ಮೈಸೂರು:17 ಫೆಬ್ರವರಿ 2022
ನಂದಿನಿ ಮೈಸೂರು
ಕಾಲ ಉರುಳಿತ್ತಿದೆ ಜಗತ್ತು ಬದಲಾಗುತ್ತಿದೆ.ಜಗತ್ತು ಬದಲಾದಂತೆ ನಾವು ಬದಲಾಗುತ್ತಿದ್ದೇವೆ.ಸ್ಪರ್ಧಾತ್ಮಕ ಜಗತ್ತಿನಲ್ಲಿ ಮನುಷ್ಯನ ಕೆಲಸಕ್ಕಿಂತ ಎಲೆಕ್ಟ್ರಾನಿಕ್ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದೆ. ನೀವು ಆರ್ಡರ್ ಮಾಡಿದ್ರೆ ಸಾಕು ಕೆಲವೇ ಕ್ಷಣಗಳಲ್ಲಿ ಕಿಚನ್ ನಿಂದ ನೀವು ಬಯಸಿದ ತಿಂಡಿ ತಿನಿಸು ತಂದುಕೊಡ್ತಾಳೆ ಈಕೆ.
ಸಾಂಪ್ರದಾಯಿಕ ರೇಷ್ಮೇ ಸೀರೆ,ಮೈಸೂರು ಮಲ್ಲಿಗೆ ಮುಡಿದು ಸಾಗುತ್ತಿರುವ ಈಕೆ ಯಾರು ಅಂತಿದ್ದೀರಾ ಆಕೆ ಯಾರಂತಾ ನಾವು ಪರಿಚಯ ಮಾಡಿಕೊಡ್ತೇವೆ ಬನ್ನಿ.
ಸುರದ್ರೂಪಿ ಹೆಂಗಸನ್ನು ಹೋಲುವಂತೆ ಸಾಗುತ್ತಿರುವ ಇದು ರೋಬೋ ಸರ್ವರ್.ಐಷರಾಮಿ ಹೋಟೆಲ್ ರುವ ರೋಬೋ ಸರ್ವರ್ ಈಗ ಅರಮನೆ ನಗರಿ ಮೈಸೂರಿಗೂ ಕಾಲಿಟ್ಟಿದೆ.
ಮೈಸೂರಿನ ಸಿದ್ಧಾರ್ಥ ಹೋಟೆಲ್ ನಲ್ಲಿ ಈಗ ರೋಬೋ ಚಲುವೆಯದ್ದೇ ದರ್ಬಾರ್ ಆಗಿಬಿಟ್ಟಿದೆ. ವಾಯ್ಸ್ ಕಮಾಂಡ್ ನಿಂದ ಹಿಡಿದು ಹಲವು ಆಷ್ಸನ್ಸ್ ಗಳಿರುವ ರೋಬೋ ಸರ್ವರ್ ಅತ್ಯಾಕರ್ಷಕವಾಗಿದೆ.
ಕೊರೊನಾ ಸಮಯದಲ್ಲಿ ಸರ್ವರ್ ಗಳ ಕೊರತೆ ಇತ್ತು. ಈ ಹಿನ್ನೆಲೆ ರೋಬೋ ಸರ್ವರ್ ತರಿಬೇಕೆಂದು ಹೋಟೆಲ್ ಮಾಲೀಕ ಪಿ.ವಿ.ಗಿರಿ ರವರು ಆಸೆ ಹೊಂದಿದ್ರು.ದೆಹಲಿಯಿಂದ ಬರೋಬ್ಬರಿ 2 ವರೆ ಲಕ್ಷ ಕೊಟ್ಟು ರೋಬೋವನ್ನ ಮೈಸೂರಿಗೆ ತರಿಸಿದ್ದೇವೆ..ರೋಬೋ ಗ್ರಾಹಕರಿಗೆ ಸೇವೆ ನೀಡುವುದರ ಜೊತೆಗೆ ಸಾಂಸ್ಕೃತಿಕ ನಗರೀಯ ಪ್ರವಾಸಿ ತಾಣಗಳು,ರಸ್ತೆಗಳು,ದೇವಸ್ಥಾನದ ಹೆಸರು ಸೇರಿದಂತೆ ಮೈಸೂರಿನ ಬಗ್ಗೆ ಮಾಹಿತಿ ನೀಡುವ ತಂತ್ರಜ್ಞಾನ ಇದರಲ್ಲಿದೆ.ಅದನ್ನು ಕೂಡ ಮುಂದಿನದಿನಗಳಲ್ಲಿ ಅಳವಡಿಸುತ್ತೇವೆ.ಈಗ ಒಂದು ರೋಬೋ ತರಿಸಿದ್ದೇವೆ. ಇನ್ನು ಐದು ರೋಬೋಗೆ ಆರ್ಡರ್ ಮಾಡಿದ್ದೇವೆ.
ಕೆಲವೇ ದಿನಗಳಲ್ಲಿ ಅವು ಕೂಡ ಇಲ್ಲಿ ಕಾರ್ಯ ನಿರ್ವಹಿಸುತ್ತದೆ.ಗ್ರಾಹಕರು ಕೂಡ ರೋಬೋ ಸರ್ವಿಸ್ ನೋಡಿ ಖುಷಿಪಡಿತ್ತಿದ್ದಾರೆ ಎಂದು ಉಮೇಶ್ ಮಾಹಿತಿ ನೀಡಿಡರು.
ಒಟ್ಟಾರೆ ಹೇಳುವುದಾದರೆ ಸಾಂಸ್ಕೃತಿಕ ನಗರೀ ಮೈಸೂರು ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಆಗ್ತಾನೇ ಇರುತ್ತದೆ.ಹಾಗೇಯೇ
ಮೈಸೂರಿಗೆ ಹೆಜ್ಜೆ ಹಾಕಿರುವ ರೋಬೋ ಚೆಲುವೆ
ಸರ್ವರ್ ಗಳ ಕೊರೆತೆಯನ್ನು ನೀಗಿಸುವುದರ ಜೊತೆಗೆ ಗ್ರಾಹಕರನ್ನು ಕೂಡ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದಾಳೆ.
ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು