ನಂದಿನಿ ಮೈಸೂರು
*ಮತ್ತೊಮ್ಮೆ ಅವಕಾಶಕ್ಕೆ ಮನವಿಯಿಟ್ಟ ಎಸ್.ಶಿವಮೂರ್ತಿ ಕಾನ್ಯ*
ಮೈಸೂರು: ಕಳೆದ ಅವಧಿಯಲ್ಲಿ ಪಾರದರ್ಶಕವಾಗಿ ವೀರಶೈವ ಲಿಂಗಾಯತ ಮಹಸಭಾದ ಏಳಿಗೆಗಾಗಿ ಶ್ರಮಿಸಿದ್ದು, ಅಭಿವೃದ್ಧಿಗಾಗಿ ಮತ್ತೊಮ್ಮೆ ಅವಕಾಶ ಕೊಡುವಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಸ್.ಶಿವಮೂರ್ತಿ ಕಾನ್ಯ ಬೆಂಬಲಿಗರಲ್ಲಿ ಕೋರಿದರು.
ಇಂದು ಬಸವೇಶ್ವರರ ಪ್ರತಿಮೆಗೆ ತಮ್ಮ 16 ಮಂದಿಯ ತಂಡದೊಂದಿಗೆ ತೆರಳಿ ಮತಪ್ರಚಾರ ಆರಂಭಿಸಿ ಮಾತನಾಡಿದ ಅವರು, ನನ್ನ ಕ್ರಮ ಸಂಖ್ಯೆ ಎರಡು ನಾನು ಎರಡನೇ ಬಾರಿಗೆ ಸ್ಪರ್ಧಿಸಿದ್ದು ಸಭಾದ ಅಭಿವೃದ್ಧಿ ಗಾಗಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಕಳೆದ ಅವಧಿಯಲ್ಲಿ ಅವಿರೋಧವಾಗಿ ಆಯ್ಕೆಯಾಗಿ ಮುಡಾದಿಂದ ವೀರಶೈವ ಲಿಂಗಾಯತ ಸಮುದಾಯಕ್ಕೆ ಬೇಕಾದ ನಿವೇಶನವನ್ನು ಪಡೆಯುವ ಪ್ರಯತ್ನ ನಡೆಸಿದ್ದೇನೆ. ಅತಿ ಹೆಚ್ಚು ಮಂದಿ ಸಮುದಾಯದವರು ಸಭಾದ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಿದ್ದೇನೆ. ಮತ್ತೊಮ್ಮೆ ತಮ್ಮನ್ನು ಆಯ್ಕೆಮಾಡಿದರೆ ಡಾ.ರಾಜಕುಮಾರ್ ರಸ್ತೆಯಲ್ಲಿ ಸಿಕ್ಕಿರುವ ಸಿಎ ನಿವೇಶನದಲ್ಲಿ ಸಮುದಾಯದ ಭವನ ನಿರ್ಮಾಣ ಸೇರಿ ಹಲವು ಅಭಿವೃದ್ಧಿ ಕಾರ್ಯ ಮಾಡುವುದಾಗಿ ಹೇಳಿದರು.
ಜತೆಗೆ ಮೂವರು ಮಹಿಳಾ ಅಭ್ಯರ್ಥಿಗಳು ಸೇರಿ ನಮ್ಮ ತಂಡದ 16 ಮಂದಿಗೂ ತಮ್ಮ ಬೆಂಬಲದ ಮತ ನೀಡುವಂತೆ ಮನವಿ ಮಾಡಿದರು.
ತಂಡದವರಾದ ಎಂ.ಚಂದ್ರಶೇಖರ, ಕೆ.ಎಂ. ನಟರಾಜು ( ಕಲ್ಲಳ್ಳಿ), ಪರಮೇಶ್ ಬಿ.ಎಂ.ಮಾಸ್ಟರ್, ಮಹೇಶ್ ವೈ.ಟಿ., ಗೆಜ್ಜಗಳ್ಳಿ ಮಹೇಶ್ ಜಿ.ಎಂ, ಮಂಜುನಾಥ್ ಎಂ.ಎಸ್., ವಿರೂಪಾಕ್ಷ ಎಪಿ ಆಯರಹಳ್ಳಿ, ವೃಷಬೇಂದ್ರ ದೂರ, ಡಿ.ಜಿ.ಶಿವರಾಜು, ಶಿವಲಿಂಗಸ್ವಾಮಿ, ಶ್ರೀಕಂಠಮೂರ್ತಿ ಎನ್.ಸುತ್ತೂರು, ಶ್ರೀಶೈಲ ಬಿ.ಎಸ್, ಸುರೇಶ್ ಎಸ್.ಬಿ ಮತ್ತು ಮಹಿಳಾ ಮೀಸಲು ಅಭ್ಯರ್ಥಿಗಳಾದ ಧನ್ಯಕುಮಾರಿ, ನಾಗಜ್ಯೋತಿ ಬಿ, ಸುನಂದ ಎಚ್.ಎಂ ಅವರಗಳಿಗೆ ತಮ್ಮ ಮತ ನೀಡಿ ಗೆಲ್ಲಿಸಿ ಮಹಾಸಭಾದ ಅಭಿವೃದ್ಧಿಗೆ ಶ್ರಮಿಸಲು ಅವಕಾಶ ಕಲ್ಪಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಜೆ.ಪಿ.ಚಂದ್ರಶೇಖರ್ ಕೋಟೆ, ನಗರಪಾಲಿಕೆ ಮಾಜಿ ಸದಸ್ಯ ಬಿ.ವಿ.ಮಂಜುನಾಥ್, ಕೆ.ವಿ.ಯೋಗೇಶ್, ರವಿಶಂಕರ್, ಶಿವಕುಮಾರ್, ರಾಜಣ್ಣ, ಕಸಾಪ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಕಲ್ಮಳ್ಳಿ ನಟರಾಜು, ಪರಮೇಶ( ಮೇಷ್ಟ್ರು), ವೈ.ಟಿ.ಮಹೇಶ್, ಗೆಜ್ಜಗಳ್ಳಿ ಮಹೇಶ್, ಮಂಜುನಾಥ್, ವಿರೂಪಾಕ್ಷ ಆಯರಹಳ್ಳಿ, ವೃಷಬೇಂದ್ರ ದೂರ, ಶಿವರಾಜು ಕೋಟೆ, ಶಿವಲಿಂಗಸ್ವಾಮಿ ಹೆಡಹಳ್ಳಿ, ಶ್ರೀಕಂಠಮೂರ್ತಿ ಸುತ್ತೂರು, ಸುರೇಶ್ ಟಿ.ನರಸೀಪುರ, ದನ್ಯಕುಮಾರಿ ಜೆ.ಪಿ.ನಗರ, ಜ್ಯೋತಿ ಪ್ರತಿ ಧ್ವನಿ ಪ್ರಸಾದ್, ಸುನಂದ ಕೋಟೆ, ನಂದೀಶ ಬೋಗಾದಿ, ಎಂ.ಮಹದೇವಸ್ವಾಮಿ ಸಿಂಧುವಳ್ಳಿ, ನಟರಾಜು ಮುರಡಗಳ್ಳಿ, ಎಸ್.ಪಿ.ಮಹದೇವಸ್ವಾಮಿ ಸಿಂಧುವಳ್ಳಿ, ಮೂರ್ತಿ ಮಾರ್ಬಳ್ಳಿ, ದೂರ ರಾಜಣ್ಣ, ಎಚ್.ಎಂ.ಸುನಂದರಾಜು, ಮೂರ್ತಿ ಮಾರ್ಬಳ್ಳಿ, ದೂರ ರಾಜಣ್ಣ, ಎಚ್.ಎಂ.ಸುನಂದರಾಜು, ಲೀಲಾ ಪಂಪಾಪತಿ, ಪುಷ್ಪಲತಾ, ಸುಲೋಚನ ಆರಾಧ್ಯ, ಮಂಜು ಭಾರತೀರಾಜು ಇನ್ನಿತರರು ಉಪಸ್ಥಿತರಿದ್ದರು.