ನಂದಿನಿ ಮೈಸೂರು
ವಿಶ್ವ ಸ್ಥೂಲಕಾಯತೆಯ ದಿನದ ಅಂಗವಾಗಿ ಸಿಗ್ಮಾ ನರ್ಸಿಂಗ್ ಕಾಲೇಜು,,,ಐಎಪಿಮೈಸೂರು ಮತ್ತು ಮೈಸೂರು ಅಡೋಲೆಸೆಂಟ್ ಹೆಲ್ತ್ ಅಕಾಡೆಮಿ ಸಹಭಾಗಿತ್ವದಲ್ಲಿ, ಕರ್ನಾಟಕ ರಾಜ್ಯದ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್, ಸಾರ್ವಜನಿಕ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಸಿಗ್ಮಾ ಆಸ್ಪತ್ರೆಯಿಂದ ಆರಂಭವಾದ ಜಾಗೃತಿ ಜಾಥಾ ಸರಸ್ವತಿಪುರಂ ಮುಖ್ಯ ರಸ್ತೆಗಳ ಮೂಲಕ ಶೈಕ್ಷಣಿಕ ಘೋಷಣೆಯ ಫಲಕಗಳೊಂದಿಗೆ ಸುಮಾರು 100 ಮಂದಿ ಭಾಗವಹಿಸಿದ್ದರು.
ಮಕ್ಕಳು ಮತ್ತು ಯುವ ವಯಸ್ಕರಲ್ಲಿ ಸ್ಥೂಲಕಾಯತೆಯ ರೋಗದ ವಿರುದ್ಧ ಹೋರಾಡಲು ಪ್ರಮುಖ ಕ್ರಮಗಳನ್ನು ಕರ್ನಾಟಕ ರಾಜ್ಯ ಐಎಪಿ ಕಾರ್ಯದರ್ಶಿ ಡಾ.ಶಶಿಕಿರಣ್, ಸಿಗ್ಮಾ ಆಸ್ಪತ್ರೆಯ ಮುಖ್ಯ ಮಕ್ಕಳ ತಜ್ಞ ಡಾ.ರಾಜೇಶ್ವರಿ ಮಾದಪ್ಪ, ಐಎಪಿ ಮೈಸೂರು ಅಧ್ಯಕ್ಷ ಡಾ.ಪ್ರಶಾಂತ್ ಎಂ.ಆರ್, ಮತ್ತು ಮೈಸೂರು ಹದಿಹರೆಯದ ಆರೋಗ್ಯದ ಅಕಾಡೆಮಿ ಅಧ್ಯಕ್ಷ ಡಾ. ಡಾ ಯು ಜಿ ಶೆಣೈ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಐಎಪಿ ಮೈಸೂರು ಮಹಾಸಂಸ್ಥೆಯ ಪದಾಧಿಕಾರಿಗಳಾದ ಡಾ.ಶ್ರೀನಿವಾಸ್ ಬಿ ಹೆಚ್, ಡಾ ತೃಪ್ತಿ, ಡಾ ಶಿವು, ಡಾ ಕನ್ಯಾ, ಡಾ ಶಂಕರ್ ಪ್ರಸಾದ್ ಮತ್ತು
ಸಿಗ್ಮಾ ಆಸ್ಪತ್ರೆಯ
ಡಾ ಕೆ ಎಂ ಮಾದಪ್ಪ ಮತ್ತು ಶ್ರೀ ಜ್ಞಾನಶಂಕರ್ ಭಾಗವಹಿಸಿದ್ದರು.