ನಂದಿನಿ ಮೈಸೂರು
ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಪ್ರತಿಭಾ ಪುರಸ್ಕಾರ, ಬೌದ್ಧ ಬಿಕ್ಷುಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಸಾಧನೆ ಮಾಡಿದವರಿಗೆ ಅಭಿನಂದಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ಶಿವರಾಮಕೃಷ್ಣ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘದ ಮೈಸೂರು ವಿಭಾಗದ ವತಿಯಿಂದ ಜು. ೩೦ ರಂದು ಮೈಸೂರಿನ ಕಲಾಮಂದಿರದಲ್ಲಿ
ಕಾರ್ಯಕ್ರಮ ಆಯೋಜಿಸಲಾಗಿದೆ.
ಮನೋರಖ್ಖಿತ ಬಂತೇಜಿ, ಬೋಧಿದತ್ತ ಥೇರಾ ಬಂತೇಜಿ, ಜ್ಞಾನಪ್ರಕಾಶ ಸ್ವಾಮೀಜಿ, ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಚಿವ ಡಾ.ಎಚ್.ಸಿ. ಮಹದೇವಪ್ಪ ಉದ್ಘಾಟಿಸುವರು. ಡಿ. ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸುವರು. ಸಚಿವರಾದ ಸಿ.ಎಂ. ಮುನಿಯಪ್ಪ, ಪರಮೇಶ್ವರ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ ಇನ್ನಿತರರು ವೇದಿಕೆಯಲ್ಲಿ ಇರಲಿದ್ದಾರೆ.
ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳಲ್ಲಿ ಶೇ. ೮೦ ಕ್ಕಿಂತ ಹೆಚ್ಚು ಅಂಕ ಪಡೆದು ತೇರ್ಗಡೆಯಾಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು.
ಅಲ್ಲದೆ, ಬೌದ್ಧ ಬಿಕ್ಷುಗಳಿಗೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವರಾಜ ಕಾಲೇಜಿನ ನಿವೃತ್ತಿ ಪ್ರಾಂಶುಪಾಲರಾದ ಪ್ರೋ.ನಂಜುಂಡಯ್ಯ,ಧಮ್ಮ ಕ್ಷೇತ್ರದಿಂದ ಐಪಿಎಸ್ ಅಧಿಕಾರಿ ಪುಟ್ಟಮಾದಯ್ಯ,ಆರ್.ಮಹದೇವಪ್ಪ,ಮಾಧ್ಯಮ ಕ್ಷೇತ್ರದಲ್ಲಿ ಲಿಖಿತ.ಕೆವಿ, ವರದಿಗಾರ್ತಿ ನಂದಿನಿ.ಎನ್ ರವರನ್ನ ಅಭಿನಂದಿಸಲಾಗುವುದು ಎಂದರು.
ಸುದ್ದಿಗೋಷ್ಟೀಯಲ್ಲಿ ದ್ಯಾವಪ್ಪನಾಯಕ, ಗಂಗಾಧರ್, ಮಹದೇವು, ಎಚ್.ಪಿ. ಮಹದೇವು, ನಂದಪ್ರಕಾಶ್,ರಾಘವೇಂದ್ರ,ಡಾ.ಪಿ.ನಂದ ಪ್ರಕಾಶ್, ಪುರುಷೋತ್ತಮ್ ಹಾಜರಿದ್ದರು.