ಸಪ್ತಗಿರಿ ಕ್ಷೇಮಾಭಿವೃದ್ಧಿ ಸಂಘದಿಂದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪುರಸ್ಕಾರ,ನಿವೃತ್ತಿ, ಬಡ್ತಿ ಪಡೆದವರಿಗೆ ಸನ್ಮಾನ

ನಂದಿನಿ ಮೈಸೂರು

ಸಪ್ತಗಿರಿ ಕ್ಷೇಮಾಭಿವೃದ್ಧಿ ಸಂಘದಿಂದ 2022-23ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪುರಸ್ಕಾರ,ನಿವೃತ್ತಿ ಹಾಗೂ ಬಡ್ತಿ ಹೊಂದಿರುವವರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು.

ಮೈಸೂರಿನ ಕಲಾ ಮಂದಿರದಲ್ಲಿರುವ ಕಿರು ರಂಗ ಮಂದಿರದಲ್ಲಿ ಆಯೋಜಿಸಿದ್ದ ಸಮಾರಂಭಕ್ಕೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಡಿ.ರಘು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ವೇದಿಕೆಯ ಗಣ್ಯರು 2024 ನೇ ಸಾಲಿನ ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.ತದನಂತರ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪುರಸ್ಕಾರ,ನಿವೃತ್ತಿ ಹಾಗೂ ಬಡ್ತಿ ಹೊಂದಿರುವವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಎಲ್.ಐಸಿ ನಿವೃತ್ತ ಉನ್ನತ ಸಹಾಯಕ ಅಧಿಕಾರಿ ಎಂ.ಸಿದ್ದರಾಜು,ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಲ್ಕುಂಡಿ ಮಹದೇವಸ್ವಾಮಿ,ನೀಲಗಿರಿ ಒಡನಾಡಿಗಳ ಸಂಗಮ ಅಧ್ಯಕ್ಷ ಎಲ್.ಪ್ರೇಮಕುಮಾರ್,ಕೆಎಸ್ ಆರ್ ಟಿಸಿ ಚಾಮರಾಜನಗರ ವಿಭಾಗ ಕಾರ್ಮಿಕ ಕಲ್ಯಾಣಾಧಿಕಾರಿ ಎಂ.ರಶ್ಮಿ,ಕಿರಿಯ ಸಂಶೋಧಕಿ ಡಾ.ಎಂ.ವಿಮಲ,ಸಪ್ತಗಿರಿ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ಎನ್.ರಾಜ್ ಕುಮಾರ್,ಸಂಘದ ಅಧ್ಯಕ್ಷ ಆರ್.ರಾಜೇಶ್ ,ಕಾರ್ಯದರ್ಶಿ ಎಸ್.ರಾಜಪ್ಪ,ಖಂಜಾಚಿ ಪಿ.ನಿಂಗರಾಜು ಸೇರಿದಂತೆ ಸಂಘದ ಸದಸ್ಯರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *