ನಂದಿನಿ ಮೈಸೂರು
ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಎಸ್.ಸಿ.ಬಸವರಾಜು ರವರಿಗೆ ವಿಧಾನ ಪರಿಷತ್ (ಎಂ ಎಲ್ ಸಿ) ಸ್ಥಾನ ನೀಡುವಂತೆ ಆಗ್ರಹಿಸಿ ಇಂದು ಪೂರ್ವಭಾವಿ ಸಭೆ ನಡೆಯಿತು.
ವರುಣಾ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಕಾರ್ಯಕರ್ತರು ಹಾಗೂ ಎಸ್.ಸಿ.ಬಸವರಾಜ ರವರ ಅಭಿಮಾನಿ ಬಳಗದ ವತಿಯಿಂದ ಎಸ್.ಸಿ.ಬಸವರಾಜು ರವರಿಗೆ ವಿಧಾನ ಪರಿಷತ್ (ಎಂ ಎಲ್ ಸಿ) ಸ್ಥಾನ ನೀಡಬೇಕೆಂದು ಒತ್ತಾಯಿಸಿ ನಂಜನಗೂಡಿನ ಖಾಸಗಿ ಕಲ್ಯಾಣ ಮಂಟಪದಲ್ಲಿ
ಸಭೆ ನಡೆಸಿದರು.
ಸಭೆಯನ್ನ ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ
ಕಳಲೆ ಕೇಶವಮೂರ್ತಿರವರು
ಎಸ್.ಸಿ.ಬಸವರಾಜುರವರು ಈ ಹಿಂದೆ ಜಿಲ್ಲಾ ಪಂಚಾಯತಿ ಅಧ್ಯಕ್ಷರು,ರಾಜ್ಯ ವಾಲ್ಮೀಕಿ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಎಲ್ಲಾ ಜಾತಿ ಜನಾಂಗದವರ ಜೊತೆ ಉತ್ತಮ ಭಾಂಧವ್ಯ ಹೊಂದಿದ್ದಾರೆ.ದೀನ ದಲಿತರ ಪರವಾಗಿ ಬಡವರ ಪರವಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ.ಅವರು ಉತ್ತಮ ಸಂಘಟಕರು.ಬಸವರಾಜು ಅವರನ್ನ ಎಂ ಎಲ್ ಸಿ ಮಾಡುವ ಮನಸ್ಸು ಸಿದ್ದರಾಮಯ್ಯ ಅವರಿಗೆ ಇದೆ.ಡಿಕೆ ಶಿವಕುಮಾರ್,ಸತೀಶ್ ಜಾರಕಿಹೊಳಿಯವರ ಮನಸ್ಸಿನಲ್ಲಿಯೂ ಕೂಡ ಇದೆ.ಅವರು ಈ ಬಾರಿ ವಿಧಾನ ಸಭೆಗೆ ಪ್ರವೇಶ ಮಾಡುವುದು ನೂರಕ್ಕೆ ನೂರು ಸತ್ಯ.ಆ ಮೂಲಕ ಅವರ ಶ್ರಮಕ್ಕೆ ಪ್ರತಿಫಲ ಸಿಗಲಿದೆ .ಮೈಸೂರು ಭಾಗದಲ್ಲಿ ನಾಯಕ ಸಮುದಾಯಕ್ಕೆ ಎಂ ಎಲ್ ಸಿ ಅವಕಾಶ ಸಿಕ್ಕಿಲ್ಲ ಅವರ ಹಿರಿತನವನ್ನ ಪರಿಗಣಿಸಿ ಅವರನ್ನ ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡುವಂತೆ ನಾನು ಕೂಡ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಹೊಸಕೋಟೆ ಬಸವರಾಜು,
ಗೋವನಹಳ್ಳಿ ಕುಮಾರ್,
ತಗಡೂರು ಶಿವರಾಮು,ಎಡತಲೆ ಬಸವರಾಜು, ,ಬಿಪಿ ಮಹದೇವ್,ಲೋಕೇಶ್,ಶ್ರೀನಿವಾಸ್,ಕಾಳಿಂಗಪ್ಪ,ಬೇಬಿ ಮೂರ್ತಿ,ದಾಸನೂರು ನಾಗೇಶ್,ಹೊಸಕೋಟೆ ಶಿವಣ್ಣ,ಮರಡಿಹುಂಡಿ ನಾಗೇಂದ್ರ,ಗೋಡ್ನಳ್ಳಿ ನಟರಾಜು,ಅಡಕನಹಳ್ಳಿ ಎಸ್. ಸ್ವಾಮಿ ಸೇರಿದಂತೆ ಅಭಿಮಾನಿ ಬಳಗದವರು ಭಾಗಿಯಾಗಿದ್ದರು.