ಸರಗೂರು:3 ಜನವರಿ 2022
ನಂದಿನಿ
ಸರಗೂರು ತಾಲ್ಲೂಕಿನ ಜೆ.ಎಸ್.ಎಸ್. ಪ್ರೌಢಶಾಲೆಯಲ್ಲಿ 15 ರಿಂದ 18 ವರ್ಷದವರ ಕೋವ್ಯಾಕ್ಸಿನ್ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ತಹಶೀಲ್ದಾರ್ ಚಲುವರಾಜು, ತಾಲ್ಲೂಕು ಆರೋಗ್ಯಾಧಿಕಾರಿಗಳು ಡಾ.ಟಿ.ರವಿಕುಮಾರ್ ರವರು ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು.
ಈ ಕಾರ್ಯಕ್ರಮವನ್ನು ತಾಲ್ಲೂಕು ಆರೋಗ್ಯಧಿಕಾರಿ ಗಳಾದ ಡಾ”.ಟಿ ರವಿಕುಮಾರ್ ರವರು ಮಾತನಾಡಿ ಇಂದಿನಿಂದ ರಾಜ್ಯಾದ್ಯಂತ 15-18 ವರ್ಷ ದವರಿಗೆ ಕೋ ವ್ಯಾಕ್ಸಿನ್ ಲಸಿಕೆಯನ್ನು ಹಾಕುತ್ತಿದೇವೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳೂ ಇರುವುದಿಲ್ಲ. ಆದುದರಿಂದ ಎಲ್ಲಾ ಮಕ್ಕಳು ಲಸಿಕೆಯನ್ನೂ ತಪ್ಪದೇ ಹಾಕಿಸಿಕೊಳ್ಳಿ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಾಧಿಕಾ ಶ್ರೀನಾಥ್ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗಳಾದ ಡಾ.ಪಾರ್ಥಸಾರಥಿ.ಪಟ್ಟಣ ಪಂಚಾಯತಿ ಸದಸ್ಯರು ಗಳು,ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು, ಶಾಲೆಯ ಮುಖ್ಯಶಿಕ್ಷಕರು, ಮತ್ತು ಸಹ ಶಿಕ್ಷಕರು ,ಶಾಲೆ ಮಕ್ಕಳು, ಮಕ್ಕಳ ಪೋಷಕರು ಹಾಜರಾಗಿದ್ದರು.