ಮೈಸೂರಲ್ಲಿ ರಾಷ್ಟ್ರಮಟ್ಟದ ಸಪ್ತಸ್ವರ ಕರೋಕೆ ಗಾಯನ ಸೀಸನ್ – 3 : ಎನ್.ಶ್ರೀನಿವಾಸನ್

ನಂದಿನಿ ಮನುಪ್ರಸಾದ್ ನಾಯಕ್

ಗಾಯಕ,ಗಾಯಕಿಯರಿಗೆ ಸುವರ್ಣಾವಕಾಶ- ಎನ್.ಶ್ರೀನಿವಾಸನ್

ಮೈಸೂರಲ್ಲಿ ರಾಷ್ಟ್ರಮಟ್ಟದ ಸಪ್ತಸ್ವರ ಕರೋಕೆ ಗಾಯನ ಸೀಸನ್ – 3

ಮೈಸೂರು: ಸರ್ವಕಲ ಸೇವಾ ಟ್ರಸ್ಟ್ (ರಿ )PGRSS ಪಂಚಾಯತ್ ಗ್ರಾಮೀಣ ಅಭಿವೃದ್ಧಿ ರೈತರ ಸೇವಾ ಸಮಿತಿ ಸಹಯೋಗದೊಂದಿಗೆ ನಡೆಯಲಿರುವ ರಾಷ್ಟ್ರಮಟ್ಟದ ಸಪ್ತಸ್ವರ ಕರೋಕೆ ಗಾಯನ ಸೀಸನ್ – 3 ಪೋಸ್ಟರ್ ಅನ್ನು ಯೋಗ ನರಸಿಂಹಸ್ವಾಮಿ ದೇವಸ್ಥಾನದ ಆಡಳಿತ ಅಧಿಕಾರಿಯಾದ ಶ್ರೀನಿವಾಸನ್ ಅವರು ಬಿಡುಗಡೆ ಮಾಡಿದರು.
ಬಳಿಕ‌ ಮಾತನಾಡಿದ ಅವರು, ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರಲ್ಲದೇ, ಯೋಗ ನರಸಿಂಹ ಸ್ವಾಮಿಯ ಆಶೀರ್ವಾದ ಕಾರ್ಯಕ್ರಮಕ್ಕೆ ಸದಾ ಇರಲಿ. ಹೊಸ ಗಾಯಕ, ಗಾಯಕಿಯರು ಆದಷ್ಟು ಬೇಗ ನೊಂದಣಿ ಮಾಡಿಕೊಂಡು ವೇದಿಕೆಯನ್ನು ನಿಮ್ಮದಾಗಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಯಲಿ ಎಂದು ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ದನಪಾಲ್ ಜೆ ಗೌಡ, ಸಮೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಸಹನಗೌಡ, PGRSS ಖಜಾಂಚಿ ಮಂಜುಳಾ, ಸಮರ್ಪಣೆ ಸೇವಾ ಟ್ರಸ್ಟ್ ಅಧ್ಯಕ್ಷರಾದ ಲಯನ್ ಕುಮಾರ್, ಭಾಗವಹಿಸಿದ್ದರು. ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಮಂಗಳೂರು ಮೀನಾನಾಥ್ , ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ.ಟಿ ದೇವೇಗೌಡ , ಕರ್ನಾಟಕ ಸುಗಮ ಸಂಗೀತ ಪರಿಷತ್ ಮೈಸೂರು ಅಧ್ಯಕ್ಷ ಡಾ. ನಾಗರಾಜು ವಿ ಬೈರಿ, ಚಂದ್ರಶೇಖರ್ರಾವ್, ಟ್ರಸ್ಟ್ ಮುಂಬೈ ಅಧ್ಯಕ್ಷರಾದ ಶ್ರೀದೇವಿ ರಾವ್ ಮತ್ತು ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಆಯೋಜಕರಾಗಿ ಸರ್ವಕಲ ಸೇವಾ ಟ್ರಸ್ಟ್ ಅಧ್ಯಕ್ಷರಾದ ನೀಮ ಲೋಬೊ ಮತ್ತು ಕಾರ್ಯದರ್ಶಿಯಾದ ಜೋಸೆಫ್ ಲೋಬೊ ಹಾಗೂ ಪಿ ಜಿ ಆರ್ ಎಸ್ ಎಸ್ ಪಂಚಾಯತ್ ಗ್ರಾಮೀಣ ಅಭಿವೃದ್ಧಿ ರೈತರ ಸೇವಾ ಸಮಿತಿಯ ಅಧ್ಯಕ್ಷರಾದ ಯಾದವ್ ಹರೀಶ್ ರವರು ರಾಜ್ಯ ಸಂಚಾಲಕರಾದ ರಕ್ತದಾನಿ ಮಂಜು ಅವರು ಇರಲಿದ್ದು, ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ದೂ. 9902175996/9740176567ಅನ್ನು ಸಂಪರ್ಕಿಸಬಹುದಾಗಿದೆ.


Leave a Reply

Your email address will not be published. Required fields are marked *