ಸರಗೂರು:11 ನವೆಂಬರ್ 2021
ನ@ದಿನಿ
![](https://bharathnewstv.in/wp-content/uploads/2025/01/OPENING-TODAY.jpg)
*ಬಸ್ ಬಂತಾ ಸ್ವಾಮಿ ಅಭಿಯಾನ*
*ಗಂಟೆಗಟ್ಟಲೇ ಕಾದರೂ ಬಸ್ಬರಲೇ ಇಲ್ಲ*
ಇವತ್ತೇನಾದ್ರೂ ಕೋರೋನಾ ಲಾಕ್ ಡೌನ್ ನಾ ಅಥವಾ ಕರ್ನಾಟಕ ಬಂದ್ ಗಿಂದ್ ಏನಾದ್ರೂ ಆಗಿದ್ದೀಯಾ ಬಸ್ ಸ್ಟ್ಯಾಂಡ್ ನಲ್ಲಿ ಒಂದು ಕೆಂಪು ಬಸ್ ಕೂಡ ಕಾಣ್ತೀಲ್ವಲ್ಲ ಅಂತಿದ್ದೀರಾ.ಆಗಿದ್ರೇ ನಿಮ್ಮ ಊಹೆ ತಪ್ಪು ಸ್ವಾಮಿ .
ಈ ತಾಲೂಕಿನಲ್ಲಿ ಬೃಹತ್ ಬಸ್ ನಿಲ್ದಾಣ ಇದೆ ಆದ್ರೂ ಕೂಡ ಪ್ರತಿದಿನ ಲಾಕ್ ಡೌನ್ ,ಬಂದ್ ಆಗಿರುವ ವಾತಾವರಣವೇ ಕಣ್ಣಿಗೆ ಕಾಣೋದು.ನಿಲ್ದಾಣಕ್ಕೆ ಬಂದೌರೆಲ್ಲ
ಗಂಟೆಗಟ್ಟಲೇ ಕಾದರೂ ಬಸ್ಬರಲೇ ಇಲ್ಲ.ಈಗಲಾದ್ರೂ ಬಸ್ ಬರುತ್ತಾ ಸ್ವಾಮಿ….
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸಾರಿಗೆ ಸೌಲಭ್ಯ ಇಲ್ಲ ಅಂತ ಸುದ್ದಿ ಹಾಗೋದುಂಟು ಅದ್ರೇ ಇದು ಒಂದು ತಾಲೂಕು ತಾಲೂಕಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲ ಅಂದ್ರೇ ನೀವು ನಂಬುವಿರ.ಆದರೂ ನೀವು ನಂಬಲೇ ಬೇಕು.
ಹೌದು ಮೈಸೂರು ಜಿಲ್ಲೆ ಸರಗೂರು ತಾಲೂಕಿನಲ್ಲಿ ಪ್ರತಿದಿನ ಸರಿಯಾದ ಸಮಯಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೇ ಜನರು ಹೈರಾಣಾಗಿದ್ದಾರೆ.ಅದಕ್ಕೆ ಪ್ರತ್ಯಕ್ಷ ಉದಾಹರಣೆ ಅಂದ್ರೇ ಇದು ನೋಡಿ.ಬಸ್ ಸಿಗದೇ
ಅನಾರೋಗ್ಯಪೀಡಿತ ಅಪ್ಪನನ್ನು ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗಲೇ ಇಲ್ಲ.ಹರಸಾಹಸ ಪಟ್ಟು ದುಪ್ಪಟ್ಟು ಹಣ ಕೊಟ್ಟು ಕರೆದುಕೊಂಡು ಹೋದರೂ ಅಪ್ಪನಿಗೆ ನಿಗದಿತ ಸಮಯಕ್ಕಿಂತ ತಡವಾಗಿ ಚಿಕಿತ್ಸೆ ಸಿಕ್ಕಿತು.ಅಲ್ಲಿನ ವೈದ್ಯರು ಒಳ್ಳೇಯವರಾಗಿದ್ದರಿಂದ ಆ ದಿನ ತಡವಾಗಿಯಾದರು ಚಿಕಿತ್ಸೆ ದೊರೆಯಿತು.ತಂದೆಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಅಲ್ಲಿ ಅನುಭವಿಸಿದ ಕಷ್ಟದ ಕ್ಷಣವನ್ನ ನಾಗರಾಜು. ಎಸ್. ಆರ್ ಅವರು ಹಂಚಿಕೊಂಡಿದ್ದಿಷ್ಟು.
ಆರೋಗ್ಯ ಸರಿ ಇಲ್ಲದ ಕಾರಣ ನಮ್ಮ ತಂದೆ ರಾಮನಾಯಕ ಅವರನ್ನು ಮೈಸೂರಿನ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಬೇಕಿತ್ತು.ಆಸ್ಪತ್ರೆಯಲ್ಲಿ ವೈದ್ಯರ ಭೇಟಿಗಾಗಿ ಸಮಯ ನಿಗದಿಯಾಗಿತ್ತು.
ಆದ್ದರಿಂದ ತಂದೆಯವರನ್ನು ಕರೆದುಕೊಂಡು ಸರಗೂರು ಬಸ್ನಿಲ್ದಾಣಕ್ಕೆ ಆಗಮಿಸಿದ್ದೆ.ಒಂದು ಗಂಟೆ ಆಯ್ತು,ಎರಡು ಗಂಟೆ ಆಯ್ತು ,ಮೂರು ಗಂಟೆ ಕಾಲ ಕಾದರೂ ಯಾವುದೇ ಬಸ್ ಗಳು ಬಸ್ನಿಲ್ದಾಣಕ್ಕೆ ಬರಲಿಲ್ಲ. ಕೊನೆಗೆ ಖಾಸಗಿ ವಾಹನದ ಮೂಲಕ ಹ್ಯಾಂಡ್ಪೋಸ್ಟ್ ತಲುಪಿದೆ.ಅಲ್ಲೋ ಸಹ ಮೈಸೂರಿಗೆ ಹೋಗುವ ಬಸ್ಗಾಗಿ ಕಾದು ಕಾದು ಸ್ತುಸ್ತಾದೆ.ಅಂತಿಮವಾಗಿ ದುಬಾರಿ ಹಣ ನೀಡಿ ಮತ್ತೊಂದು ಖಾಸಗಿ ವಾಹನದ ಮೂಲಕ ಮೈಸೂರಿನ ಆಸ್ಪತ್ರೆಗೆ ತೆರಳಿದೆ.ಆದರೆ ಅಷ್ಟರಲ್ಲಾಗಲೇ ಆಸ್ಪತ್ರೆಯಲ್ಲಿ ನಮಗೆ ನೀಡಿದ್ದ ನೊಂದಣಿ ಸಮಯ ಮುಗಿದಿತ್ತು. ಒಳ್ಳೇಯ ವೈದ್ಯರು ಇದ್ದ ಕಾರಣ ತಡವಾದರೂ ತಂದೆಗೆ ಚಿಕಿತ್ಸೆ ನೀಡಿದರು.
ಹಲವು ತಿಂಗಳಿನಿಂದಲೂ ಸರಗೂರು ಹಾಗೂ ಹ್ಯಾಂಡ್ಪೋಸ್ಟ್ ನಲ್ಲಿ ಬಸ್ಗಳು ಸಮಯಕ್ಕೆ ಬಾರದಿದ್ದರಿಂದ ಸಾಕಷ್ಟು ಜನ ಅದರಲ್ಲೂ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.ಸರಗೂರಿನಿಂದ ಮೈಸೂರಿಗೆ ಅಲ್ಲದೇ ಮೈಸೂರು ಕಡೆಯಿಂದ ಸರಗೂರಿಗೂ ಬಸ್ ವ್ಯವಸ್ಥೆ ಇಲ್ಲ.ಸಂಬಂಧಪಟ್ಟವರು ಈ ಬಗ್ಗೆ ಯಾವುದೇ ಗಮನ ಹರಿಸದಿರುವುದರಿಂದ ಜನಸಾಮಾನ್ಯರು, ಪ್ರಯಾಣಿಕರು ಅತೀವ ತೊಂದರೆ ಅನುಭವಿಸುವಂತಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಬೇಕಿದೆ. ಕೂಡಲೇ ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡು ಪ್ರಯಾಣಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನಾನುಕೂಲವನ್ನು ತಪ್ಪಿಸಬೇಕಿದೆ ಎಂದು ಕಾನೂನು ವಿದ್ಯಾರ್ಥಿ ಮನೋಜ್ ಒತ್ತಾಯಿಸಿದ್ದಾರೆ.
ಒಟ್ಟಾರೆ ಹೇಳೋದಾಗರೇ ಸರಗೂರಿನ ಜನ ಸರ್ಕಾರಕ್ಕೆ ಸಾರಿಗೆ ಮೂಲಕ ಹಣ ಕೊಡ್ತೇವೆ ಅಂದರೂ ಸಹ ಸರಿಯಾದ ಸಮಯಕ್ಕೆ ಬಸ್ ನಿಲ್ದಾಣಕ್ಕೆ ಬಸ್ ಬರುತ್ತಿಲ್ಲ. ಪ್ರತಿದಿನ ಸರಗೂರಿನಲ್ಲಿ ಸಾರಿಗೆ ವ್ಯವಸ್ಥೆಯದ್ದೇ ಒಂದು ಗೋಳು ಆಗಿಬಿಟ್ಟಿದೆ.ಉಳ್ಳವರು ದುಪ್ಪಟ್ಟು ಹಣಕೊಟ್ಟು ಖಾಸಗೀ ವಾಹನದಲ್ಲಿ ತೆರಳುತ್ತಾರೆ.ಉಳ್ಳದವರು ಅಷ್ಟೋಂದು ಹಣ ಕೊಡಕಾಗುತ್ತಾ ನೀವೇ ಹೇಳಿ ಸ್ವಾಮಿ.