ಮೈಸೂರು:19 ಮೇ 2022
ನಂದಿನಿ ಮೈಸೂರು
ಯುಗಾಂತರ, ರಜಿಯಾ ರಾಮ್,ಮರೆತು ಹೋದವರು, ಈ ಮೂರು ಧಾರಾವಾಹಿಗಳು ಮೇ 23 ರಿಂದ ಸಿರಿ ಕನ್ನಡದಲ್ಲಿ ಪ್ರಸಾರ ವಾಗಲಿದೆ ಎಂದು ನಿರ್ದೇಶಕ ಎಸ್.ಎನ್.ಸೇತುರಾಂ ತಿಳಿಸಿದರು.
ನಂಜುಂಡೇಶ್ವರ ಪ್ರೋಡಕ್ಷನ್ ನಲ್ಲಿ ನಿರ್ಮಾಣವಾಗಿರುವ ಅಂತರಾಳದ ಕೂಗು ಯುಗಾಂತರ ಧಾರಾವಾಹಿ ಅರುಂಧತಿ ಎಂಬ ಜಿಲ್ಲಾಧಿಕಾರಿಯ ಸುತ್ತ ನಡೆಯುವ ಸಾಮಾಜಿಕ ಮತ್ತು ಭಾವ ಸಂಘರ್ಷದ ಕಥೆಯಾಗಿದೆ.ಅತ್ಯುತ್ತಮ ಸಂಭಾಷಣೆ, ಮನ ತುಂಬೋ ಭಾವುಕತೆ ಧಾರಾವಾಹಿಯ ಜೀವಾಳವಾಗಿದೆ.ಕಥೆ,ಚಿತ್ರಕಥೆ,ಸಂಭಾಷಣೆ,ನಿರ್ದೇಶನ ನಾನೇ ಮಾಡಿದ್ದೇನೆ.ಸಿರಿ ಕನ್ನಡದಲ್ಲಿ ರಾತ್ರಿ 9:30 ಕ್ಕೆ ಪ್ರಸಾರವಾಗಲಿದೆ ವೀಕ್ಷಕರು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ರಜಿಯಾ ರಾಮ್ ಧಾರಾವಾಹಿ ಧರ್ಮ ಎಲ್ಲಕ್ಕೂ ಮಿಗಿಲು ಎಂಬ ಭಾವ ,ಭಾರತದ ಮಣ್ಣಿನಲ್ಲಿ ಶತ ಶತಮಾನಗಳಿಂದಲೂ ಆಳವಾಗಿ ಬೇರೂರಿದೆ.ಅದರಲ್ಲೂ ಹಿಂದೂ ಮುಸ್ಲಿಂ ವಿಚಾರ ಬಂದಾಗ ಅಂದಿನಿಂದ ಇಂದಿನವರೆಗೂ ಐಕ್ಯತೆಯ ಮಾತುಗಳು ಕೇಳಿ ಬಂದಿದ್ದರೂ ಎಲ್ಲ ಮಾತುಗಳನ್ನು ಮೀರಿ ಧರ್ಮದ ಕಾವು ಹೊಗೆಯಾಡುತ್ತಲೆ ಇದೆ.ಅದಕ್ಕೆ ಹಿರಿತೆರೆಯಲ್ಲಿ ಮೂಡಿ ಬಂದ ಬಾಂಬೆ,ಗದಾರ್ ಏಕ್ ಪ್ರೇಮ್ ಕಥಾ ,ವೀರ್ ಝೂರಾ ಸಾಕ್ಷಿ.ಈಗ ಪ್ರಪ್ರಥಮ ಬಾರಿಗೆ ಹಿಂದೂ ಮುಸ್ಲಿಂ ಐಕ್ಯತೆ ಸಾರುವ ಧರ್ಮಕ್ಕೂ ಮಿಗಲಾದ ವಿಶಿಷ್ಟ ಪ್ರೇಮಕಥೆಯಾಗಿದೆ ಎಂದು ರಾಜೇಶ್ ರಾಜ್ ಘಟ್ಟ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ರಜಿಯಾ ರಾಮ್ ಧಾರಾವಾಹಿ ನಿರ್ದೇಶಕ ಸುಧಾಕರ್ ರೆಡ್ಡಿ,ನಟಿ ಶಿಲ್ಪ,ನಟ ಅಥರ್ವಾ ಭಾಗಿಯಾಗಿದ್ದರು.