ಕಲಾವಿದನ ಕೈ ಚಳಕ ಅಕ್ಕಿ ಕಾಳಿನಲ್ಲಿ ಮೂಡಿಬಂತು ಸಿದ್ದರಾಮಯ್ಯ ಮೂರ್ತಿ

ಚಾಮರಾಜನಗರ:3 ಆಗಸ್ಟ್ 2022

ನಂದಿನಿ ಮೈಸೂರು

ಕಲಾವಿದ ಅವನದ್ದೇ ಕಲೆಯ ಪ್ರಪಂಚದಲ್ಲಿ ಮುಳುಗಿರುತ್ತಾನೆ.ಕಲಾವಿದನ ಕೈಚಳಕಕ್ಕೆ ಮನಸೋಲದವರಿಲ್ಲ ಎಂದರೇ ತಪ್ಪಾಗದು.
ಅನ್ನ ಭಾಗ್ಯ ಯೋಜನೆ ಜಾರಿಗೆ ತಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಮೂರ್ತಿ
ಅಕ್ಕಿ ಕಾಳಿನಲ್ಲಿ ಮೂಡಿಬಂದಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

ಹೌದು 
ಕರ್ನಾಟಕದಲ್ಲಿ ಅಧಿಕಾರ ಸ್ವೀಕರಿಸಿದ ದಿನವೇ ಅನ್ನ ಭಾಗ್ಯ ಯೋಜನೆ ಜಾರಿಗೆ ತಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರವರ 75 ನೇ ಹುಟ್ಟು ಹಬ್ಬದ ಹಿನ್ನೆಲೆ
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಟಿ ಹೊಸೂರು ಗ್ರಾಮದ ಕಲಾವಿದ ಬಿ ಮಹೇಶ್ ರವರ ಕೈಚಳಕದಲ್ಲಿ ಅನ್ನ ರಾಮಯ್ಯ ಮೂರ್ತಿ ಮೂಡಿಬಂದಿದೆ.

 

ರಂಗಭೂಮಿ ಕಲಾವಿದ ಚಲನಚಿತ್ರ ನಟ ಶಿವು ಬಾಲಾಜಿ ಮತ್ತು ನಿರೂಪಕ ಉಮೇಶ್ ಕೋಟೆ ರವರು ಅನ್ನ ರಾಮಯ್ಯನ ವಿಗ್ರಹ ಮೂಡಿಬರಲು ಸಹಕಾರ ನೀಡಿದ್ದಾರೆ .

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ಮೊದಲ ದಿನವೇ ಘೋಷಣೆ ಮಾಡಿದ ಮಹತ್ವ ಪೂರ್ಣ ಯೋಜನೆ ಅನ್ನ ಭಾಗ್ಯ ಯೋಜನೆ.

ದಾವಣಗೆರೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು ಅಭಿಮಾನಿಗಳು ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟು ಹಬ್ಬಕ್ಕೆ ಶುಭ ಹಾರೈಸುವುದರ ಜೊತೆಗೆ ವಿಧವಿಧವಾದ ಉಡುಗೊರೆಗಳನ್ನು ನೀಡುತ್ತಿದ್ದಾರೆ. ಅದೆಲ್ಲಾದಕ್ಕಿಂತಲೂ ಮಿಗಿಲಾಗಿ ಗಮನ ಸೆಳೆಯುತ್ತಿರುವ ಏಕೈಕ ಉಡುಗೊರೆ ಎಂದರೆ ಅಕ್ಕಿಯಲ್ಲೇ ತಯಾರಿಸಿದ ಅನ್ನ ರಾಮಯ್ಯ ಮೂರ್ತಿ. ಕಲಾವಿದ ಮಹೇಶ್ ರವರ ಕೈಚಳಕದಲ್ಲಿ ಮೂಡಿ ಬಂದಿರುವ ವಿಭಿನ್ನ ಅಕ್ಕಿ ಕಾಳಿನ ಮೂರ್ತಿಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *