ನಂದಿನಿ ಮೈಸೂರು
ಗಾಯಕರಿಗೆ ತನ್ಮಯತೆ ಅತ್ಯಂತ ಮುಖ್ಯ.
ಮೈಸೂರು;ಸಾಂಸ್ಕೃತಿಕ ನಗರ ಮೈಸೂರು ಸಂಗೀತ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದೆ.
ನೂರಾರು ಗಾಯಕರು ಬದುಕು ಕಟ್ಟಿಕೊಂಡಿದ್ದಾರೆ.ಹೊಸ ಗಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತಿದ್ದಾರೆ.
ಗಾಯಕನಿಗೆ ಸತತ ಅಭ್ಯಾಸ ಸಹನೆ ಪರಿಶ್ರಮ ಮತ್ತು ತನ್ಮಯತೆ ಮುಖ್ಯವಾದದು ಎಂದು ನಟ ಶಂಕರ್ ಅಶ್ವತ್ಥ್ ಅಭಿಪ್ರಾಯಪಟ್ಟರು.
ಜಿಲ್ಲಾ ಸಾಹಿತ್ಯ ಭವನದಲ್ಲಿ ಮೈಸೂರಿನ ಗಾನ ವೈದ್ಯಲೋಕ ಸಂಸ್ಥೆ ಆಯೋಜಿಸಿದ್ದ ಹಿರಿಯ ಕವಿಗಳ ಭಾವಗೀತೆ ಹಾಗೂ ಭಾವಪೂರ್ಣ ಚಿತ್ರಗೀತೆಗಳ “ಭಾವ ಸಮ್ಮಿಲನ” ದೂ ಮರೆಯದ ಹಾಡು ಕಾರ್ಯಕ್ರಮಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮುಸಿದ್ದ ಪ್ರಾಧ್ಯಾಪಕಿ
ವಿದುಷಿ ಡಾ ಜ್ಯೋತಿ ಶಂಕರ್
ಮಾತನಾಡಿ ಸದಾ ಒತ್ತಡದಲ್ಲೇ ಕಾರ್ಯನಿರ್ವಹಿಸುವ ವೈದ್ಯರು ಪ್ರವೃತ್ತಿಯಾಗಿ ಸಂಗೀತದ ಕಡೆ ಮುಖಮಾಡಿರುವುದು ಸಂತೋಷದ ವಿಚಾರ. ಸಂಗೀತ ಥೆರಪಿ ಎಷ್ಟೋ ಖಾಯಿಲೆಗಳಿಗೆ
ಪರಿಹಾರ ಮಾರ್ಗವಾಗಿರುವುದನ್ನು ನಾವು ಮರೆಯುವಂತಿಲ್ಲ. ವೈದ್ಯ ಜಗತ್ತು ವ್ಯಾಪಾರೀಕರಣ ಆಗುತ್ತಿದೆ ಎನ್ನುವ ಹೊತ್ತಿನಲ್ಲಿ ನಮ್ಮ ಮೈಸೂರಿನ ವೈದ್ಯರು ಸಾಂಸ್ಕೃತಿಕ ಅಭಿರುಚಿಯ ಕಡೆ
ಒಲವು ತೋರಿರುವುದು ನಮ್ಮ ಮೈಸೂರಿಗೆ ಹೆಮ್ಮೆಯ ಸಂಗತಿ.
ಮನುಷ್ಯನಿಗೆ ಭಾವ ಸಮನ್ವಯ
ಬಹಳ ಮುಖ್ಯ. ವೈದ್ಯರ ಈ ಗಾನ ಯಾನ ಅವರಲ್ಲಿನ ಭಾವಕೋಶ ವಿಸ್ತರಣೆಗೆ ಒಳ್ಳೆಯ ಅವಕಾಶವಾಗಿದೆ ಎಂದರು.
ಗಾನ ವೈದ್ಯಲೋಕ ತಂಡದ ಗಾಯಕರಾದ
ಡಾ ವೈ ಡಿ ರಾಜಣ್ಣ
ಡಾ ಟಿ ರವಿಕುಮಾರ್
ಡಾ ಎ ಎಸ್ ಪೂರ್ಣಿಮಾ
ಶ್ರೀಲತಾ ಮನೋಹರ್
ಡಾ ಶ್ಯಾಂಪ್ರಸಾದ್
ಡಾ ಚಿನ್ನನಾಗಪ್ಪ
ಸಿ ಎಸ್ ವಾಣಿ ಪಾರ್ಥಸಾರಥಿ
ಡಾ ಶಿವಕುಮಾರ್ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹಿರಿಯ ರಂಗಕರ್ಮಿ ರಾಜಶೇಖರ ಕದಂಬ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ ವೈ ಡಿ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು.ಸಂಸ್ಥೆಯ ಅಧ್ಯಕ್ಷ ಡಾ ಟಿ ರವಿಕುಮಾರ್ ಸ್ವಾಗತಿಸಿದರು. ಉಪನ್ಯಾಸಕ ಎಡೆಯೂರು ಸಮೀಉಲ್ಲಾ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಂಶುಪಾಲ ಮನೋಹರ್ ಮಹಿಳಾ ಮುಖಂಡರಾದ ಕಮಲಾ ಅನಂತರಾಮು ಡಾ ಡಿ ಟಿ ಜಯರಾಮಯ್ಯ ಡಾ ಗೋಪಿನಾಥ್ ಡಾ ಬಿ ಮಂಜುನಾಥ್.ಸಾಯಿ ಮೆಲೋಡಿಸ್ ಸಂಸ್ಥೆಯ ಬೆಟ್ಟೇಗೌಡ ಡಾ ರಾಜಕುಮಾರ್ ಕಲಾ ಸೇವಾ ಟ್ರಸ್ಟ್ ಅಧ್ಯಕ್ಷ ಗಾಯಕ ಜಯರಾಮು ಹಿರಿಯ ಗಾಯಕರಾದ ಸ್ಟಾನ್ಲಿ ಪಾರ್ಕರ್ ಜಯಲಕ್ಷ್ಮಿ ಮೂರ್ತಿ ಸುಧೀಂದ್ರ.ನಾಗರಾಜು ಮತ್ತಿತರರು ಹಾಜರಿದ್ದರು.