ಮೈಸೂರು:27 ಅಕ್ಟೋಬರ್ 2021
ನ@ದಿನಿ
150 ವರ್ಷಗಳಿಂದ ದೀರ್ಘಕಾಲದ ಕಾಯಿಲೆಗಳಿಗೆ ಗಿಡಮೂಲಿಕೆಯ ಔಷಧ ಸೇವೆಯನ್ನು ಒದಗಿಸುತ್ತಾ ಬಂದಿರುವ ಆರ್.ಜೆ.ಆರ್. ಹರ್ಬಲ್ ಅಸ್ಪತ್ರೆಯೂ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತನ್ನ ನೂತನ ಶಾಖೆ ಆರಂಭಿಸಿದೆ.
ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆ ಕೆ.ಆರ್ ಮೊಹಲ್ಲಾ ನಲ್ಲಿ ಆರಂಭವಾಗಿರುವ ಆರ್.ಜೆ.ಆರ್. ಹರ್ಬಲ್ ಅಸ್ಪತ್ರೆಯ ನೂತನ ಶಾಖೆಯನ್ನ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಮೇಡಮ್ ಸೆಲ್ವಿ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಅರ್.ಜೆ.ಆರ್ ಹರ್ಬಲ್ ಆಸ್ಪತ್ರೆಗೆ ನಾಲ್ಕು ತಲೆಮಾರುಗಳ ಅನುಭವವಿದ್ದು, ಕರ್ನಾಟಕ, ತಮಿಳುನಾಡು, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ 75ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ.ಸುಸಜ್ಜಿತ ಆಸ್ಪತ್ರೆಯಾಗಿದ್ದು ನುರಿತ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ.ಇಲ್ಲಿ ನೀಡುವ ಗಿಡಮೂಲಿಕೆ ಔಷಧಿಯಿಂದ ರೋಗಿಗೆ ಯಾವುದೇ ಅಡ್ಡಪರಿಣಾಮ ಇರುವುದಿಲ್ಲ.ಚಿಕಿತ್ಸೆ ಪಡೆದ ಶೇ 95ರಷ್ಟು ರೋಗಿಗಳು ಗುಣಮುಖರಾಗುವ ಮೂಲಕ ಅಸ್ಪತ್ರೆ ವಿಶ್ವಾಸಾರ್ಹತೆ ಸಂಪಾದಿಸಿದೆ. ಜನರು ಸದುಪಯೋಗಪಡಿಸಿಕೊಳ್ಳುವಂತೆ ಅಸ್ಪತ್ರೆಯ ವೈದ್ಯ ಡಾ. ನಾಗಲಕ್ಷ್ಮಿ ಮಾಹಿತಿ ನೀಡಿದರು.
ನೂತನವಾಗಿ ಆರಂಭವಾಗಿರುವ ಆರ್.ಜೆ.ಆರ್. ಹರ್ಬಲ್ ಅಸ್ಪತ್ರೆಗೆ ಮೊದಲ ದಿನವೇ ಉತ್ತಮ ಸ್ಪಂದನೆ ದೊರೆತಿದೆ.
ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು