ನಂದಿನಿ ಮೈಸೂರು
ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹುಟ್ಟೂರಿನಲ್ಲಿ ಬುಧವಾರ 11.50ರಲ್ಲಿ ಮತದಾನ ಮಾಡಿದರು.
ಕ್ಷೇತ್ರದ ಬೂತ್ ಸಂಖ್ಯೆ 86 , ಸೀರಿಯಲ್ ನಂ.351 ಸಿದ್ದರಾಮಯ್ಯ ತಮ್ಮ ಪುತ್ರ ಯತೀಂದ್ರ ಅವರೊಂದಿಗೆ ಆಗಮಿಸಿ ಮತ ಚಲಾಯಿಸಿದರು.
ಮೈಸೂರಿನಿಂದ ಸ್ವಗ್ರಾಮಕ್ಕೆ ಆಗಮಿಸಿದ ಸಿದ್ದರಾಮಯ್ಯ ಊರಿನಲ್ಲಿರುವ ಮನೆಯಲ್ಲಿ ವಿಶ್ರಾಂತಿ ಪಡೆದು, ಬಳಿಕ ಗ್ರಾಮದ ಸಿದ್ದರಾಮೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮತದಾನ ಮಾಡಿದರು.
ಸೊಸೆ ಸ್ಮಿತಾ ರಾಕೇಶ್, ಎಂಎಲ್ಸಿ ಡಾ.ಕೆ. ತಿಮ್ಮಯ್ಯ ಇದ್ದರು.
ಮತ ಚಲಾಯಿಸಿ ಈಚೆ ಬರುತ್ತಿದ್ದಂತೆ ಸಿದ್ದರಾಮಯ್ಯ ಅವರನ್ನು ಸುತ್ತುವರಿದ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಎಂಬ ಘೋಷಣೆ ಮೊಳಗಿಸಿದರು. ಚುನಾವಣೆಯಲ್ಲಿ ಸಾಹೇಬರು ೩೦ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಕೂಗಿ ಸಂಭ್ರಮಿಸಿದರು. ಮೈಸೂರು ಹುಲಿ ಸಿದ್ದರಾಮಯ್ಯ ಎಂದು ಘೋಷಣೆ.
ಬಳಿಕ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.