ಮೈಸೂರು:12 ಫೆಬ್ರವರಿ 2022
ನಂದಿನಿ ಮೈಸೂರು
ಮೈಸೂರಿನ ಸದರನ್ ಸ್ಟಾರ್ ಹೋಟೆಲ್‌ನಲ್ಲಿ 9 ದಿನಗಳ ಕಾಲ ನಡೆಯುವ ‘ ಸಿಲ್ಕ್ ಇಂಡಿಯಾ -2022 ‘ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ದೊರೆಯಿತು .
ಹಸ್ತಶಿಲ್ಪಿ ವತಿಯಿಂದ ಫೆ .11 ರಿಂದ 19 ರವರೆಗೆ ಹಮ್ಮಿಕೊಂಡಿರುವ ಭಾರತದ ಎಲ್ಲಾ ರಾಜ್ಯಗಳಿಂದ ಪರಿಶುದ್ಧ ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಸುನಂದಾ ಪಾಲನೇತ್ರ ಚಾಲನೆ ನೀಡಿದರು .
ಬಳಿಕ ಮಾತನಾಡಿದ ಅವರು , ಇಂತಹ ಮೇಳಗಳಿಂದ ಕುಶಲಕರ್ಮಿಗಳು ಮತ್ತು ನೇಕಾರರಿಗೆ ಪ್ರೋತ್ಸಾಹ ದೊರಕಲಿದೆ . ನೇರವಾಗಿ ಅವರ ಉತ್ಪನ್ನಗಳು ಗ್ರಾಹಕ ರಿಗೆ ತಲುಪಿಸುವ ವ್ಯವಸ್ಥೆ ಇದಾಗಿದೆ . ಉತ್ತಮ ಗುಣಮಟ್ಟದ ರೇಷ್ಮೆ ಸೀರೆಗಳು ಮೇಳದಲ್ಲಿ ಇದ್ದು , 2 ಸಾವಿರ ರೂ . ನಿಂದ 2 ಲಕ್ಷ ರೂ.ವರೆಗಿನ ಸೀರೆಗಳು ಲಭ್ಯವಿವೆ . ಮೈಸೂರಿನ ಜನರಿಗೆ ಇದೊಂದು ಒಳ್ಳೆಯ ಅವಕಾಶವಾಗಿದ್ದು , ಮೇಳ ಯಶಸ್ವಿಯಾ ಗಲಿ ಎಂದು ಶುಭ ಹಾರೈಸಿದರು ಸಿಲ್ಕ್ ಇಂಡಿಯಾ 2022 ‘ ಮೇಳದಲ್ಲಿ 48 ಮಳಿಗೆಗಳಿವೆ. ತರ್ಸ್ಸರೇಷ್ಮೆ ಸೀರೆಗಳು , ಕ್ರೇಪ್ ಮತ್ತು ಜಾರ್ಜೆಟ್ ಸಿಲ್ಕ್ ಸೀರೆಗಳು , ಅರಿಣಿ ರೇಷ್ಮೆ ಸೀರೆಗಳು , ಧರ್ಮಾವರಂ ಸೀರೆಗಳು , ಕಾಂಚಿಪುರಂ ಸಿಲ್ಕ್ ಮತ್ತು ಮದುವೆ ಸೀರೆಗಳು , ರಾ ಸಿಲ್ಕ್ ಮತ್ತು ಕೋಸಾ ಸೀರೆಗಳು , ಕಳ್ಕೊತ್ತಾ ಗಣಪತಿ ಸೀರೆಗಳು , ಢಾಕ ಸೀರೆಗಳು , ಡಿಸೈನರ್ ಎಂಬ್ರಾ ಯಿಡ್ ಸೀರೆ ಮತ್ತು ಡ್ರೆಸ್ , ಬಚೂರಿ ರೇಷ್ಮೆ , ಮಟ್ಕಾ ಸೀರೆಗಳು , ಪ್ರೀಂಟೆಡ್ ಸೀರೆಗಳು , ಪಶೀನಾ ಸೀರೆಗಳು , ಡಿಸೈನರ್ ಡ್ರೆಸ್ ಮೆಟೀರಿಯಲ್ಸ್‌ಗಳು ಮತ್ತು ಸೀರೆಗಳು , ಬಾಗಲ್ಪುರ್ ರೇಷ್ಮೆ ಸೀರೆ ಮತ್ತು ಡ್ರೆಸ್ , ಉಪ್ಪಡಾ ಮತ್ತು ಗೊಡ್ವಾಲ್ , ಸೀರೆಗಳು , ಮಹೇಶ್ವರಿ ಮತ್ತು ಕೋಟಾ ಸಿಲ್ಕ್ , ಟೆಂಪಲ್ ಬಾರ್ಡರ್ ಉಳ್ಳ ಮುಲ್ ಬಾರಿ : ಸಿಲ್ಕ್ , ಕತ್ತಾ ರೇಷ್ಮೆ ಸೀರೆಗಳು , ಬನಾರಸ್ ಮತ್ತು ಜಮ್‌ದಾನಿ ರೇಷ್ಮೆ , ಶಿಫಾನ್ ಸೀರೆಗಳು , ಬುಟ್ಟಿ ಸೀರೆ ಗಳು , ಚಂದೇರಿ ಸಿಲ್ಕ್ ಮತ್ತು ಕೈ ಅಚ್ಚಿನ ಸೀರೆಗಳು ಪದರ್ಶನಗೊಳ್ಳಲಿದೆ . ಇದಲ್ಲದೆ ಕುರ್ತಾ , ಸ್ಟೋಲ್ಡ್ , ಶಾಲುಗಳು , ಸಲ್ ವಾರ್ ಕಮೀಜ್ ಮತ್ತು ಉಡುಪಿನ ಬಟ್ಟೆ ಗಳು , ಕುಶನ್ ಕವರ್‌ಗಳು ಮತ್ತು ಬೆಡ್ ಶೀಟ್‌ಗಳು ಲಭ್ಯವಿವೆ ಎಂದು ಮೇಳದ ವ್ಯವಸ್ಥಾಪಕ ನಿರ್ದೇಶಕ ಟಿ . ಅಭಿನಂದ್ ತಿಳಿಸಿದರು.