ಶಾರದ ಮಾತೆ ಹಾಗೂ ವೆಂಕಟಾಚಲ ಅವದೂತರು ತ್ಯಾಗಮಯಿ

 

ಮೈಸೂರು :27 ಡಿಸೆಂಬರ್ 2021

ನಂದಿನಿ

ಚಾಮುಂಡಿಪುರಂನ ಅಪೂರ್ವ ಅಪೂರ್ವ ಸ್ನೇಹ ಬಳಗ ವತಿಯಿಂದ ಪವಿತ್ರ ಮಾತೆ ಶ್ರೀ ಶಾರದಾದೇವಿ ಹಾಗೂ ಶ್ರೀ ವೆಂಕಟಾಚಲ ಅವಧೂತ ಸದ್ಗುರುಗಳ ಜಯಂತಿ ಅಂಗವಾಗಿ ವಿದ್ಯಾರಣ್ಯಪುರಂನ ಅಂದಾನಿ ವೃತ್ತದಲ್ಲಿರುವ ಟಿ ಎಸ್ ಸುಬ್ಬಣ್ಣ ಸಾರ್ವಜನಿಕರ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಓದುವ ಸಾಮಗ್ರಿಗಳು ನೀಡಲಾಗುವುದು ಅನಂತರ ಕನಕಗಿರಿಯಲ್ಲಿರುವ ಭಾರತಿ ವೃದ್ಧಾಶ್ರಮದ ಆಶ್ರಮದ ವೃದ್ಧರಿಗೆ ಹಣ್ಣು ಹಂಪಲು ಹಾಗೂ ಹೊದಿಕೆ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಜಯಂತಿ ಆಚರಿಸಲಾಯಿತು.

ಹಿರಿಯ ಸಮಾಜ ಸೇವಕ ಕೆ ರಘುರಾಂ ವಾಜಪೇಯಿ ಮಾತನಾಡಿ ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಚಿಂತನೆಗಳಿಗೆ ಶಾರದಾ ಮಾತೆ ಅವರು ಪ್ರೇರಣೆ. ಆದರೆ ಹಲವರಿಗೆ ಶಾರದಾ ಮಾತೆಯ ಪರಿಚಯವಿಲ್ಲ .
ಸ್ವಾಮಿ ವಿವೇಕಾನಂದರು ಷಿಕಾಗೋದಲ್ಲಿನ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣ ಭಾರತದ ಚಿತ್ರಣ ಬದಲಿಸಿತ್ತು. ಸ್ವಾಮಿ ವಿವೇಕಾನಂದರ ಹಲವು ವೈಚಾರಿಕೆ ಚಿಂತನೆಗಳಿಗೆ ಶಾರದ ಮಾತೆ ಸ್ಪೂರ್ತಿಯಾಗಿದ್ದರು. ವಿವೇಕಾನಂದರು ಇಂದಿಗೂ ಪ್ರಸ್ತುತ. ಯುವಕರು ಅವರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕಿದೆ. ವಿವೇಕಾನಂದರ ವಿಚಾರಗಳನ್ನು ಜನರಲ್ಲಿ ಜಾಗೃತಿ ಮೂಡಿಸಲು ನಗರದಲ್ಲಿ ದೇಶಾದ್ಯಂತ ರಾಮಕೃಷ್ಣ ಆಶ್ರಮ ಸ್ಥಾಪಿಸಲಾಗಿದೆ.

ನಗರಪಾಲಿಕೆ ಸದಸ್ಯರಾದ ಮಾ ವಿ ರಾಮ್ ಪ್ರಸಾದ್ ಮಾತನಾಡಿ ವಿವೇಕಾನಂದನಗರ, ರಾಮಕೃಷ್ಣನಗರದ ವೃತ್ತಗಳಲ್ಲಿರುವಂತೆ ಶಾರದಾದೇವಿನಗರದಲ್ಲಿಯೂ ಶಾರದಾಮಾತೆಯ ಪ್ರತಿಮೆ ನಿರ್ಮಾಣವಾಗಬೇಕು, ತನ್ಮೂಲಕ ಮೂವರು ಮಹನೀಯರನ್ನು ಕೊಡುಗೆಯನ್ನು ಶಾಶ್ವತವಾಗಿ ನೆನೆಯುವ ಕೆಲಸವಾಗುತ್ತದೆ ಎಂದು ತಿಳಿಸಿದರು.

ನಂತರ ಮಾತನಾಡಿದ ಡಾಕ್ಟರ್ ಎಸ್ ಪಿ ಯೋಗಣ್ಣ ಇಂದಿನ ಸ್ತ್ರೀಯರು ಕೇವಲ ಬಾಹ್ಯ ಬೆಳವಣಿಗೆಗೆ ಗಮನಕೊಡುತ್ತಿದ್ದು, ಆಂತರಿಕ ಸಂವೇದನೆ ಮತ್ತು ಮೌಲ್ಯ­ಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರಾಚೀನ ಮತ್ತು ಆಧುನಿಕ ಇವೆರಡಕ್ಕೂ ಆದರ್ಶದಂತಿರುವ ಮಾತೆ ಶಾರದಾ­ದೇವಿಯವರ ಸಂದೇಶಗಳನ್ನು ಅಳವಡಿಸಿಕೊಂಡಲ್ಲಿ ತಮ್ಮ ವೈಯಕ್ತಿಕ, ಕೌಟುಂಬಿಕ, ಸಮಾಜಿಕ ಜೀವನದಲ್ಲಿ ಶಾಂತಿ–ಆನಂದ ಪಡೆಯಲು ಸಾಧ್ಯ’ ಎಂದರು.
ಪ್ರತಿಯೊಬ್ಬ ಆಧುನಿಕ ಸ್ತ್ರೀ, ನಮ್ಮ ಭಾರತೀಯ ಸಂಸ್ಕೃತಿ ಮತ್ತು ಸ್ತ್ರೀ ಆದರ್ಶವನ್ನು ಎಂದಿಗೂ ಕಡೆಗಣಿಸಬಾರದು. ಭೋಗಭೂಮಿ­ಯಾದ ಪಾಶ್ಚಿಮಾತ್ಯ ದೇಶದ ಸ್ತ್ರೀಯು ಆದರ್ಶ ಪತ್ನಿಯಾದರೆ, ಯೋಗ ಭೂಮಿಯಾದ ಭಾರತೀಯ ಸ್ತ್ರೀಯು ಆದರ್ಶ ಮಾತೆ’
ಸಾಮಾಜಿಕ ಪರಿವರ್ತನೆಗೆ ಮಹಿಳೆಯರು ಮನಸ್ಸು ಮಾಡಬೇಕು. ಭೂಮಿ, ನದಿಗಳನ್ನು ಸ್ತ್ರೀ ರೂಪದಲ್ಲಿ ಕಂಡು ಆರಾಧಿಸುವುದಕ್ಕೆ ಮಾತೃವಾತ್ಸಲ್ಯವೇ ಕಾರಣ ಎಂದರು.

ನಂತರ ಜೋಗಿಮಂಜು ರವರು ಮಾತನಾಡಿ ವೆಂಕಟಾಚಲ ಅವಧೂತ ರು ದೇವ ದೂತ ರಾಗಿ ಸಾಮನ್ಯರಲ್ಲಿ ಸಾಮನ್ಯರಾದ ಜನರಿಗೆ ದೇವರ ಆಶಿರ್ವಾದ ಪಾಲಿಸುತ್ತಿದ್ದರು ಇವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯ ಪಟ್ಟಣದಲ್ಲಿ ವಾಸವಿದ್ದು ಇವರು ಸರ್ವ ತ್ಯಾಗಿಯಾಗಿದ್ದವರು,ರಾಜ್ಯದ ನಾನಾ ಮೂಲೆಯಿಂದ ಬರುತ್ತಿದ್ದ ಭಕ್ತರುಗಳಿಗೆ ಉಚಿತ ದಾಸೋಹ ಹಾಗೂ ಪ್ರವಚನ ನೀಡುತ್ತಿದ್ದರು,ಶೃಂಗೇರಿ ಶ್ರೀ ಗಳು ಇವರ ಪ್ರವಚನದಲ್ಲಿ ಭಾಗಿಯಾಗುತ್ತಿದ್ದರು,ಇವರ ಕುಟುಂಬವು ಈಗಲೂ ಕೂಡ ಅವರ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ,ಹಾಗೇ ಬಾಣಾವರ ದಲ್ಲಿ ಇವರ ಬೃಹತ್ ವೇದಿಕೆ ಇದ್ದು ಅವರ ಪಾದುಕೆ ದರ್ಶನದಿಂದ ಜನರ ಕಷ್ಟ ಕಾರ್ಪಣ್ಯ ನಿವಾರಣೆಯಾಗುತ್ತಿದೆ,ಇವರ ಸರ್ವ ತ್ಯಾಗದಿಂದ ಇಂದಿನ ಮನುಕುಲಕ್ಕೆ ಒಂದು ಪಾಠ ವಾಗಿರುತ್ತದೆ .

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಖ್ಯಾತ ವೈದ್ಯರಾದ ಡಾಕ್ಟರ್ ಎಸ್ ಪಿ ಯೋಗಣ್ಣ ,ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ ,ನಗರ ಪಾಲಿಕಾ ಸದಸ್ಯರಾದ ಮಾ ವಿ ರಾಮಪ್ರಸಾದ್ ,ಬಿಜೆಪಿ ಹಿಂದುಳಿದ ವರ್ಗದ ಅಧ್ಯಕ್ಷ ರಾದ ಜೋಗಿ ಮಂಜು ,ವಿಶ್ವಕರ್ಮ ಸಮುದಾಯದ ಮುಖಂಡರಾದ ರಿಷಿ ,ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ ,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ,ನವೀನ್ ಕೆಂಪಿ ,ಸುಚೇಂದ್ರ , ಹಾಗೂ
ಶಾಲೆಯ ಶಿಕ್ಷಕ ವೃಂದ ಹಾಜರಿದ್ದರು.

Leave a Reply

Your email address will not be published. Required fields are marked *