ಮೈಸೂರು:5 ನವೆಂಬರ್ 2021
ನ@ದಿನಿ
ಕೇದಾರನಾಥ್ ಆವರಣದಲ್ಲಿರುವ ಪ್ರಸಿದ್ಧ ಶ್ರೀ ಶಂಕರಾಚಾರ್ಯರ 18 ಅಡಿಯ ಐಕ್ಯ ಸನ್ನಿಧಿಯಲ್ಲಿ ಶ್ರೀ ಶಂಕರಾಚಾರ್ಯರ ಪ್ರತಿಮೆ ಸ್ಥಾಪನೆಯಾಗಲಿದ್ದು ಇಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಮೆ ಅನಾವರಣಗೊಳಿಸಿದರು.
ಮೈಸೂರಿನವರೇ ಆದ ಶಿಲ್ಪಿ ಅರುಣ್ ರವರಿಗೆ ಮೈಸೂರು ಜಿಲ್ಲಾ ಮಂತ್ರಿ ಎಸ್ ಟಿ ಸೋಮಶೇಖರ್ . ಮಹಾಪೌರರಾದ ಸುನಂದಾ ಪಾಲನೇತ್ರ ಹಾಗೂ ಇನ್ನಿತರ ಗಣ್ಯರಿಂದ ಬಸವೇಶ್ವರ ವೃತ್ತದಲ್ಲಿರುವ ಶಿಲ್ಪಾ ಕೇಂದ್ರದಲ್ಲಿ ಅರುಣ್ ಶಿಲ್ಪಿ ಹಾಗೂ ಅವರ ತಾಯಿ ಮತ್ತು ಅವರ ಪತ್ನಿಗೆ ರವರಿಗು ಸಹ ಸನ್ಮಾನಿಸಿ ಎಂದು ಅಭಿನಂದಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಮೈಸೂರು ನಗರ ಬಿಜೆಪಿ ಅಧ್ಯಕ್ಷ ಶ್ರೀವತ್ಸ ,ಶಾಸಕರಾದ ನಾಗೇಂದ್ರ ,ರಘು ಕೌಟಿಲ್ಯ ,ರೈತ ನಾಯಕ ರಾದ ಮಲ್ಲೇಶ್ , ವಕ್ತಾರರಾದ ಮೋಹನ್, ಕೇಬಲ್ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು