ಪ್ಯಾನ್ ಇಂಡಿಯಾ ಸಿನಿಮಾ ‘ಸ್ಪಾರ್ಕ್ ಲೈಫ್’ ಟೀಸರ್ ರಿಲೀಸ್…ಯುವ ಪ್ರತಿಭೆ ವಿಕ್ರಾಂತ್ ಆಕ್ಷನ್ ಧಮಾಕ

ನಂದಿನಿ ಮೈಸೂರು

*ಪ್ಯಾನ್ ಇಂಡಿಯಾ ಸಿನಿಮಾ ‘ಸ್ಪಾರ್ಕ್ ಲೈಫ್’ ಟೀಸರ್ ರಿಲೀಸ್…ಯುವ ಪ್ರತಿಭೆ ವಿಕ್ರಾಂತ್ ಆಕ್ಷನ್ ಧಮಾಕ..*

ಈಗಂತೂ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಜೋರಾಗಿದೆ. ಎಲ್ಲಾ ವುಡ್ ಗಳಲ್ಲಿಯೂ ಸಾಲು ಸಾಲು ಪ್ಯಾನ್ ಇಂಡಿಯಾ ಚಿತ್ರಗಳು ಅನೌನ್ಸ್ ಆಗುತ್ತಲೇ ಇದೆ. ಅದರ ಮುಂದುವರೆದ ಭಾಗವಾಗಿ ತೆಲುಗಿನಲ್ಲಿ ಸ್ಪಾರ್ಕ್ ಲೈಫ್ ಎಂಬ ಸಿನಿಮಾ ತಯಾರಾಗ್ತಿದ್ದು, ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. 2 ನಿಮಿಷ 2 ಸೆಕೆಂಡ್ ಒರುವ ಟೀಸರ್ ಕಂಪ್ಲೀಟ್ ಆಕ್ಷನ್ಸ್ ಗಳಿಂದ ಕೂಡಿದೆ. ಯುವ ಪ್ರತಿಭೆ ವಿಕ್ರಾಂತ್ ನಾಯಕನಾಗಿ ನಟಿಸಿದ್ದು, ಮೆಹ್ರೀನ್ ಫಿರ್ಜಾದಾ ಹಾಗೂ ರುಕ್ಸಾರ್ ಧಿಲ್ಲೋನ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ಧಗಧಗಿಸುವ ಬೆಂಕಿ, ಹೆಣಗಳ ರಾಶಿ, ರಕ್ತಪಾತದಿಂದ ಆರಂಭವಾಗುವ ಟೀಸರ್ ನಲ್ಲಿ ನಾಯಕನನ್ನು ಭರ್ಜರಿ ಆಕ್ಷನ್ ಮೂಲಕ ಪರಿಚಯಿಸಲಾಗಿದೆ, ಪ್ರೀತಿ, ಪ್ರೇಮ, ತನಿಖೆ ಸುತ್ತ ಟೀಸರ್ ಸಾಗುತ್ತದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಸೈಕಾಲಜಿಕಲ್ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸ್ಪಾರ್ಕ್ ಲೈಫ್ ಸಿನಿಮಾಗೆ ಡೆಫ್ ಫ್ರಾಗ್ ಪ್ರೊಡಕ್ಷನ್ ಆಕ್ಷನ್ ಕಟ್ ಹೇಳಿದ್ದು, ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಮಲಯಾಳಂ ನಟ ಗುರು ಸೋಮಸುಂದರಂ ಮತ್ತು ನಾಸರ್, ಸುಹಾಸಿನಿ ಮಣಿರತ್ನಂ, ವೆನ್ನೆಲ ಕಿಶೋರ್, ಸತ್ಯ, ಶ್ರೀಕಾಂತ್ ಅಯ್ಯಂಗಾರ್, ಅನ್ನಪೂರ್ಣಮ್ಮ, ರಾಜಾ ರವೀಂದ್ರ ತಾರಾಬಳಗದಲ್ಲಿದ್ದಾರೆ. ಹೃದಯಂ ಸಿನಿಮಾ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನವಿರುವ ಸ್ಪಾರ್ಕ್ ಲೈಫ್ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಮೂಡಿ ಬರಲಿದೆ.

Leave a Reply

Your email address will not be published. Required fields are marked *