ನಂದಿನಿ ಮೈಸೂರು
ಪ್ರತಿಯೊಂದು ಗ್ರಾಮ ಪಂಚಾಯತಿಗೂ ಒಂದು ಕ್ರೀಡಾಂಗಣ ಅವಶ್ಯಕತೆ ಇದೆ ಎಂದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ.
ಸುತ್ತೂರು:ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ಕ್ರೀಡಾಂಗಣ ನಿರ್ಮಿಸಲು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದು ವರುಣ ಕ್ಷೇತ್ರದ ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ವರುಣ ಕ್ಷೇತ್ರಕ್ಕೆ ಸೇರಿದ ಚಿಕ್ಕೊಮ್ಮ ಸಿಪಿಎಲ್. ಅಸೋಸಿಯನ್ ತಂಡದ ವತಿಯಿಂದ ಹಮ್ಮಿಕೊಂಡಿರುವ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಯುವಕರು ದೈಹಿಕವಾಗಿ ಆರೋಗ್ಯವಂತರಾಗಲು ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ. ಅಲ್ಲದೆ ಮನುಷ್ಯನಿಗೆ ಆರೋಗ್ಯ ಭಾಗ್ಯವಂತರಾಗಲು ಜೀವನಪೂರ್ತಿ ಆರೋಗ್ಯ ದಿಂದ ಬದುಕಲು ಸಾಧ್ಯವಾಗುತ್ತದೆ.
ಆದ್ದರಿಂದ ಮುಂದಿನ ಅವಧಿಯಲ್ಲಿ ಕ್ಷೇತ್ರದಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿ ಒಂದು ಕ್ರೀಡಾಂಗಣ ನಿರ್ಮಿಸಿಕೊಡಲು ಸರ್ಕಾರಕ್ಕೆ ಬೇಡಿಕೆ ಇಡುತ್ತೇನೆ ಎಂದು ಯುವಕರಿಗೆ ಭರವಸೆ ನೀಡಿದರು.
ಚಿಕ್ಕೊಮ್ಮ. ಕಾರಾಪುರ. ಕಾರ ಮೊಳೆ. ತಗಡೂರು. ಚಿನ್ನಂಬಳ್ಳಿ. ಸೇರಿದಂತೆ. ಸುತ್ತಮುತ್ತ ಗ್ರಾಮಗಳ 32 ಕ್ರಿಕೆಟ್ ತಂಡಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಪ್ರಥಮ ಗುತ್ತಿಗೆದಾರರಾದ ದಾಸನೂರು ನಾಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ತಾಲೂಕು ಪಂಚಾಯಿತಿ ಸದಸ್ಯ ಸವಿತ ಲೋಕೇಶ್. ಟಿ ಪರಶಿವಮೂರ್ತಿ ,ರಾಜಶೇಖರ ಮೂರ್ತಿ,ನಾಗರಾಜು, ಮಲ್ಲು, ಕುಮಾರ್., ಕ್ರಿಕೆಟ್ ತಂಡದ ಮುಖಂಡರು. ಪದಾಧಿಕಾರಿಗಳು, ಗ್ರಾಮಗಳ ಮುಖಂಡರು. ಗ್ರಾಮ ಪಂಚಾಯತಿ ಸದಸ್ಯರು ಭಾಗಿಯಾಗಿದ್ದರು.