳುಗುವ ಸಮಯಕ್ಕೆ ಬಿಸಿಲು ಮಾರಮ್ಮನವರ ಕೊಂಡೋತ್ಸವ ಜರುಗಿತು.
ಸುತ್ತೂರು ಗ್ರಾಮ ಅಲ್ಲದೇ ಹೊಸಕೋಟೆ. ಕುಪ್ಪರವಳ್ಳಿ. ಮುಂತಾದ ಗ್ರಾಮಗಳಿಂದ ಭಕ್ತರು ಹಬ್ಬಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.