ನಂದಿನಿ ಮೈಸೂರು
ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಟಿಎಸ್. ಶ್ರೀವತ್ಸ ರವರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷರಾದ ಡಾ. ಬಿ.ಆರ್ ನಟರಾಜ ಜೋಯಿಸ್ ರವರ ನೇತೃತ್ವದಲ್ಲಿ ಮತಯಾಚನೆ ಮಾಡಿದರು,
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಿವೇಕಾನಂದನಗರ ವೃತ್ತದ ಗಣಪತಿ ದೇವಸ್ಥಾನದ ಬಳಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮೈಸೂರು ವಲಯ ಉಪಾಧ್ಯಕ್ಷರು ಮೈಸೂರು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯಕ್ಷರಾದ ಬಿ.ಆರ್.ನಟರಾಜ್ ಜೊಯಿಸ್ ರವರ ನೇತೃತ್ವದಲ್ಲಿ ಬಿಜೆಪಿ ಅಭ್ಯರ್ಥಿ ಟಿಎಸ್ ಶ್ರೀವತ್ಸ ರವರು ಮೈಸೂರಿನ ಬ್ರಾಹ್ಮಣ ಸಂಘ ಸಂಸ್ಥೆಗಳ ಪಧಾದಿಕಾರಿಗಳೊಂದಿಗೆ ಮತಯಾಚನೆ ಮಾಡಿದರು,
ವಿವೇಕಾನಂದನಗರ ಶ್ರೀರಾಂಪುರ ಅರವಿಂದನಗರ ಕುವೆಂಪುನಗರ ಸುತ್ತಮುತ್ತಲಿನ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು,
ಇದೇ ಸಂಧರ್ಭದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷರಾದ ಡಾ. ಬಿಆರ್ ನಟರಾಜ ಜೋಯಿಸ್ ರವರು ಮಾತನಾಡಿ ಕೃಷ್ಣರಾಜ ಕ್ಷೇತ್ರದಲ್ಲಿ ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿದ್ದು ಈಭಾರಿ ವಿಪ್ರರ ಮತಾದನ ಸಂಖ್ಯೆ ಹೆಚ್ಚಳವಾಗುವಲ್ಲಿ ವಿಪ್ರ ಸಂಘ ಸಂಸ್ಥೆಗಳ ಮುಖಂಡರು ವಿಶೇಷ ಕಾಳಜಿವಹಿಸಬೇಕಿದೆ, ಸರ್ಕಾರಕ್ಕೆ ತೆರಿಗೆ ಕಟ್ಟುವಲ್ಲಿ ವಿಪ್ರಸಮುದಾಯದವರು ಪ್ರಾಮಾಣಿಕವಾಗಿ ಎಲ್ಲರಿಗಿಂತ ಮುಂಚಿತವಾಗಿ ಸರದಿ ಸಾಲಿನಲ್ಲಿ ನಿಂತು ಪಾವತಿ ಮಾಡುತ್ತಾರೆ ಅದೇ ರೀತಿಯಲ್ಲಿ ಪ್ರಜಾಪ್ರಭುತ್ವದಲ್ಲಿ ಮತದಾನವೂ ಸಹ ನಮ್ಮೆಲ್ಲರ ಹಕ್ಕು, ಮುಂದಿನ ದಿನದಲ್ಲಿ ಸರ್ಕಾರದ ಸವಲತ್ತು ಪಡೆಯುವಲ್ಲಿ ನಮ್ಮ ಸಮುದಾಯವರು ಕಡ್ಡಾಯವಾಗಿ ಮತಾದನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಿದೆ ಎಂದರು,
ಮೈಸೂರಿನ ಬ್ರಾಹ್ಮಣ ಸಂಘ ಸಂಸ್ಥೆಗಳಾದ ಬ್ರಾಹ್ಮಣ ಧರ್ಮ ಸಹಾಯ ಸಭಾ, ಕಲ್ಯಾಣ ಭವನ,
ಬೊಬ್ಬರಕಮ್ಮೆ ಬ್ರಾಹ್ಮಣ ಸಂಘ,
ವಿವೇಕಾನಂದನಗರ ಬ್ರಾಹ್ಮಣ ಸಂಘ, ಮುಲಕನಾಡು ಬ್ರಾಹ್ಮಣ ಸಂಘ, ಕೌಶಿಕ ಸಂಕೇತಿ ಸಂಘ, ಬೆಟ್ಟದಪುರ ಸಂಕೇತಿ ಸಂಘ, ಸಂಧ್ಯಾ ಸುರಕ್ಷ ಟ್ರಸ್ಟ್, ಕರ್ನಾಟಕ ಬ್ರಾಹ್ಮಣ ಹಿರಿಯ ನಾಗರೀಕ ವೇದಿಕೆ, ಅಟಲ್ ಜಿ ಸಂಸ್ಕಾರ ಪ್ರತಿಷ್ಠಾನ ಹಲವಾರು ಸಂಸ್ಥೆಗಳು ಬಿಜೆಪಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಟಿಎಸ್. ಶ್ರೀವತ್ಸ ರವರ ಪರವಾಗಿ ಮತಯಾಚಿಸಲು ವಿಪ್ರ ನಿಯೋಗ ರಚಿಸಿದರು ,
ಅಖಿಲ ಕರ್ನಾಟಕ ಬ್ರಾಹ್ಮಣ ಸಭಾ ವಲಯ ಉಪಾಧ್ಯಕ್ಷರಾದ ಬಿ.ಆರ್.ನಟರಾಜ್ ಜೊಯಿಸ್, ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ಬ್ರಾಹ್ಮಣ ಮುಖಂಡರಾದ ಕೆ.ರಘುರಾಂ ವಾಜಪೇಯಿ, ಬ್ರಾಹ್ಮಣ ಧರ್ಮ ಸಹಾಯ ಸಭಾ ಅಧ್ಯಕ್ಷ ಎಲ್. ಶ್ರೀನಿವಾಸ್, ಹಿರಿಯ ವಕೀಲರಾದ ಶ್ರೀ ರವೀಂದ್ರ, ಬೊಬ್ಬರಕಮ್ಮೆ ಬ್ರಾಹ್ಮಣ ಸಂಘದ ಅಧ್ಯಕ್ಷ ಸೂರ್ಯನಾರಯಣ್, ಬಿಇಎಂಎಲ್ ಬ್ರಾಹ್ಮಣ ಸಂಘದ ಅಧ್ಯಕ್ಷ ಗಣೇಶ್ ಕುರ್ಕಿ, ಬ್ರಾಹ್ಮಣ ಮುಖಂಡರಾದ ಆರ್ ಸತ್ಯನಾರಾಯಣ, ಡಾ.ಲಕ್ಷ್ಮೀ ದೇವಿ, ವಿಜಯಲಕ್ಷ್ಮಿ, ಸುರೇಶ್, ವಿಶ್ವನಾಥ್, ವಿನಯ್, ಅನಂತಪ್ರಸಾದ್, ಇನ್ನಿತರರು ಇದ್ದರು