ಮೈಸೂರು:24 ಸೆಪ್ಟೆಂಬರ್ 2021
*ನ@ದಿನಿ*
ದಸರಾ ಹಬ್ಬದ ಪ್ರಯುಕ್ತ ಹಸ್ತಶಿಲ್ಪಿ ವತಿಯಿಂದ ಸಿಲ್ಕ್ ಇಂಡಿಯಾ -2021 ರೇಷ್ಮೆ ಸೀರೆಗಳ ಬೃಹತ್‌ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟನೆಗೊಂಡಿದೆ.
ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಇಂದಿನಿಂದ ಅಕ್ಟೋಬರ್ 3 ರವಗೆ ನಡೆಯಲಿರುವ ವಸ್ತ್ರ ಮೇಳಕ್ಕೆ ಮೈಸೂರು ಮೇಯರ್ ಸುನಂದ ಪಾಲನೇತ್ರ ಟೇಪ್ ಕತ್ತರಿಸಿ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಕೋರೋನಾ ನಂತರ ಮೈಸೂರಿನಲ್ಲಿ ಈ ಮೇಳ ಆರಂಭವಾಗಿದೆ.ಮಹಿಳೆಯರಿಗೆ ಒಂದೇ ಸೂರಿನಡಿಯಲ್ಲಿ ಬೇಡಿಕೆಗೆ ತಕ್ಕಂತೆ ವಸ್ತ್ರಗಳು ಲಭ್ಯವಿದೆ.ಗ್ರಾಹಕರು ಭೇಟಿ ನೀಡುವಂತೆ ತಿಳಿಸಿ ಮೇಳಕ್ಕೆ ಶುಭ ಕೋರಿದರು.
ತದ ನಂತರ ಅಭಿನಂದ್ ಮಾತನಾಡಿ ಭಾರತದಲ್ಲಿರುವ ಹಸ್ತಶಿಲ್ಪಿ ಸಂಸ್ಥೆಯು ಕುಶಲಕರ್ಮಿಗಳು ಮತ್ತು ನೇಕಾರರ ಶ್ರೇಯೋಭಿವೃದ್ಧಿಗಾಗಿ ಸ್ಥಾಪಿತವಾಗಿರುವ ಸಂಸ್ಥೆ. ನೇಕಾರರು ಮತ್ತು ಕುಶಲಕರ್ಮಿಗಳು ಉತ್ಪಾದಿಸುವ ಉತ್ಪನ್ನಗಳಿಗೆ ದೇಶದ ಮುಖ್ಯ ನಗರಗಳಲ್ಲಿ ಮಾರಾಟ ಮೇಳವನ್ನು ಆಯೋಜಿಸುವ ಮೂಲಕ ನೇರವಾಗಿ ಅವರ ಉತ್ಪನ್ನಗಳು ಗ್ರಾಹಕರಿಗೆ ತಲುಪಿಸುವಂತೆ ವ್ಯವಸ್ಥೆ ಮಾಡುವುದು ಮತ್ತು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇಂದರೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭವನ್ನು ಹೆಚ್ಚು ಗಳಿಸುವಂತೆ ಮಾಡುವ ಉದ್ದೇಶವನ್ನು ಸಂಸ್ಥೆಯು ಹೊಂದಿದೆ.ಅದರಂತೆ ಮೈಸೂರಿನಲ್ಲಿ ದಸರಾ ಹಬ್ಬವನ್ನು ಗಮನದಲ್ಲಿಟ್ಟುಕೊಂಡು ಸಿಲ್ಕ್ ಇಂಡಿಯ -2021 ಮೇಳ ಇಂದಿನಿಂದ 10 ದಿನಗಳ ಕಾಲ ಇರಲಿದೆ.ಈ ಮೇಳದಲ್ಲಿ ಕಾಶ್ಮೀರದಿಂದ ಕಾಂಚಿಪುರಂವರೆಗಿನ ರೇಷ್ಮೆಸೀರೆ ಉತ್ಪಾದಕರು , ರೇಷ್ಮೆ ಸೀರೆ ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ ಸಂಘಗಳು 50 ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು ಮೈಸೂರು ಜನತೆಯ ಮುಂದೆ ಪ್ರದರ್ಶಿಸಿ ಮಾರಾಟ ಮಾಡುವರು .
ತನ್ವರ್‌ರೇಷ್ಮೆ ಸೀರೆಗಳು.ಕೇಪ್ ಮತ್ತುಜಾರ್ಜೆಟ್ ಸಿಲ್ಕ್ ಸೀರೆಗಳು , ಅರಿಜಿರೇಷ್ಮೆ ಸೀರೆಗಳು , ಧರ್ಮಾವರಂ ಸೀರೆಗಳು , ಕಾಂಚಿಪುರಂ ಸಿಲ್ಕ್ ಮತ್ತು ಮದುವೆ ಸೀರೆಗಳು , ರಾ ಸಿಲ್ಕ್ ಮತ್ತು ಕೋನರಿ ಸೀರೆಗಳು , ಕಲ್ಲೋಹಾಗಣಪತಿ ಸೀರೆಗಳು , ಢಾಕ ಸೀರೆಗಳು , ಡಿಸೈನರ್ ಎಂಬ್ರಾಯಿಡರಿ ಸೀರೆ ಮತ್ತುಡರ್ , ಬಿಚದಿರೇಷ್ಮೆ , ಮಟ್ಟಾ ಸೀರೆಗಳು , ಪ್ರೀಂಟೆಡ್ ಸೀರೆಗಳು , ಪಶ್ಚಿನಾ ತೀರಗಳು , ಡಿಸೈನರ್‌ಡ್ರೆಸ್ ಮೇಟಿರಿಯಲ್ಸ್ಗಳು ಮತ್ತು ಸೀಲೆಗಳು , ಬಾಗಲ್‌ಪುರ್‌ರೇಷ್ಮೆ ಸೀರೆ ಮತ್ತುಡೆನ್ , ಉಪ್ಪಡಾ ಮತ್ತು ಗೊಡ್ಡಾಲ್ ಸೀರೆಗಳು , ಮಹೇಶ್ವರಿ ಮತ್ತು ಕೋಟಾ ಸಿಲ್ , ಟೆಂಪಲ್ ಬಾರ್ಡಾರ್‌ಉಳ್ಳ ಮುಲ್‌ಬಾರಿ ಸಿಲ್ಕ್ , ಕಲ್ಲೊತ್ತಾರೇಷ್ಮೆ ಸೀರೆಗಳು , ಬನಾರಸ್ ಮತ್ತುಜದಾನಿ ರೇಷ್ಮೆ , ಶಿಫಾನ್ ಸೀರೆಗಳು , ಚುಟ್ಟಿ ಸೀರೆಗಳು , ಚಂದೇರಿ ಸಿಲ್ಕ್ ಮತ್ತು ಕೈ ಅಚ್ಚಿನ ಸೀರೆಗಳು ಪ್ರದರ್ಶನಗೊಳ್ಳಲಿದೆ.ಇದಲ್ಲದಕುರ್ತ , ಸ್ಟೋಲ್ಡ್ , ಶಾಲುಗಳು , ಸಲ್ವಾರ್ ಕಮೀಜ್ ಮತ್ತು ಉಡುಪಿನ ಬಟ್ಟೆಗಳು , ಕುಶನ್ ಕವರ್‌ಗಳು ಮತ್ತು ಬೆಡ್ಶೀಟ್‌ಗಳನ್ನು ಮಾರಾಟವಾಗುತ್ತಿದೆ.ಮೇಳಕ್ಕೆ ಪ್ರವೇಶವನ್ನು ಉಚಿತವಾಗಿ ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಉತ್ಪಾದಕರನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.