ನಂದಿನಿ ಮೈಸೂರು
ಎಚ್ ಡಿ ಕೋಟೆ:ಅಮಾವಾಸ್ಯೆ ಕಂಡ್ರಿ ಅಮಾವಾಸ್ಯೆ ಸಿದ್ದರಾಮೇಶ್ವರ ಸ್ವಾಮಿಗೆ ಅಮಾವಾಸ್ಯೆ ವಿಶೇಷ ಪೂಜೆ ಮಾಡಿದ್ರು ಕಂಡ್ರೀ. ಅಮಾವಾಸ್ಯೆ ಅಂತ ನೂರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಕಾಣಿಕೆ ಹಾಕಿ ಹೋಗಿದ್ರೂ ಕಂಡ್ರೀ.ದೇವಸ್ಥಾನದ ಅರ್ಚಕರು ಕೊನೆ ಪೂಜೆ ಮಾಡಿ ದೇವಾಲಯಕ್ಕೆ ಬೀಗ ಹಾಕಿ ಮನೆ ಕಡೆ ಹೋಗಿದ್ರು ಅಷ್ಟೇ ಕಂಡ್ರಿ ಮುಂಜಾನೆ ವೇಳೆಗೆ ಕಳ್ಳರು ತಮ್ಮ ಕೈಚಳಕ ತೋರಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಎಚ್ ಡಿ ಕೋಟೆ ತಾಲೂಕಿನ ಸಿದ್ದರಾಮಯ್ಯನ ಹುಂಡಿ ಗ್ರಾಮದ ಪ್ರಸಿದ್ದ ಶ್ರೀ ಸಿದ್ದರಾಮೇಶ್ವರ ದೇವಾಲಯದಲ್ಲಿ ತಡರಾತ್ರಿ ಕಳ್ಳರು ತಮ್ಮ ಕೈ ಚಳಕ ತೋರಿದ್ದು, ದೇವಾಲಯದಲ್ಲಿದ್ದ ಚಿನ್ನ ಬೆಳ್ಳಿ ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ,
ನೂರಾರು ವರ್ಷಗಳ ಇತಿಹಾಸವಿರುವ ಈ ದೇವಾಲಯವನ್ನು ಕಳೆದ ಏಳೆಂಟು ವರ್ಷಗಳ ಹಿಂದೆ ಜೀರ್ಣೋದ್ದಾರ ಮಾಡಿ, ಹೊಸ ದೇವಾಲಯ ನಿರ್ಮಿಸಲಾಗಿದ್ದು, ಪ್ರತಿ ಅಮಾವಾಸ್ಯೆ ಹುಣ್ಣಿಮೆಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದ್ದು, ಎಂದಿನಂತೆ ಕಳೆದ ಭಾನುವಾರ ನಡೆದ ವಿಶೇಷ ಅಮಾವಾಸ್ಯೆ ಪೂಜೆಗೆ ನೂರಾರು ಭಕ್ತರು ಆಗಮಿಸಿದ್ದು ಪೂಜೆ ಸಲ್ಲಿಸಿದ್ದಾರೆ, ಇದರಿಂದ ಹೆಚ್ಚು ಹಣ ಸಂಗ್ರಹವಾಗಿರುತ್ತದೆಂಬುದನ್ನು ಮನಗಂಡ ಕಳ್ಳರು ದೇವಾಲಯಕ್ಕೆ ಕನ್ನ ಹಾಕಿದ್ದು, ದೇವಾಲಯದ ಬಾಗಿಲು ಮೀಟಿ ಹುಂಡಿ ಹೊಡೆದು ಹಣದೋಚಿ , ಹುಂಡಿಯನ್ನು ಪಕ್ಕದ ಜಮೀನಿಗೆ ಬಿಸಾಡಿ ಹೋಗಿದ್ದಾರೆ,
ಈ ಕುರಿತು ಎಚ್ ಡಿ ಕೋಟೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಶ್ವಾನದಳ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಮುಂದುವರಿಸಿದ್ದಾರೆ.