ಮೈಸೂರು:22 ಅಕ್ಟೋಬರ್ 2021
ನಂದಿನಿ
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಗೈರು ಹಾಜರಾಗಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ರವರು ಬೇಷರತ್ ಕ್ಷಮೆ ಯಾಚಿಸಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪರಿಶಿಷ್ಟ ಪಂಗಡ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಕ್ಯಾತನಹಳ್ಳಿ ನಾಗರಾಜು ಆಗ್ರಹಿಸಿದ್ದಾರೆ.
ರಾಮಾಯಣವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಸರ್ಕಾರವೇ ಕೋವಿಡ್ -19 ರ ನಿಯಮದನುಸಾರ ಸರಳವಾಗಿ ಆಚರಿಸುತ್ತಿದ್ದು , ಸರ್ಕಾರದ ಸಹಕಾರ ಸಚಿವರಾಗಿ ಮತ್ತು ಮೈಸೂರು ಉಸ್ತುವಾರಿ ಸಚಿವರಾಗಿ ಮೈಸೂರು ಜಿಲ್ಲಾಡಳಿತದಿಂದ ಆಚರಿಸುತ್ತಿರುವ ಕಾರ್ಯಕ್ರಮದಲ್ಲಿ ಸರ್ಕಾರದ ಪರವಾಗಿ ಹಾಜರಾಗದೆ , ಗೈರು ಹಾಜರಾಗಿರುವುದು ಖಂಡನಾರ್ಹ. ಜಯಂತಿಗಳನ್ನು ಜಿಲ್ಲಾಡಳಿತ ಆಚರಣೆ ಮಾಡುವ ಸಂದರ್ಭದಲ್ಲಿ ಈ ರೀತಿ ಗೈರು ಹಾಜರಾಗಬಾರದಿತ್ತು.
ಶ್ರೀ ರಾಮನ ಹೆಸರಿನಲ್ಲಿ ರಾಷ್ಟ್ರ ಹಾಗೂ ರಾಜ್ಯದಲ್ಲಿ ರಾಜಕೀಯ ಮಾಡಿ , ಅಧಿಕಾರಕ್ಕೆ ಬಂದ ಪಕ್ಷದ ರಾಜ್ಯ ಸಚಿವರಿಂದಲೇ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಜನಾಂಗದ ಬೇಡಿಕೆಗಳನ್ನು ವೇದಿಕೆ ಕಾರ್ಯಕ್ರಮಗಳಲ್ಲಿ ಈಡೇರಿಸುವ ವಿಷಯವನ್ನು ಸಮಾಜದ ಮುಖಂಡರು ಪ್ರಸ್ತಾವ ಮಾಡುವ ಸಂದರ್ಭದಲ್ಲಿಯೇ ಕಾರ್ಯಕ್ರಮಕ್ಕೆ ಗೈರು ಹಾಜರಾಗಿರುವ ಬದ್ಧತೆಯು ಪ್ರಶ್ನಾರ್ಥಕವಾಗಿದೆ.ಕೂಡಲೇ ಉಸ್ತುವಾರಿ ಸಚಿವರು ಬೇಷರತ್ ಕ್ಷಮೆಯಾಚಿಸುವಂತೆ ಆಗ್ರಹಿಸಿದರು.
ರೋಹಿತ್, ಯೋಗೇಶ್ ,ಅವಿನಾಶ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.