ಜ್ಞಾನ ಕೇಂದ್ರ ಶಾಲೆಯಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಸಂವಿಧಾನ ದಿನಾಚರಣೆ

ಉಮೇಶ್. ಬಿ.ನೂರಲಕುಪ್ಪೆ /ನಂದಿನಿ ನಾಯಕ್

ಹೆ.ದೇ.ಕೋಟೆ ಪಟ್ಟಣದ ಹೊರವಲಯದ ಜ್ಞಾನ ಕೇಂದ್ರ ಶಾಲೆಯಲ್ಲಿ ವಿಭಿನ್ನವಾಗಿ ಇಂದು ಸಂಜೆ ವಿನೂತನವಾಗಿ ಶಾಲಾ ವಾಷೀಕೋತ್ಸವ ಮತ್ತು ಸಂವಿಧಾನ ಸಮರ್ಪಣಾ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮ ಪ್ರಾರಂಭದಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ನೆರೆದ ಪೋಷಕರು ಮತ್ತು ಮಕ್ಕಳು ಗೌರವಸಲ್ಲಿಸಿದರು.

ಮುಖ್ಯ ಅತಿಥಿಯಾಗಿ ಮಾತಾನಾಡಿದ ಸಿಆರ್ಪಿ ಶ್ರೀಮತಿ ದೀಪಾ ತೋಟದಲ್ಲಿ ಹೂವುಗಳಿದ್ದರೆ ಹೇಗೆ ಚಂದವಿರುತ್ತದೆಯೋ ಹಾಗೇ ಮಕ್ಕಳು ಶಾಲೆಯಲ್ಲಿದ್ದರೆ ಇಡಿ ವಾತಾವರಣವೇ ಸೌಂದರ್ಯ ತುಂಬಿರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ತಪ್ಪದೇ ಮಕ್ಕಳನ್ನ ಶಾಲೆಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು ಮತ್ತು ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಹಿರಿಯ ಹೋರಾಟಗಾರ ಚಾ. ನಂಜುಂಡಮೂರ್ತಿ. ಜೀವಿಕ ಉಮೇಶ್. ಬಿ. ನೂರಲಕುಪ್ಪೆ. ಪ್ರಾಂಶುಪಾಲ ಸಚಿನ್ ಕುಮಾರ್. ಪುರಸಭೆ ಸದಸ್ಯ ಸಿದ್ದರಾಜು. ಅಂಬೇಡ್ಕರ್ ಸೇನಾ ಅಧ್ಯಕ್ಷ ಸದಾಶಿವ. ಸಿದ್ದಪ್ಪಾಜಿ. ಚಲುವರಾಜ್. ನಂದಕುಮಾರ್. ಸನ್ಮಾನ್. ಜ್ಯೋತಿ. ವಜ್ರೆಶ್ವರಿ ಮುಂತಾದವರು ಹಾಜರಿದ್ದರು.

 

Leave a Reply

Your email address will not be published. Required fields are marked *