ಕಲ್ಲಿನ ಪೊಟರೆಗೆ ಸಿಲುಕಿದ್ದ ನಾಗರಹಾವಿನ ಪ್ರಾಣ ಉಳಿಸಿದ ಸ್ನೇಕ್ ರಮೇಶ್

ಮೈಸೂರು:12 ಮೇ 2022

ನಂದಿನಿ ಮೈಸೂರು

ಕಲ್ಲಿನ ಪೊಟರೆಗೆ ಬಾಲ ಸಿಕ್ಕಿಹಾಕಿಕೊಂಡು ನರಳುತ್ತಿದ್ದ ನಾಗರಹಾವು ರಕ್ಷಣೆ ಮಾಡುವಲ್ಲಿ ಸ್ನೇಕ್ ರಮೇಶ್ ಯಶಸ್ವಿಯಾಗಿದ್ದಾರೆ.

ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗವಿರುವ ಬೇಡನ್ ಪೊವೆಲ್ ಶಾಲೆಯ ಬಳಿ ಇರುವ ಕಲ್ಲಿನ ಸಂಧಿಯಲ್ಲಿ ನಾಗರಹಾವು ಪ್ರತ್ಯಕ್ಷವಾಗಿತ್ತು.ಶಾಲಾ ಸಿಬ್ಬಂದಿಗಳು ನಾಗರಹಾವು ನೋಡಿ ಭಯಪಟ್ಟಿದ್ರು.
ಈ ವೇಳೆ ಮೈಸೂರಿನ ಉರಗ ತಜ್ಞ ರಮೇಶ್ ರವರಿಗೆ ದೂರವಾಣಿ ಕರೆ ಮಾಡಿ ನಾಗರ ಹಾವು ಇರುವುದಾಗಿ ಮಾಹಿತಿ ನೀಡಿದ್ದಾರೆ.ಕರೆಗೆ ಸ್ಪಂದಿಸಿದ ಸ್ನೇಕ್ ರಮೇಶ್ ಸ್ಥಳಕ್ಕೆ ಆಗಮಿಸಿದರು.ನಂತರ ಕಲ್ಲಿನ ಪೊಟರೆಗೆ ಸೇರಿಕೊಂಡಿದ್ದ ನಾಗರಹಾವನ್ನ ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.

ನಾಗರಹಾವು ಕಲ್ಲಿನ ಪೊಟರೆಯೊಳಗೆ ಸೇರಿಕೊಂಡು ನಂತರ ಬಾಲ ಸಿಕ್ಕಿಕೊಂಡು ಹೊರ ಬರಲಾರದೇ ಕಂಗಾಲಾಗಿತ್ತು.ಹಾವನ್ನ ಜೋರಾಗಿ ಎಳೆದರೇ ಅದು ಸಾಯುವ ಹಂತಕ್ಕೆ ತಲುಪುತ್ತದೆ ಎಂದು ತಿಳಿದ ನಾನು ಎರಡು ವರೆ ಗಂಟೆ ಕಾಲ ಹರ ಸಾಹಸ ಮಾಡಿ ದಿಂಬಿನ ಸಹಾಯದಿಂದ ನಾಗರಹಾವು ರಕ್ಷಣೆ ಮಾಡಿದೆ.ನಾನು 20 ವರ್ಷಗಳಿಂದ ಸುಮಾರು 12 ಸಾವಿರ ಹಾವುಗಳನ್ನ ಹಿಡಿದಿದ್ದೇನೆ ಆದರೇ ಈ ತರ ಕಲ್ಲಿನ ಪೊಟರೆಗೆ ಸಿಲುಕಿ ನರಳುತ್ತಿದ್ದ ಹಾವನ್ನ ನಾನು ರಕ್ಷಣೆ ಮಾಡಿರಲಿಲ್ಲ.ಹಾವನ್ನ ಕಂಡಾಗ ಯಾರು ಹಿಂಸಿಸಬೇಡಿ,ತಕ್ಷಣ ನನಗೆ ಕರೆ ಮಾಡಿ 9945108998
ಎಂದು ಸ್ನೇಕ್ ರಮೇಶ್ ತಿಳಿಸಿದರು.


ಅದೇನೇ ಆಗಲೀ ಉರಗ ತಜ್ಞ ರಮೇಶ್ ಚಾಣಾಕ್ಷತನದಿಂದ
ಸ್ಕೂಲ್ ನಲ್ಲಿ ಪ್ರತ್ಯಕ್ಷಗೊಂಡ ನಾಗರಹಾವಿನ ರಕ್ಷಣೆ ಮಾಡಿದ್ದು ಶಾಲಾ ಮಕ್ಕಳು
ಅಪಾಯದಿಂದ ಬಚಾವಾಗಿದ್ದಾರೆ.

Leave a Reply

Your email address will not be published. Required fields are marked *