ಸಿಗ್ಮಾ ಆಸ್ಪತ್ರೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ

ನಂದಿನಿ ಮೈಸೂರು

ಸಿಗ್ಮಾ ಆಸ್ಪತ್ರೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ

ಈ ಚಿತ್ರದಲ್ಲಿ ಮುಖ್ಯ ಅತಿಥಿಯಾಗಿ ಹಾಸ್ಯ ಚಕ್ರವರ್ತಿ ಸಾಹಿತಿ ಪ್ರೊ. ಕೃಷ್ಣಗೌಡ ಆಸ್ಪತ್ರೆಯ ಪಥಾಲಿಜಿಸ್ಟ್ ಡಾ. ಶ್ರೀದೇವಿ, ಕ್ಷ- ಕಿರಣ ತಜ್ಞರಾದ ಡಾ. ನಯನಾ, ಮಕ್ಕಳ ತಜ್ಞರಾದ ಡಾ. ಕನ್ಯ, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಸ್. ಜ್ಞಾನಶಂಕರ್, ನಿರ್ದೇಶಕರು ಮತ್ತು ಉದರ ತಜ್ಞರಾದ ಡಾ. ಜಿ ಸಿದ್ದೇಶ್, ಮೂತ್ರತಜ್ಞರಾದ ಡಾ ಡಿ ಎನ್ ಸೋಮಣ್ಣ, ಮೂತ್ರಶಾಸ್ತ್ರ ತಜ್ಞರಾದ ಡಾ. ಅನಿಕೇಶ್, (ನೆಪ್ರೋಲಾಜಿಸ್ಟ್) ನಗರ ಪಾಲಿಕೆ ಹಿಂದಿನ ಸದಸ್ಯರ ರಾಮಚಂದ್ರ ಮತ್ತು ಆಸ್ಪತ್ರೆಯ ಶೂಶ್ರಷಕಿಯರು, ಸಿಬ್ಬಂದಿಗಳು ದೀಪವನ್ನು ಬೆಳಗಿಸುತ್ತಿರುವುದು.

ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಸ್.ಜ್ಞಾನಶಂಕರ್‌ರವರು ಮಾತನಾಡಿ ಇಂದು ಮಹಾಶಿವರಾತ್ರಿಯ ದಿನ ವಿಶೇಷವಾಗಿ ಮಹಿಳಾ ದಿನಾಚರಣೆ ಬಂದಿರುವುದು ಸ್ತ್ರೀಶಕ್ತಿಯ ಸಂಕೇತ, ಯುಗ ಯುಗಾಂತರದಿಂದ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಶಿವನು ತನ್ನ ಅರ್ಧ ಶರೀರವನ್ನು ತ್ಯಾಗ ಮಾಡಿ ಅರ್ಧನಾರೀಶ್ವರನಾದ ಮತ್ತು ಅದೇ ಶಿವನು ನವ ದುರ್ಗದ ರೂಪದಲ್ಲಿ ದುಷ್ಟ ಶಕ್ತಿಗಳನ್ನು ಸಂಹರಿಸಿದರು. ಹಾಗೆಯೇ ಪ್ರಾಚೀನ ಕಾಲದಿಂದಲೂ ಮತ್ತು ಈಗ ಕಲಿಯುಗದಲ್ಲಿ ಭಾರತದ ಸಂವಿಧಾನದಲ್ಲಿ ಮಹಿಳೆಯರಿಗೆ ವಿಶೇಷ ಪ್ರಾಮುಖ್ಯತೆ ಕೊಟ್ಟಿದೆ.

ಪ್ರೊಫೆಸರ್ ಕೃಷ್ಣಗೌಡರವರು ಅತಿಥಿಯಾಗಿ ಮಾತನಾಡಿ ಶ್ರೀರಾಮುನು ಪತ್ನಿಯಿಂದ ರಾಜನಾದ ಶ್ರೀ ಕೃಷ್ಣನು ಮಹಿಳೆಯಿಂದ ಪ್ರೇಮಿಯಾದ, ಶಿವ ಪಾರ್ವತಿ ಯಾವಾಗಲೂ ಜೊತೆಯಲ್ಲಿರುತ್ತಾರೆ. ಹಾಗೇ ಅದನ್ನು ನೋಡಿದರೆ ನಮಗೆ ಪುಣ್ಯಬರುತ್ತದೆ. ಹೀಗೆ ಮನೆಯಲ್ಲೂ ಎಲ್ಲೆಲ್ಲೂ ಮಹಿಳೆಯರಿಗೆ ಪ್ರಾಧಿನಿತ್ಯ ಕೊಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು ಮತ್ತು ಈ
ಸಿಗ್ಮಾ ಆಸ್ಪತ್ರೆಯಲ್ಲಿ ಕನ್ನಡಕ್ಕೆ ವಿಶೇಷ ಪ್ರಾಧಿನಿದ್ಯ ಕೊಟ್ಟಿರುವುದು ವಿಶೇಷವಾಗಿ ಪ್ರಶಂಸಿದರು.

ನಂತರ ಆಸ್ಪತ್ರೆ ನಿರ್ದೇಶಕರಾದ ಡಾ. ಜಿ ಸಿದ್ದೇಶ್ ರವರು ಮಾತನಾಡಿ ಎಲ್ಲಾ ಮಹಿಳೆಯರಿಗೆ ಶುಭ ಕೋರುತ್ತಾ ನಮ್ಮ ಭಾರತದಲ್ಲಿ ಶೇಕಡ 50ರಷ್ಟು ಪ್ರಾಧಾನ್ಯತೆಯನ್ನು ಮಹಿಳೆಯರಿಗೆ ಕೊಟ್ಟರೆ ನಮ್ಮ ದೇಶ ಖಂಡಿತ ಮುಂದೆ ಬರುತ್ತದೆ. ನಮ್ಮ ಆಸ್ಪತ್ರೆಯಲ್ಲೂ ಮಹಿಳಾ ತಜ್ಞರಿಗೆ ಹೆಚ್ಚಿನ ಪ್ರಾಧಿನಿತ್ಯ ಕೊಟ್ಟಿದ್ದೇವೆ. ಹೀಗೆ ಮಹಿಳೆಯರಿಗೆ ಸಲ್ಲಬೇಕಾದ ಸ್ಥಾನಮಾನಗಳನ್ನು ಕೊಟ್ಟರೆ ದೇಶದ ಪ್ರಗತಿಗೆ ಸಹಾಯವಾಗುತ್ತದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *