ಎಲ್ಲರ ಗಮನ ಸೆಳೆದ ಹಸುವಿನ ಸಗಣಿ ದೀಪ

ಸ್ಟೋರಿ: ನಂದಿನಿ ಮೈಸೂರು: 

‘ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ ಸುಟ್ಟರೇ ನೊಸಲಿಗೆ ವಿಭೂತಿಯಾದೆ…’ ಎಂಬ ಹಾಡಿನ ಸಾಲಿ
ನಂತೆ ಸಗಣಿಯ ಮತ್ತೊಂದು ರೂಪವನ್ನು ವಿದ್ಯಾರಣ್ಯಪುಂನ ಪ್ರಗತಿ ಪ್ರತಿಷ್ಠಾನದ ಸ್ವಯಂಸೇವಕರು ಕಂಡುಕೊಂಡಿದ್ದಾರೆ.

ಈ ಸಗಣಿಯನ್ನೇ ದೀಪ ಮಾಡಲು ಬಳಸಿ, ಯಶಸ್ಸು ಕಂಡಿದ್ದಾರೆ. ಇಲ್ಲಿಯವರೆಗೆ 15 ಸಾವಿರದಷ್ಟು ದೀಪಗಳನ್ನು ತಯಾರಿಸಲಾಗಿದೆ.
ಸಗಣಿ, ಗೋಮೂತ್ರವನ್ನು ಮಿಶ್ರ ಮಾಡಿ ಇದಕ್ಕೆ ಸ್ಪಲ್ಪ ಹಾಲು, ಮೊಸರು, ತುಪ್ಪವನ್ನು ಸೇರಿಸಿ ಪಿಂಗಾಣಿ ದೀಪಗಳನ್ನೂ ನಾಚಿಸುವಂತಹ ದೀಪಗಳನ್ನು ಪ್ರತಿಷ್ಠಾನದ ಸ್ವಯಂಸೇವಕರು ತಯಾರಿಸಿದ್ದಾರೆ.ಕಳೆದ 15 ದಿನಗಳಲ್ಲಿ ಇವರು ಮಾಡಿದ್ದು ಬರೋಬರ 15 ಸಾವಿರ ದೀಪಗಳನ್ನು ತಯಾರಿಸಿ ಸಾರ್ವಜನಿಕರಿಗೆ ಉಚಿತವಾಗಿ ವಿತರಣೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.

2013ರಲ್ಲಿ ಆರಂಭವಾದ ಈ ಪ್ರತಿಷ್ಠಾನವು ಪರಿಸರ ಸಂರಕ್ಷಣೆ, ಪ್ರಾಣಿ, ಪಕ್ಷಿಗಳ ರಕ್ಷಣೆಯಲ್ಲಿ ಸದ್ದಿಲ್ಲದೇ ತೊಡಗಿಕೊಂಡಿದೆ. ಪ್ಲಾಸ್ಟಿಕ್‌ ದೀಪಗಳನ್ನು ಬಳಸುವುದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ಅರಿತು, ಮಣ್ಣಿನ ದೀಪಗಳನ್ನು ನೀಡಲಾಯಿತು. ಈಗ ಸಗಣಿ, ಗೋಮೂತ್ರ ಬಳಸಿ ಹೊಸಬಗೆಯಲ್ಲಿ ದೀಪ ತಯಾರಿಸಲಾಗಿದೆ. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.
ಮೈಸೂರಿನ ಪಿಂಜರಾ ಪೋಲ್ ನಿಂದ ಸಗಣಿ ಸಂಗ್ರಹಿಸಿ ದೀಪ ತಯಾರಿಸಲಾಗುತ್ತಿದೆ
ಎಂದು ‍ಪ್ರತಿಷ್ಠಾನದ ಅಧ್ಯಕ್ಷ ಡಾ.ಬಿ.ಕೆ.ಅಜಯಕುಮಾರ್‌ಜೈನ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *