ಇನಕಲ್ ಬಸವರಾಜು ನೇತೃತ್ವದ ತಂಡದಿಂದ ಚುನಾವಣಾ ಪ್ರಾಣಾಳಿಕೆಯ ಕರಪತ್ರ ಬಿಡುಗಡೆ

ನಂದಿನಿ ಮೈಸೂರು

ಜು. 21 ರಂದು ನಡೆಯಲಿರುವ
ಅಖಿಲ ಭಾರತ ವೀರಶೈವ ಲಿಂಗಾಯುತ ಮಹಾಸಭಾ ಮೈಸೂರು ಜಿಲ್ಲಾ ಘಟಕದ ಚುನಾವಣೆ ಹಿನ್ನಲೆ ಇನಕಲ್ ಬಸವರಾಜು ನೇತೃತ್ವದ ತಂಡ ಪ್ರಾಣಾಳಿಕೆಯ ಕರಪತ್ರ ಬಿಡುಗಡೆ ಮಾಡಿತು.

ಮೈಸೂರಿನ ಅಗ್ರಹಾರದ ನಟರಾಜ ಕಾಲೇಜು ಸಭಾಂಗಣದಲ್ಲಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಸಭೆ ನಡೆಸಿದರು.

ಇದೇ ಸಂದರ್ಭದಲ್ಲಿ ಇನಕಲ್ ಬಸವರಾಜು ಮಾತನಾಡಿ
ಇದೇ ತಿಂಗಳು ಜುಲೈ 21 ರಂದು ಅಖಿಲ ಭಾರತ ವೀರಶೈವ ಮಹಾಸಭಾ ಮೈಸೂರು
ಜಿಲ್ಲಾ ಘಟಕದ ಅಧ್ಯಕ್ಷ ,ನಿರ್ದೇಶಕ ಸ್ಥಾನಕ್ಕೆ ನಡೆಯುವ ಚುನಾವಣೆ ನಡೆಯುತ್ತಿದೆ.
1 ಅಧ್ಯಕ್ಷ
20 ಪುರುಷರು,10 ಮಹಿಳೆಯರ ಸ್ಥಾನಕ್ಕೆ ನಡೆಯುವ ಚುನಾವಣೆ ಹಿನ್ನೆಲೆ.
ಒಟ್ಟು 31 ಸ್ಥಾನಕ್ಕೆ 53 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಮಾಜದ ಅಭಿವೃದ್ಧಿಗೆ ಇರುವ ಧ್ಯೇಯೋದ್ದೇಶಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ಎಲ್ಲರೂ ಒಟ್ಟು ಗೂಡಿ ಯಾವುದೇ ಭಿನ್ನಾಭಿಪ್ರಾಯ,ರಾಜಕೀಯ ಮಾಡದೆ ಚುನಾವಣೆ ಮಾಡೋಣ ಎಂದು ನಿರ್ಣಯ ಮಾಡಲಾಗಿದೆ.ಸಿಎ ನಿವೇಶನದಲ್ಲಿ ಭವನ ನಿರ್ಮಾಣಕ್ಕೆ ಮುಂದಾಗಲಿದ್ದೇವೆ.ಸಮುದಾಯದ ಎಲ್ಲಾ ಮತ ಭಾಂಧವರು ನಮ್ಮ ತಂಡಕ್ಕೆ ಮತ ಹಾಕುವುದರ ಮೂಲಕ ನಿಮ್ಮ ಸೇವೆಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಸಮುದಾಯದ ಮುಖಂಡರು,ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *