ನಂದಿನಿ ಮೈಸೂರು
ಸತೀಶ್ ಜಾರಕಿಹೊಳಿ ತೇಜೋವಧೆಯನ್ನು ಖಂಡಿಸಿ ಮೈಸೂರಿನಲ್ಲಿ ಮಾನವ ಬಂಧುತ್ವ ವೇದಿಕೆ,ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟ,ಪ್ರಗತಿ ಪರ ಸ್ವಾಮೀಜಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ಮೈಸೂರಿನ ಪುರ ಭವನ ದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮುಂಭಾಗ ಜಮಾಹಿಸಿದ ಪ್ರತಿಭಟನಾಕಾರರು ಸತೀಶ್ ಜಾರಕಿಹೊಳಿರವರ ಏಳಿಗೆ ಸಹಿಸಲಾಗದೇ ತೇಜೋವಧೆ ಮಾಡುತ್ತಿರುವವರ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ ಹಾಗೂ ದ್ಯಾವಪ್ಪ ನಾಯಕ ಮಾತನಾಡಿ
ಬೆಳಗಾವಿ ಜಿಲ್ಲೆ ನಿಪ್ಪಾಣಿಯಲ್ಲಿ, ನವೆಂಬರ್ 6 ರಂದು ನಡೆದ ಮಾನವ ಬಂಧುತ್ವ ವೇದಿಕೆಯ ಮನೆ ಮನೆಗೆ ಬುದ್ಧ ಬಸವ, ಅಂಬೇಡ್ಕರ್’ ಕಾರ್ಯಕ್ರಮದಲ್ಲಿ ವೇದಿಕೆಯ ಸಂಸ್ಥಾಪಕರಾದ ಸತೀಶ್ ಜಾರಕಿಹೊಳಿಯವರು ನೀಡಿರುವ, – ಹಿಂದೂ ಪದದ ಹೇಳಿಕೆ ಐತಿಹಾಸಿಕ ಸತ್ಯವೂ, ಸಾರ್ವಕಾಲಿಕವಾಗಿ ಈ ನೆಲದಲ್ಲಿ ಚರ್ಚೆಯಾಗಬೇಕಾದ ಗಂಭೀರ ವಿಚಾರವೂ ಆಗಿದೆ. ಹಿಂದೂ’ ಎಂಬ ಶಬ್ದ ಪಾರಸಿ ಅಥವಾ ಇರಾನಿ ಭಾಷೆಯ ಮೂಲವಾಗಿದ್ದು ಅಶ್ಲೀಲ ಅರ್ಥವನ್ನು ಧ್ವನಿಸುತ್ತದೆ ಎಂದಷ್ಟೇ ಹೇಳಿ, ಇದಕ್ಕೆ ಗ್ರಂಥಗಳ ಆಧಾರವನ್ನು ನೀಡಿದ್ದಾರೆ. ಅವರು ಎಲ್ಲಿಯೂ ಧರ್ಮದ ವಿಚಾರ ಮಾತನಾಡಿಲ್ಲ.ಪ್ರಧಾನಿ ಮೋದಿರವರು ಹಿಂದೂ ಅಂತ ಮಾತ್ರ ರಾಜಕಾರಣ ಮಾಡಲಿ.ಪ್ರಶ್ನೆಗೆ ಉತ್ತರಿಸಲು ಸಾಮರ್ಥ್ಯವಿಲ್ಲದ ಮನುವಾದಿಗಳು ಕುತಂತ್ರದಿಂದ ವಿಚಾರದ ಹಿಂದಿನ ಸತ್ಯವನ್ನೇ ನಾಶ ಮಾಡಲು ಯತ್ನಿಸುತ್ತಾ ಬಂದಿದ್ದಾರೆ.ರಾಜಕೀಯ ಒತ್ತಡದಿಂದ ಸತೀಶ್ ಜಾರಕಿಹೊಳಿಯವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ಸಿಎಂ ಬಸವರಾಜ ಬೊಮ್ಮಾಯಿರವರಿಗೆ ಪತ್ರ ಬರೆದು ಸಮಿತಿ ರಚಿಸುವಂತೆ ಮನವಿ ಮಾಡಿದ್ದಾರೆ.ಮುಂದಿನ ದಿನಗಳಲ್ಲಿ ನಿಪ್ಪಾಣಿಯಲ್ಲಿ ನಡೆದ ಕಾರ್ಯಕ್ರಮದಂತೆ ಮೈಸೂರಿನಲ್ಲಿಯೂ ಕಾರ್ಯಕ್ರಮ ಆಯೋಜಿಸಿ ಸತೀಶ್ ಜಾರಕಿಹೊಳಿಯವರನ್ನೇ ಆಹ್ವಾನಿಸಲಿದ್ದೇವೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಚೋರನಹಳ್ಳಿ ಶಿವಣ್ಣ, ಬಸವರಾಜು, ಪುರುಷೋತ್ತಮ್,ಮಂಜುನಾಥ್, ಶಿವರಾಮ್,ದೇವರಾಜ್ ಕಾಟೂರು,ರವಿ,ಜಯಕುಮಾರ್,ಮರಿದೇವಯ್ಯ ಸೇರಿದಂತೆ 200 ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.